ಜಲಾವೃತವಾಯ್ತು ದಸರೆಯ ಪ್ರಸಿದ್ಧ ಫಲ-ಪುಷ್ಪ ಪ್ರದರ್ಶನ!

ಮೈಸೂರು, ಸೆಪ್ಟೆಂಬರ್ 27: ದಸರಾ ಸಂಭ್ರಮದ ಗುಂಗಿನಲ್ಲಿದ್ದ ಮೈಸೂರಿಗರಿಗೆ ನಿನ್ನೆ ಸಂಜೆಯಿಂದ ಸುರಿದ ಭಾರೀ ಮಳೆಗೆ ಶಾಕ್ ಆದಂತಿದೆ. ದಸರೆಯ ಮುಖ್ಯ ಆಕರ್ಷಣೆ ಪ್ಲವರ್ ಶೋ ಹಾಗೂ ವಸ್ತುಪ್ರದರ್ಶನ. ಆದರೆ ಇಲ್ಲಿಯೇ ನೀರು ನುಗ್ಗಿದ್ದು ಎಲ್ಲವೂ ಜಲಾವೃತವಾದಂತಿದೆ.

ವೈಭವದ ದಸರಾ ವಿಶೇಷ ಪುಟ

ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಲಾದ ಫಲಪುಷ್ಪ ಮೇಳವಂತೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿತ್ತು. ಇದೀಗ ಮಂಗಳವಾರ ಸುರಿದ ಭಾರಿ ಮಳೆ ಪುಷ್ಪಪ್ರದರ್ಶನದ ಕುಪ್ಪಣ್ಣ ಪಾರ್ಕ್ ನಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕುಪ್ಪಣ್ಣಪಾರ್ಕ್ ನಲ್ಲಿ ಸೋಮನಾಥಪುರದ ಶ್ರೀಚನ್ನಕೇಶವ ದೇವಾಲಯವನ್ನು ಮೂವತ್ತೇಳು ಅಡಿ ಅಗಲ, ಹದಿನೆಂಟು ಅಡಿ ಎತ್ತರ ಹಾಗೂ ಹದಿನಾರು ಅಡಿ ಉದ್ದ ವಿಸ್ತೀರ್ಣದಲ್ಲಿ ವಿವಿಧ ಬಣ್ಣದ ಮೂರು ಲಕ್ಷ ಗುಲಾಬಿ ಹೂಗಳಿಂದ ನಿರ್ಮಾಣ ಮಾಡಲಾಗಿತ್ತು. ಭಾರೀ ಮಳೆಗೆ ಹೂಗಳು ಕೊಳೆತು ಉದುರಲಾರಂಭಿಸಿದೆ.

Mysusru Dasara flower show loses its beauty by the rain

ಐಫೆಲ್ ಟವರ್ ನ್ನು ಸೇವಂತಿಗೆ ಹೂವಿನಿಂದ ನಿರ್ಮಿಸಲಾಗಿದ್ದು, ಜನರನ್ನು ಆಕರ್ಷಿಸುತ್ತಿತ್ತು. ಭಾರೀ ಮಳೆಗೆ ಹೂಗಳು ನಲುಗಿವೆ. ಉದ್ಯಾನವನದಲ್ಲಿ ಹಲವು ರೀತಿಯ ಹೂಗಿಡಗಳನ್ನು ಇರಿಸಲಾಗಿದ್ದು ಅವೆಲ್ಲ ಜಲಾವೃತವಾಗಿವೆ. ಪ್ರವಾಸಿಗರು ಈಗ ಪುಷ್ಪಪ್ರದರ್ಶನದೊಳಗೆ ಕಾಲಿರಿಸಲು ಸಾಧ್ಯವಾಗದ ರೀತಿಯಲ್ಲಿ ನೀರು ತುಂಬಿಕೊಂಡಿದೆ. ಒಟ್ಟಿನಲ್ಲಿ ಈ ಬಾರಿ ದಸರಾಕ್ಕೆ ಮಳೆರಾಯ ಅವಕೃಪೆ ತೋರಿದ್ದು, ಜನತೆಯನ್ನು ನಿರಾಸೆಗೊಳಿಸಿದ್ದಾನೆ. ಕೆಸರುಮಯವಾದ ನೀರು ಪಾರ್ಕ್ ತುಂಬ ಆವರಿಸಿದೆ.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

Mysusru Dasara flower show loses its beauty by the rain

ವಸ್ತು ಪ್ರದರ್ಶನದಲ್ಲೂ ಮಳೆರಾಯನ ಅಡ್ಡಿ :

ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆ ಮಳೆ ನೀರು ನಿಂತಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ವಸ್ತುಪ್ರದರ್ಶನ ಆವರಣಕ್ಕೆ ಮಳೆ ನೀರು ನುಗ್ಗಿದ್ದು, ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ.
ನೂರಾರು ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದ್ದು, ಜನ್ರು ಪರದಾಡುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+