ಅನ್ನದಾತರ ಹಿತ ಕಾಯಲು ಸಜ್ಜಾದ ಸ್ಪರ್ಧಿಗಳು

ಪ್ರಜಾ ಪ್ರಗತಿ ರಂಗ, ರೈತ ಸಂಘ, ಹಸಿರುಸೇನೆ ಎಲ್ಲವೂ ಒಟ್ಟಾಗಿ ಭ್ರಷ್ಟರ ವಿರುದ್ಧ ಹೋರಾಟ ನಡೆಸಲಿದೆ. ರೈತರ ಹಿತ ಕಾಯಲು ರಾಜಕೀಯಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಸರ್ವರಿಗೂ ಸಮಪಾಲಿ, ಸರ್ವರಿಗೂ ಸಮಬಾಳು ಎಂಬ ತತ್ವವೇ ಪಕ್ಷದ ಪ್ರಮುಖ ಪ್ರಣಾಳಿಕೆ.
ಇದು ಚುನಾವಣೆಗಾಗಿ ಮಾತ್ರ ಕಟ್ಟಿಕೊಂಡ ಪಕ್ಷವಲ್ಲ. ಚುನಾವಣೆ ನಂತರವೂ ನಾವು ಒಟ್ಟಿಗೆ ಇದ್ದು ಮಹಿಳೆ, ನಿರುದ್ಯೋಗಿ, ದಲಿತರ ಪರ ದುಡಿಯುತ್ತೇವೆ. ರೈತರಿಗೆ ಶೋಷಿತರಿಗೆ ನ್ಯಾಯ ದೊರೆಕಿಸಿಕೊಡುವುದು ನಮ್ಮ ಉದ್ದೇಶ. ನಮ್ಮ ಪಕ್ಷದಲ್ಲಿ 16ಕ್ಕೂ ಅಧಿಕ ರಾಷ್ಟ್ರಮಟ್ಟದ ಸಂಘಟನೆಗಳು ಕೈ ಜೋಡಿಸಿದೆ . ಎಲ್ಲರು ಅವರವರ ಗುರುತಿನಲ್ಲೇ ಸ್ಪರ್ಧಿಸಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಅಸೆಂಬ್ಲಿ ಚುನವಣೆಗೆ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
* ರಾಯಚೂರು: ಸಿಂಧನೂರು: ಅಮೀನ್ ಪಾಷಾ ಜಿದ್ದಗಿ
* ಲಿಂಗಸಗೂರು(ಮೀಸಲು ಕ್ಷೇತ್ರ): ಎಸ್ ಸಿ ರಾಜೀವ್ ಚವಾಣ್
* ಹೊಸಪೇಟೆ: ಕೆ. ಜೈರುದ್ದೀನ್
* ಸಿರಗುಪ್ಪ: ಜಡಿಯಪ್ಪ ದೇಸಾಯಿ
* ಮಾಯಕೊಂಡ: ಚಿನ್ನಸಮುದ್ರ ಶೇಖರನಾಯಕ್
* ಹರಿಹರ: ನಾಗರಾಜ್
* ಕೋಲಾರಜಿಲ್ಲೆ ಶ್ರೀನಿವಾಸಪುರ: ಬೈಚೇಗೌಡ
* ಕೋಲಾರ: ಗಣೇಶ್ ಗೌಡ ಕೋಟೆಗಾನಹಳ್ಳಿ
*ಬೆಂಗಳೂರು ಗ್ರಾಮಾಂತರ-ಆನೇಕಲ್: ಸುರೇಶ್
* ಕುಷ್ಟಗಿ : ನಜೀಸ್ ಸಾಬ್ ಮೂಲೆಮನೆ
* ಚಿಕ್ಕಬಳ್ಳಾಪುರ : ಜಿ.ಎಚ್ ನರಸಿಂಹಪ್ಪ
* ಬಾಗೇಪಲ್ಲಿ : ನಾರಾಯಣ ಸ್ವಾಮಿ
* ಶಿಡ್ಲಘಟ್ಟ : ಚಿತ್ರಹಳ್ಳಿ ಬೈರೇಗೌಡ
* ಹೊಳೆನರಸೀಪುರ: ಎ.ಸಿ ರವಿಕುಮಾರ್ ಅನೇಕೆರೆ
* ಚನ್ನರಾಯಪಟ್ಟಣ : ಮಂಚೇಗೌಡ ಅರಳಾಪುರ
* ಅರಸೀಕೆರೆ: ಕೋಡಿಹಳ್ಳಿ ಚಂದ್ರಶೇಖರ್
* ಅರಕಲಗೂಡು : ಯೋಗ ರಮೇಶ್
* ತಿಪಟೂರು: ಡಿ.ಎಸ್ ದೇವರಾಜು ಬೆನಕಾನಹಳ್ಳಿ
* ಶಿಕಾರಿಪುರ : ಇಂದೂಧರ ಅಂಗಡಿ
* ಚಿತ್ರದುರ್ಗ : ಚಿಕ್ಕಬಿದರೆ ನಾಗರಾಜು
* ಇಂಡಿ : ಅಶೋಕ್ ಎಸ್ ಸೋರೆಗಾಂವ್
* ಸಿಂದಗಿ: ಚಂದ್ರೇಗೌಡ ಪಾಟೀಲ್












Click it and Unblock the Notifications