5 ರು. ಗೆ ಕೆಜಿ, ರೈತನ ಕಣ್ಣಲ್ಲಿ ನೀರು ಹಾಕಿಸುತ್ತಿರುವ ಈರುಳ್ಳಿ

ನವದೆಹಲಿ, ಆಗಸ್ಟ್, 29: ಈ ಬಾರಿ ಈರುಳ್ಳಿ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ನಿರೀಕ್ಷೆಗೆ ಮೀರಿದ ಇಳುವರಿಯಿಂದಾಗಿ ಈರುಳ್ಳಿ ಬೆಲೆ ಕುಸಿದಿದೆ.

ಕಳೆದ ವರ್ಷ ಮತ್ತು ಅದಕ್ಕೂ ಹಿಂದಿನ ವರ್ಷ ಬಂಗಾರದ ಬೆಲೆ ದಾಖಲು ಮಾಡಿದ್ದ ಈರುಳ್ಳಿಯನ್ನು ಈಗ ಕೇಳುವವರಿಲ್ಲವಾಗಿದೆ. ವ್ಯಾಪಾರಿಗಳು ಕ್ವಿಂಟಾಲ್ ಈರುಳ್ಳಿಯನ್ನು 5 ರು. ಗೆ ಕೇಳುತ್ತಿದ್ದಾರೆ ಎಂದು ಮಹಾರಾಷ್ಟ್ರದ ಬೆಳೆಗಾರ ಸುಧಾಕರ್ ದಾರಡೆ ಪರಿಸ್ಥಿತಿಯ ವಿವರಣೆ ನೀಡುತ್ತಾರೆ.[ಬಂಗಾರದ ಬೆಲೆ ಬಂದಾಗ ಸಾಮಾಜಿಕ ತಾಣದಲ್ಲಿ ಹರಿದಾಡಿದ್ದ ಈರುಳ್ಳಿ]

onion

ಮಹಾರಾಷ್ಟ್ರದ ಲಾಸಲ್‌ಗಾಂವ್‌ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ ದರ 6 ರು. ಗೆ ಕುಸಿದಿದೆ.ಕಳೆದ ವರ್ಷ ಇದೇ ಅವಧಿವೇಳೆ 48 ರು. ವಹಿವಾಟು ನಡೆಸುತ್ತಿದ್ದ ಈರುಳ್ಳಿ ರೈತನ ಕಣ್ಣಲ್ಲಿ ನೀರು ಹಾಕಿಸುತ್ತಿದೆ.[ಏರ್ ಟೆಲ್ ಸಿಮ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ!]

ಪರಿಹಾರ ಕ್ರಮವಾಗಿ ತಾಜಾ ಮತ್ತು ಸಂಗ್ರಹಿಸಿಟ್ಟ ಈರುಳ್ಳಿ ರಫ್ತಿನ ಮೇಲೆ ಶೇ. 5 ರ ಸುಂಕ ವಿನಾಯಿತಿ ನೀಡಿಕೆ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ಮಾಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕಳೆದ ವರ್ಷ ಶತಕದ ಗಡಿ ಸಮೀಪಿಸಿದ್ದ ಈರುಳ್ಳಿ ಗ್ರಾಹಕನ ಕಣ್ಣಲ್ಲಿ ನೀರು ಹಾಕಿಸಿತ್ತು. ಈ ಬಾರಿ ಬೆಳೆಗಾರನ ಸರದಿ. ಖರ್ಚು ಮಾಡದ ವೆಚ್ಚ ಇರಲಿ ಕೆಲಸ ಮಾಡಿಸಿದ ಕೂಲಿಯೂ ಸಿಗಲ್ಲ ಎಂಬ ಕಾರಣಕ್ಕೆ ರೈತರು ಈರುಳ್ಳಿ ಸಂಸ್ಕರಣೆಯನ್ನು ಕೈಬಿಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+