ಕೆ.ಕೆ. ಹುಂಡಿಯಲ್ಲಿ ಈರುಳ್ಳಿ ನಾಟಿ: 80 ದಿನ ಕಳೆದರೂ ಬಾರದ ಫಸಲು, ಅನ್ನದಾತ ಕಂಗಾಲು

ಚಾಮರಾಜನಗರ, ಜನವರಿ, 15: ಬಿತ್ತನೆ ಈರುಳ್ಳಿ ನಾಟಿ ಮಾಡಿ 80 ದಿನವಾದರು ಫಸಲು ಬರದೆ ರೈತ ಕಂಗಾಲಾಗಿರುವ ಘಟನೆ ತಾಲೂಕಿನ ಕಡುವಿನಕಟ್ಟೆ ಹುಂಡಿಯಲ್ಲಿ ನಡೆದಿದೆ.

ಗ್ರಾಮದ ಲೇಟ್ ಜವನೇಗೌಡರ ಪುತ್ರರರಾದ ನಾಗರಾಜು ಮತ್ತು ಬಸವಣ್ಣ ಅವರು ಮೂರು ಹೆಕ್ಟೇರ್‌ ಜಮೀನಿನಲ್ಲಿ ಸಣ್ಣ ಈರುಳ್ಳಿ ನಾಟಿ ಮಾಡಿ ಫಸಲು ಬರದೇ ಕಂಗಾಲಾಗಿದ್ದಾರೆ. ಬಿತ್ತನೆ ನಾಟಿ ಈರುಳ್ಳಿ ಒಂದು ಕ್ವಿಂಟಾಲ್‌ಗೆ 7 ಸಾವಿರ ರೂಪಾಯಿ ನೀಡಿ, 8 ಕ್ವಿಂಟಾಲ್ ನಾಟಿ ಈರುಳ್ಳಿಯನ್ನು ಖರೀದಿಸಿ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಇದಕ್ಕೆ ಬೇಕಾದ ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಗೊಬ್ಬರದ ಅಂಗಡಿಯವರು ನೀಡುವ ಎಲ್ಲ ರೀತಿಯ ಔಷಧಿಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಹಾಗೆಯೇ ಕಾಲಕಾಲಕ್ಕೆ ಔಷಧಿಯನ್ನು ಸಿಂಪಡಣೆ ಮಾಡಿದ್ದಾರೆ. ಫಸಲು ಬಹಳ ಅದ್ಭುತವಾಗಿದೆ ಬಂದಿದೆ. ಆದರೆ ಈರುಳ್ಳಿ ಮಾತ್ರ ಭೂಮಿಯಲ್ಲಿ ಇಲ್ಲ.

ಮಾಡದ ತಪ್ಪಿಗೆ ರೈತರಿಗೇಕೆ ಶಿಕ್ಷೆ?
ಈರುಳ್ಳಿ ಎಲ್ಲವು ಸಹ ಬೇರಿನಿಂದ ಕೂಡಿದ್ದು, ರೈತನಿಗೆ ತಾನು ಹಾಕಿದ ಈರುಳ್ಳಿ ಸಹ ಕೈಗೆ ಸಿಗದಂತಾಗಿದೆ. ರೈತರಾದ ನಾಗರಾಜು ಮತ್ತು ಬಸವಣ್ಣ ಅವರು ತಮ್ಮ ಮೂರು ಹೆಕ್ಟೇರ್‌ ಜಮೀನಿನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಜಮೀನಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಸಾಲ ಮಾಡಿ ಸಣ್ಣ ಈರುಳ್ಳಿ ಬೆಳೆದಿದ್ದಾರೆ. ಅವರ ನಿರೀಕ್ಷೆಯಂತೆ 80 ದಿನಕ್ಕೆ ಬರುವ ಫಸಲು ಅದಾಯ ಕನಿಷ್ಟ 8 ಲಕ್ಷ ರೂಪಾಯಿ ಆಗಬೇಕಾಗಿತ್ತು. ಈಗಿನ ದರದಲ್ಲಿ ಅಷ್ಟು ಹಣವು ಸಹ ಅವರ ಕೈ ಸೇರಬೇಕಾಗಿತ್ತು. ಬೆಳೆದ ಫಸಲಿನಲ್ಲಿ ಯಾವ ವ್ಯತ್ಯಾಸವಾಗಿದೆ ಎಂಬುವುದೇ ಅವರಿಗೆ ಅರ್ಥವಾಗುತ್ತಿಲ್ಲ. ಕ್ರಮಬದ್ಧವಾಗಿ ಬೇಸಾಯ ಮಾಡಿದ್ದರೂ ಸಹ ಫಸಲು ಬಂದಿಲ್ಲ ಎಂಬ ಚಿಂತೆ ಹಾಗೂ ಸಾಲಗಾರರಿಗೆ ಏನು ಉತ್ತರ ನೀಡಲಿ ಎನ್ನುವ ಆತಂಕದಲ್ಲಿದ್ದಾರೆ.

Onion sowing: KK Hundi Farmers worried by Onion Crop loss

ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ
ಸರ್ಕಾರ ರೈತರಿಗೆ ವ್ಯವಸಾಯ ಮಾಡಿ ಲಾಭ ಪಡೆಯಿರಿ ಎಂದು ಹೇಳುವ ಮೂಲಕ ಅನೇಕ ಸವಲತ್ತು ಮತ್ತು ಮಾರ್ಗದರ್ಶನವನ್ನು ಇಲಾಖೆಯ ಮೂಲಕ ನೀಡುತ್ತಿದೆ. ಆದರೆ, ನಮಗೆ ಇಲಾಖೆಯಿಂದ ಯಾವ ರೀತಿಯ ಸ್ಪಂದನೆಯೂ ಇಲ್ಲ. ಹೀಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಳೆ ಪರಿಶೀಲನೆ ಮಾಡಬೇಕು. ತಮಗಾಗಿರುವ ನಷ್ಟವನ್ನು ಭರಿಸಬೇಕು ಎಂದು ಸಂಕಷ್ಟದಲ್ಲಿರುವ ರೈತರಾದ ನಾಗರಾಜು, ಬಸವಣ್ಣ ಮನವಿ ಮಾಡಿದರು.

Onion sowing: KK Hundi Farmers worried by Onion Crop loss

ರೈತರ ಗೋಳು ಕೇಳುವವರು ಯಾರು?
ಇದು ಒಬ್ಬರ ರೈತರ ಕಥೆ ಅಲ್ಲ. ಬಹಳಷ್ಟು ರೈತರು ಸಣ್ಣ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಆದರೆ ಸರಿಯಾಗಿ ಫಸಲು ಬರುತ್ತಿಲ್ಲ. ಕಟಾವು ಮಾಡುವ ಹಣವೂ ಸಹ ದೊರೆಯುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿ ನಷ್ಟವನ್ನು ಭರಿಸಿಕೊಡಬೇಕು. ಇಂತಹ ಘಟನೆಗಳಿಂದ ರೈತರು ಅತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+