ಕೆಆರ್ ಎಸ್ ನಲ್ಲಿ ನೀರು ತುಂಬಿದ್ದರೂ ಮಂಡ್ಯದ ನಾಲೆಗಳು ಮಾತ್ರ ಖಾಲಿ ಖಾಲಿ
ಮಂಡ್ಯ, ಆಗಸ್ಟ್ 12: ಭಾರೀ ಮಳೆಯಾಗಿರುವುದರಿಂದ ಕೆಆರ್ ಎಸ್ ಅಣೆಕಟ್ಟೆಗೆ ನೀರೂ ತುಂಬಿಕೊಂಡಿದೆ. 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಹೀಗಿದ್ದರೂ ಮಂಡ್ಯ ಜಿಲ್ಲೆಯ ಕೆರೆ - ಕಟ್ಟೆ ಸೇರಿದಂತೆ ಹಲವೆಡೆ ನಾಲೆಗಳಿಗೆ ಇನ್ನೂ ನೀರು ಸೇರಿಲ್ಲ.
ಮಂಡ್ಯದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ: 24 ಗಂಟೆಯೊಳಗೆ ಇಬ್ಬರ ಸಾವು
ಕೊಡಗಿನಲ್ಲಿ ವರುಣನ ಆರ್ಭಟದ ಪರಿಣಾಮ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಆರ್ ಎಸ್ ಅಣೆಕಟ್ಟೆಯಿಂದ ಒಂದೂವರೆ ಲಕ್ಷ ಅಧಿಕ ಕ್ಯೂಸೆಕ್ ನೀರು ಕಳೆದೆರಡು ದಿನಗಳಿಂದ ತಮಿಳುನಾಡಿಗೆ ಹೋಗುತ್ತಿದೆ. ಆದರೂ ಮಂಡ್ಯದ ನಾಲೆಗಳು, ಕೆರೆ ಕಟ್ಟೆಗಳಿಗೆ ನೀರಿಲ್ಲ. ಸದ್ಯ ಮಂಡ್ಯ ವಿಸಿ ನಾಲೆ ಸೇರಿದಂತೆ ಎಲ್ಲ ನಾಲೆಗಳಿಗೆ ನೀರು ಬಿಟ್ಟುಕೊಳ್ಳಬಹುದು. ದುರದೃಷ್ಟವಶಾತ್ ಮದ್ದೂರು, ಮಳವಳ್ಳಿ, ಕೆಎಂ ದೊಡ್ಡಿ ನಾಲೆಯ ಕೊನೆಯ ಭಾಗಗಳಿಗೆ ಇನ್ನೂ ನೀರು ತಲುಪಿಲ್ಲ. ಈಗಲಾದರೂ ನಾಲೆಗಳಿಗೆ ನೀರು ಬಿಟ್ಟು ಕೊಟ್ಟರೆ ಕೊನೆ ಭಾಗಕ್ಕೆ ನೀರು ಕೊಡಲು ಸಾಧ್ಯವಾಗುತ್ತದೆ. ಆದರೆ ಅಂತಹ ಯಾವ ಪ್ರಯತ್ನವೂ ನಡೆಯುತ್ತಿಲ್ಲ.

ಕೆ.ಆರ್.ನಗರದಲ್ಲಿ ನಾಲೆ ಒಡೆದು ಭತ್ತ, ಕಬ್ಬು ನಾಶ
ಮಂಡ್ಯ ಜಿಲ್ಲೆಯಲ್ಲಿ ಮಳೆಯ ಅಭಾವವಿದೆ. ವಾಡಿಕೆಗಿಂತ ಶೇ 14ರಷ್ಟು ಮಳೆಯ ಕೊರತೆ ಇದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಕನಿಷ್ಠ ಪಕ್ಷ ನೀರಾವರಿ ಪ್ರದೇಶದಲ್ಲಾದರೂ ನಾಲೆಗಳ ಮೂಲಕ ನೀರು ಹರಿಸಿ ಬೆಳೆ ಬೆಳೆಯಲು ಅವಕಾಶ ಮಾಡಿ ಕೊಡಬಹುದಾಗಿತ್ತು. ಆದರೆ ಅಂಥ ಪ್ರಯತ್ನವನ್ನು ನಡೆಸಿಲ್ಲ
ಅಣೆಕಟ್ಟು ನಮ್ಮದು, ನೀರು ಅವರಿಗೆ, ಇದು ಎಷ್ಟು ಸರಿ ಎಂಬುದು ಇಲ್ಲಿನ ರೈತರ ವಾದ. ಈ ಹಿಂದೆ ಮಂಡ್ಯದ ನಾಲೆಗಳಿಗೆ ಜುಲೈ 15 ರಿಂದ ಆಗಸ್ಟ್ 2 ರವರೆಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ತಿಂಗಳುಗಟ್ಟಲೆ ಹೋರಾಟ ಮಾಡಬೇಕಾಯಿತು. ಆದರೆ ತಮಿಳುನಾಡಿಗೆ ಈಗಾಗಲೇ 10-12 ಟಿಎಂಸಿ ನೀರನ್ನು ಬಿಡಲಾಯಿದೆ.

ಕಳೆದೊಂದು ವಾರದಿಂದ ರಾಜ್ಯದ ಎಲ್ಲೆಡೆ ಮಳೆಯಾಗುತ್ತಿದೆ. ಆದರೆ ಮಂಡ್ಯದಲ್ಲಿ ಸಮರ್ಪಕವಾಗಿ ಆಗಿಲ್ಲ. ಕೆಆರ್ ಎಸ್ ನಿಂದ ಒಂದು ಲಕ್ಷ ಕ್ಯೂಸೆಕ್ ನೀರು ತಮಿಳುನಾಡಿನತ್ತ ಹರಿದು ಹೋಗುತ್ತಿದ್ದರೂ, ರೈತರ ಅನುಕೂಲಕ್ಕಾಗಿ ನಾಲೆಗಳಿಗೆ, ಕೆರೆ - ಕಟ್ಟೆಗಳಿಗೆ ಹನಿ ನೀರೂ ಸೇರುತ್ತಿಲ್ಲ. ತಮಿಳುನಾಡಿಗೆ ಸಮೃದ್ಧಿಯಾಗಿ ನೀರು ಬಿಡುವ ವೇಳೆಯಲ್ಲಾದರೂ ನಮ್ಮ ನಾಲೆಗಳಿಗೆ ನೀರು ಹರಿಸಿದರೆ ಉಪಕಾರ ಮಾಡಿದಂತಾಗುತ್ತದೆ ಎಂದು ಬೇಸರದಿಂದ ನುಡಿಯುತ್ತಿದ್ದಾರೆ ಅನ್ನದಾತರು.












Click it and Unblock the Notifications