ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ; ಬೆಳೆಗಳ ವಿವರ

ಶಿವಮೊಗ್ಗ, ನವೆಂಬರ್ 27 : ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದಿಂದ ಆಯ್ಕೆಯಾದ ಅಗ್ರಿಕಲ್ಚರ್ ಇನ್‍ಶ್ಯೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ. ಸಂಸ್ಥೆ ಮೂಲಕ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ.

2020-21 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು (PMFBY) ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ. ವಿವಿಧ ಬೆಳೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ.

ಯೋಜನೆಯಡಿ ಬೆಳೆ ವಿಮೆಗಾಗಿ ನೋಂದಣಿ ಮಾಡಿಸಲು ಇರುವ ಅಂತಿಮ ದಿನಾಂಕದ ಒಳಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಬಿತ್ತನೆ/ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೂ ನೋಂದಾಯಿಸಲು ಅವಕಾಶವಿರುತ್ತದೆ.

ರೈತರು ವಿಮೆ ಬಗ್ಗೆ ಹೆಚ್ಚಿನ ವಿವರ ಪಡೆಯಲು ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸಮೀಪವಿರುವ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ವೆಬ್ ಸೈಟ್‍ನಲ್ಲಿಯೂ ವಿವರಗಳು ಇವೆ.

ಹಿಂಗಾರು ಹಂಗಾಮು ಬೆಳೆಗಳು

ಹಿಂಗಾರು ಹಂಗಾಮು ಬೆಳೆಗಳು

2020-21ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಹೋಬಳಿ ಮಟ್ಟಕ್ಕೆ ಶಿಕಾರಿಪುರ ತಾಲೂಕಿನ ಹೊಸೂರು, ಉಡುಗಣಿ ಹೋಬಳಿಗಳಲ್ಲಿ ಮುಸುಕಿನ ಜೋಳ (ನೀರಾವರಿ) ಹಾಗೂ ಸೊರಬ ತಾಲೂಕಿನ ಜಡೆ ಹೋಬಳಿಯಲ್ಲಿ ಹೆಸರು (ಮಳೆ ಆಶ್ರಿತ) ಬೆಳೆಗಳು ಆಯ್ಕೆ ಆಗಿರುತ್ತವೆ. ಗ್ರಾಮ ಪಂಚಾಯತಿ ಮಟ್ಟಕ್ಕೆ ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ, ಬಗನಕಟ್ಟೆ, ಮಾರವಳ್ಳಿ ಹಾಗೂ ಮತ್ತಿಕೋಟೆ ಗ್ರಾಮ ಪಂಚಾಯತಿಗಳಲ್ಲಿ ಸೂರ್ಯಕಾಂತಿ (ನೀರಾವರಿ) ಬೆಳೆಗಳು ಆಯ್ಕೆಯಾಗಿರುತ್ತವೆ.

ಬೇಸಿಗೆ ಹಂಗಾಮಿನ ಬೆಳೆ

ಬೇಸಿಗೆ ಹಂಗಾಮಿನ ಬೆಳೆ

2020-21 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಹೋಬಳಿ ಮಟ್ಟಕ್ಕೆ ಶಿಕಾರಿಪುರ ತಾಲೂಕಿನ ಹೊಸೂರು, ಉಡುಗಣಿ, ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಹೋಬಳಿಗಳಲ್ಲಿ ಸೂರ್ಯಕಾಂತಿ (ನೀರಾವರಿ) ಬೆಳೆಗಳು ಆಯ್ಕೆಯಾಗಿರುತ್ತವೆ. ಹಾಗೂ ಗ್ರಾಮ ಪಂಚಾಯತಿ ಮಟ್ಟಕ್ಕೆ ಭತ್ತ (ನೀರಾವರಿ) ಬೆಳೆಗೆ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿನ ಆಯ್ದ ಗ್ರಾಮ ಪಂಚಾಯತಿಗಳು ಆಯ್ಕೆಯಾಗಿರುತ್ತದೆ.

ಅಂತಿಮ ದಿನಾಂಕದ ವಿವರ

ಅಂತಿಮ ದಿನಾಂಕದ ವಿವರ

ಬೆಳೆ ವಿಮೆಗಾಗಿ ಬೆಳೆಸಾಲ ಪಡೆದ ಮತ್ತು ಪಡೆಯದ ರೈತರು ಈ ಯೋಜನೆಯಡಿ ನೋಂದಾಯಿಸಲು ಹಿಂಗಾರು ಹಂಗಾಮಿನ ಮುಸುಕಿನ ಜೋಳ (ನೀರಾವರಿ) ಮತ್ತು ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ಅಂತಿಮ ದಿನಾಂಕ 30-11-2020 ಹಾಗೂ ಹೆಸರು (ಮಳೆ ಆಶ್ರಿತ) ಬೆಳೆಗೆ ದಿನಾಂಕ 31.12.2020 ಮತ್ತು ಬೇಸಿಗೆ ಹಂಗಾಮಿನ ಭತ್ತ (ನೀರಾವರಿ) ಮತ್ತು ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ದಿನಾಂಕ 01.03.2021 ಅಂತಿಮ ದಿನಾಂಕವಾಗಿದೆ.

ಬೆಳೆಸಾಲ ಪಡೆಯುವ ರೈತರು

ಬೆಳೆಸಾಲ ಪಡೆಯುವ ರೈತರು

ಬೆಳೆ ಸಾಲ ಪಡೆಯುವ ರೈತರನ್ನು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುತ್ತದೆ. ತದನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕೆ 7 ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಬೆಳೆ ಸಾಲ ಪಡೆಯದ ರೈತರು ತಮಗೆ ಹತ್ತಿರವಿರುವ ಬ್ಯಾಂಕ್ / ಆರ್ಥಿಕ ಸಂಸ್ಥೆಗಳು/ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (CSC ಕೇಂದ್ರಗಳು) ನೋಂದಣಿ ಮಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+