ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸೆ.2ರವರೆಗೆ ಶೇ.97ರಷ್ಟು ಭತ್ತ ಬಿತ್ತನೆ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್‌ 04: ಖಾರಿಫ್ ಋತು ಆರಂಭವಾದಾಗಿನಿಂದ ಸೆಪ್ಟಂಬರ್ 2ರವರೆಗೆ ಒಟ್ಟು ನಿರೀಕ್ಷಿತ ಭತ್ತದ ಭೂ ಪ್ರದೇಶದಲ್ಲಿ ಶೇ. 97ರಷ್ಟು ಭತ್ತ ಬಿತ್ತನೆ ಆಗಿದೆ.

ಪ್ರಸಕ್ತ ವರ್ಷ ಒಟ್ಟು 39.7 ಮಿಲಿಯನ್ ಹೆಕ್ಟೇರ್ ಭೂ ಪ್ರದೇಶದಲ್ಲಿ ಭತ್ತ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯ ಖಾರಿಫ್ ಋತುವಿನಲ್ಲಿ ಖಾರಿಫ್ ಮುಖ್ಯ ಬೆಳೆಯಾಗಿರುವ ಭತ್ತ ಬಿತ್ತನೆ ವಿಸ್ತೀರ್ಣ ನಿರೀಕ್ಷಿತ ಗುರಿಗಿಂತ ಶೇ. 6ರಷ್ಟು ಕಡಿಮೆ ಆಗಿತ್ತು.

ಧಾರವಾಡ; 17 ಕೇಂದ್ರಗಳಲ್ಲಿ ಹೆಸರುಕಾಳು ಖರೀದಿ, ರೈತರು ನೋಂದಣಿ ಮಾಡಿಸಿಧಾರವಾಡ; 17 ಕೇಂದ್ರಗಳಲ್ಲಿ ಹೆಸರುಕಾಳು ಖರೀದಿ, ರೈತರು ನೋಂದಣಿ ಮಾಡಿಸಿ

ಭಾರತದ ಪೂರ್ವ ರಾಜ್ಯಗಳಾದ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ (ಯುಪಿ) ಹಾಗೂ ಪಶ್ಚಿಮ ಬಂಗಾಳದಲ್ಲಿ ಹಲವು ಕಾರಣಗಳಿಂದ ಬಿತ್ತನೆಗೆ ತುಸು ಕುಂಠಿತಗೊಂಡಿದೆ. ಅಂತಿಮ ಉತ್ಪಾದನೆಯ ಮೇಲೆ ನಿಶ್ಚಿತತೆ, ಸಷ್ಟತೆ ಇಲ್ಲದಾಗಿದೆ ಕೆಲವು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ. ಈ ವರ್ಷ ಖಾರಿಫ್ ಅಕ್ಕಿ ಉತ್ಪಾದನೆಯಲ್ಲಿ ಸುಮಾರು 6ರಿಂದ 10ಮಿಲಿಯನ್ ಟನ್ ಕುಸಿತ ಕಂಡಿದೆ. 2021ರ ಖಾರಿಫ್ ಋತುವಿನ ಅವಧಿಯಲ್ಲಿ ಭಾರತವು 118 ಮಿಲಿಯನ್ ಟನ್ಗಳಷ್ಟು ಅಕ್ಕಿಯನ್ನು ಉತ್ಪಾದಿಸಿತ್ತು.

ಇನ್ನೂ ನೈಋತ್ಯ ಮುಂಗಾರು ಭಾರತದ ಮಧ್ಯ ಭಾಗಗದಲ್ಲಿ, ಪಶ್ಚಿಮ ಮತ್ತು ಭಾರತದ ದಕ್ಷಿಣ ಭಾಗಗಳಲ್ಲಿ ಆರಂಭಿಕ ಹಂತದಲ್ಲಿ ಸಕ್ರಿಯವಾಗದೇ ತಡವಾಗಿ ಚುರುಕುಗೊಳ್ಳುವುದು ಸಹ ಭತ್ತ ಬಿತ್ತನೆ ಹಿನ್ನಡೆಗೆ ಕಾರಣವಾಗಿದೆ. ಈ ಹವಾಮಾನ ಬದಲಾಣೆಯು ಬೆಳೆದು ನಿಂತ ಇನ್ನಿತರ ಬೆಳೆಗಳ ಕೊಯ್ಲು, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಒಮ್ಮೊಮ್ಮೆ ಬೆಳೆ ನಾಶವೂ ಆಗುತ್ತದೆ.

ಈ ಮಧ್ಯೆ ಸುಗ್ಗಿಯ ಋತುವಿನಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿನ ಮಳೆ ಕೊರತೆಯು ಸಹ ಭತ್ತದ ಬಿತ್ತನೆ, ಈ ಬಾರಿಯ ಅಕ್ಕಿ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.

51.8 ಮೆ.ಟನ್ ಅಕ್ಕಿ ಸಂಗ್ರಹಣೆ ಗುರಿ

51.8 ಮೆ.ಟನ್ ಅಕ್ಕಿ ಸಂಗ್ರಹಣೆ ಗುರಿ

2022-23ರ ಸಾಲಿಗೆ ಅಕ್ಕಿ ಪೂರೈಕೆಗಾಗಿ ಅಕ್ಟೋಬರ್‌ನಿಂದ ಪ್ರಾರಂಭವಾಗುವ ಸಂಗ್ರಹಣಾ ಋತುವಿನಲ್ಲಿ 51.8 ಮೆ.ಟನ್ ಅಕ್ಕಿಯನ್ನು ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಈ ಮಿತಿಯನ್ನು ಕಳೆದ ವಾರ ನಿಗದಿಪಡಿಸಲಾಗಿದೆ. ಕಳೆದ 2021-22ರಲ್ಲಿ ಅಂದರೆ ಈಗಾಗಲೇ ಸಂಗ್ರಹಿಟ್ಟುಕೊಂಡಿದ್ದ 50.98 ಮೆಟ್ರಿಕ್ ಟನ್‌ಗಿಂತ ಸ್ವಲ್ಪ ಹೆಚ್ಚು ಗುರಿ ಈ ಬಾರಿ ಇಟ್ಟುಕೊಳ್ಳಲಾಗಿದೆ.

ರೈತರಿಗೆ ವಂಚಿಸುವವರ ಮೇಲೆ ಅಧಿಕಾರಿಗಳು ಸದಾ ಕಣ್ಣಿಟ್ಟಿರಬೇಕು: ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆರೈತರಿಗೆ ವಂಚಿಸುವವರ ಮೇಲೆ ಅಧಿಕಾರಿಗಳು ಸದಾ ಕಣ್ಣಿಟ್ಟಿರಬೇಕು: ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ

ಅರ್ಥಶಾಸ್ತ್ರಜ್ಞರು ಹೇಳಿದ್ದೇನು?

ಅರ್ಥಶಾಸ್ತ್ರಜ್ಞರು ಹೇಳಿದ್ದೇನು?

ಭತ್ತ ಬಿತ್ತನೆ ಕುರಿತು ಪ್ರತಿಕ್ರಿಯಿಸಿರುವ ಬಾರ್ಕ್ಲೇಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಭಾರತೀಯ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ ಅವರು, ಭತ್ತ ಬಿತ್ತನೆಯ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನಿರಂತರ ಮಳೆ ಕೊರತೆ ಉಂಟಾಗಿದೆ. ತಜ್ಞರು ಈ ವರ್ಷ ಭತ್ತದ ಉತ್ಪಾದನೆಯನ್ನು ಕಳೆದ ವರ್ಷಕ್ಕಿಂತ 10 ಮೆಟ್ರಿಕ್ ಟನ್ ಕಡಿಮೆ ಅಂದರೆ ಕನಿಷ್ಠ 6ರಷ್ಟು ಕಡಿಮೆ ಆಗಿದೆ ಎಂದು ಅಂದಾಜಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಕಿ ರಫ್ತಿನ ಮೇಲೆ ಪರಿಣಾಮ ಭೀರುವ ಸಾಧ್ಯತೆ

ಅಕ್ಕಿ ರಫ್ತಿನ ಮೇಲೆ ಪರಿಣಾಮ ಭೀರುವ ಸಾಧ್ಯತೆ

ಈ ವರ್ಷದ ಅಕ್ಕಿ ಉತ್ಪಾದನೆಯಲ್ಲಿನ ಇಳಿಕೆ ಪ್ರಮಾಣವು 2022-23ರ ದ್ವಿತೀಯಾರ್ಧಕ್ಕೆ ಉಚಿತ ಪಡಿತರ ಯೋಜನೆಯ ವಿಸ್ತರಣೆಯು ಭಾರತದ ಅಕ್ಕಿ ರಫ್ತಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕುರಿತು ಭಾರತದಿಂದ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ ಹೇಳಿದ್ದಾರೆ.

ಭತ್ತದ ಜತೆಗೆ ಉಳಿದ ಖಾರಿಫ್ ಬೆಳೆಗಳ ಬಿತ್ತನೆಯಲ್ಲಿ ಈವರೆಗೆ (ಸೆಪ್ಟೆಂಬರ್ 2) 106.92 ಮಿಲಿಯನ್ ಹೆಕ್ಟೇರ್. ಇದು ಕಳೆದ ವರ್ಷಕ್ಕಿಂತ ಕೇವಲ 1.27 ಶೇಕಡಾ ಕಡಿಮೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಎರಡನೇ ಹಂತದ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಮುಂಗಾರು ದೇಶದಲ್ಲಿ ಹಂತ ಹಂತವಾಗಿ ದುರ್ಬಲವಾಗಲಿದೆ. ತಿಂಗಳಾಂತ್ಯಕ್ಕೆ ಹಿಂಗಾರು ಆಗಮಿಸಲಿದೆ ಎಂದು ಹೇಳಿದೆ.

ಜಾರ್ಖಂಡ್‌ನಲ್ಲಿ ಒಣ ಹವೆ ಸಾಧ್ಯತೆ

ಜಾರ್ಖಂಡ್‌ನಲ್ಲಿ ಒಣ ಹವೆ ಸಾಧ್ಯತೆ

ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಪೂರ್ವ ಮತ್ತು ಈಶಾನ್ಯ ಭಾರತವನ್ನು ಹೊರತುಪಡಿಸಿದರೆ ಜಾರ್ಖಂಡ್ ನ ಕೆಲವು ಭಾಗ ಒಣ ವಾತಾವರಣ ರೀತಿಯಲ್ಲಿ ಉಳಿಯಲಿದೆ. ಮುಂಗಾರು ಮಳೆ ಪದೇ ಪದೆ ದೇಶದಲ್ಲಿ ಸಕ್ರಿಯವಾಗುತ್ತಿರುವುದರಿಂದ ಕಳೆದ ವಾರದ ಮಳೆ ಮುನ್ಸೂಚನೆ ಹಿಂತೆಗದುಕೊಳ್ಳಲಾಗಿದೆ. ಮುಂದಿನ ಹವಾಮಾನ ಬದಲಾವಣೆ ಕುರಿತು ತಿಳಿಸಲಾಗುವುದು ಎಂದು ಐಎಂಡಿ ತಿಳಿಸಿದೆ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

English summary
Paddy sowing 97 per cent on till september 2nd in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X