ಇದು ಸಚಿವ ನಿರಾಣಿ ಬರ್ಥಡೇ ಗಿಫ್ಟ್
ಬೆಂಗಳೂರು:,
ಜೂ.1:ಉದ್ಯೋಗಿಗಳಾಗುವ ಬದಲು ಉದ್ದಿಮೆದಾರರಾಗಿ ಎಂದು ಇಂದು ಹುಟ್ಟು ಹಬ್ಬ ಆಚರಿಸಿಕೊಂಡ ನಿರಾಣಿ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಹೊಂದಿರುವ ಯುವಕರು ನಗರಕ್ಕೆ ಬಂದು ಉದ್ಯೋಗ ಅರಸುವುದರ ಬದಲು, ಸ್ವಂತ ಉದ್ದಿಮೆ ನಡೆಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಸಚಿವರು ಹೇಳಿದರು. ಗ್ರಾಮೀಣ ಭಾಗದ ಜನತೆಯ ಉದ್ಯೋಗ ಬರ ನೀಗಲಿದೆ. ಅವರ ಸಂತೋಷವೆ ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂದು ಸಚಿವರು ನುಡಿದರು. id="toptextpromo">ನೆನ್ನೆ
ಇಡೀ ದಿನ ಜಾಗತಿಕ ಬಂಡವಾಳ ಹೂಡಿಕೆ ಸಮ್ಮೇಳನದ ಕೊನೆ ಕ್ಷಣದ ತಯಾರಿಯನ್ನು ಪರಿಶೀಲಿಸುತ್ತಾ ನಗರದ ಅರಮನೆ ಮೈದಾನದಲ್ಲಿ ಸಚಿವ ನಿರಾಣಿ ಸುತ್ತಾಡಿದ್ದರು. ರಾಜ್ಯಕ್ಕೆ 4.63 ಲಕ್ಷ ಕೋಟಿ ರು ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಇಷ್ಟೊಂದು ಬಂಡವಾಳ ಹರಿವಿನಿಂದ 5.82 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಹೂಡಿಕೆದಾರರ
ಸಮ್ಮೇಳನಕ್ಕೆ ದೇಶದ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಆಹ್ವಾನಿಸಲಾಗಿದೆ. ಒಡಂಬಡಿಕೆ ಮಾಡಿಕೊಂಡ ಯೋಜನೆಗಳಿಗೆ ಹಣಕಾಸಿನ ನೆರವು ಪಡೆಯಲು ಅನುಕೂಲ ಒದಗಿಸುವ ಸಲುವಾಗಿ ಸಮಾವೇಶದ 2ನೇ ದಿನ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.











Click it and Unblock the Notifications