• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಆರೋಗ್ಯ ಸಮಸ್ಯೆ ನೀಗಿಸುವ ಶಕ್ತಿ ರಾಗಿಗೆ ಇದೆ: ಪಿಯುಷ್ ಗೋಯಲ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 06: ಅಪೌಷ್ಠಿಕತೆಯ ಜಾಗತಿಕ ಸಮಸ್ಯೆಯನ್ನು ಪರಿಹರಿಸಲು ಮತ್ತು ಆಹಾರ ಭದ್ರತೆ ಸಮಸ್ಯೆಗಳನ್ನು ಎದುರಿಸುತ್ತಿರುವ ವಿಶ್ವದ ಭಾಗಗಳಿಗೆ ಕೈಗೆಟುಕುವ ಆಹಾರವನ್ನು ಕೊಂಡೊಯ್ಯಲು ರಾಗಿ ಸಹಾಯ ಮಾಡುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.

ವಿಶ್ವಸಂಸ್ಥೆಯು 2023 ವರ್ಷವನ್ನು 'ಅಂತಾರಾಷ್ಟ್ರೀಯ ರಾಗಿ ವರ್ಷ' ಎಂದು ಗೊತ್ತುಪಡಿಸಿದೆ. ಈ ಪ್ರಯುಕ್ತ ನಡೆದ ಪೂರ್ವಭಾವಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ರಾಗಿಯನ್ನು ಜಾಗತಿಕ ಮಾರುಕಟ್ಟೆ ಹೇರಳವಾಗಿ ಮಾರಾಟ ಮಾಡುವ ವಿಚಾರವನ್ನು ಉದ್ಯಮಿಗಳು, ವರ್ತಕರ ಮುಂದೆ ಪ್ರಸ್ತಾಪಿಸಿದ್ದಾರೆ. ಹೊಸ ಮಾರುಕಟ್ಟೆಗಳಲ್ಲಿ ರಾಗಿ ಮಾರಾಟ ವಿಸ್ತರಿಸುವ ಮೂಲಕ ರಾಗಿ ಕೃಷಿಯನ್ನು ಸುಸ್ಥಿರವಾಗಿಸಬೇಕು ಎಂದರು.

ಬುಡಕಟ್ಟು ಜನರಿಗೆ ಮಳೆಗಾಲದಲ್ಲಿ ನೀಡುವ ಆಹಾರ ಸಾಮಗ್ರಿ ನೀಡದ ಜಿಲ್ಲಾಡಳಿತಬುಡಕಟ್ಟು ಜನರಿಗೆ ಮಳೆಗಾಲದಲ್ಲಿ ನೀಡುವ ಆಹಾರ ಸಾಮಗ್ರಿ ನೀಡದ ಜಿಲ್ಲಾಡಳಿತ

ಭಾರತವು ಜಾಗತಿಕ ಮಟ್ಟದಲ್ಲಿ ಶೇ.20ರಷ್ಟು ಭಾರತದ ಮಟ್ಟಿಗೆ ಎಲ್ಲ ಕೃಷಿ ಉತ್ಪಾದನೆಗಳ ಪೈಕಿ ಶೇ.5ರಷ್ಟು ರಾಗಿ ಉತ್ಪಾದಿಸುತ್ತದೆ. ಈ ರಾಗಿಯು ಅಪೌಷ್ಟಿಕತೆಯ ಜಾಗತಿಕ ಸಮಸ್ಯೆ ಪರಿಹರಿಸಲು ಶಕ್ತಿ ಹೊಂದಿದೆ. ಅಷ್ಟೇ ಅಲ್ಲದೇ ಆಹಾರ ಭದ್ರತೆ ಸಮಸ್ಯೆಗಳನ್ನು ಎದುರಿಸುತ್ತಿರುವ ವಿಶ್ವದ ಭಾಗಗಳಿಗೆ ಕೈಗೆಟುಕುವ ಆಹಾರ ಧಾನ್ಯವಾಗಿದೆ. ಮುಖ್ಯವಾಗಿ ರಾಗಿ ಆರೋಗ್ಯಕರವಾದ ಕೃಷಿ ಉತ್ಪನ್ನವಾಗಿದೆ. ವರ್ಷ ಮಧ್ಯಂತರ ಬೆಳೆಯು ಆಗಿರುವ ರಾಗಿಯ ಹುಲ್ಲು ಜಾನುವಾರುಗಳಿಗೆ ಮೇವಾಗಿ ಲಾಭ ನೀಡಲಿದೆ ಎಂದು ಸಚಿವರು ವಿವರಿಸಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಸಂಸ್ಥೆಯು ರಾಗಿ ಉತ್ಪನ್ನಗಳಿಗೆ ಪೂರಕವಾದ 250 ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುತ್ತಿದೆ ಎಂದರು.

ಅತ್ಯಧಿಕ ರಾಗಿ ರಫ್ತಿಗೆ ಗುರಿ ಹೊಂದಿರುವ ಭಾರತ

ಇದೇ ಸಮಾರಂಭದಲ್ಲಿ ಮಾತನಾಡಿದ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಅವರು, ಭಾರತದ ರಾಗಿ ರಫ್ತು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸಕ್ತದಲ್ಲಿ 15 ಮಿಲಿಯನ್ ಡಾಲರ್‌ನಷ್ಟು ರಫ್ತಾಗುತ್ತಿರುವ ರಾಗಿಯನ್ನು ಮುಂದಿನ ದಿನಗಳಲ್ಲಿ ಭಾರತ 100 ಮಿಲಿಯನ್ ಡಾಲರ್‌ ನಷ್ಟು ರಾಗಿ ರಫ್ತಿಗೆ ಗುರಿ ಹೊಂದಿದೆ. ಭಾರತ ಮುಂದಿನ 2-3 ವರ್ಷಗಳಲ್ಲಿ ಈ ಗುರಿಯನ್ನು ಸುಲಭವಾಗಿ ತಲುಪಲಿದೆ ಎಂದು ತಿಳಿಸಿದೆ.

Millets Have Power To Solve Global Health Problems Piyush Goyal Said

ಭಾರತದ ರಾಗಿ ಉತ್ಪಾದಕರು ಭಾಗವಹಿಸುವ 16 ಅಂತಾರಾಷ್ಟ್ರೀಯ ಮೇಳಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಗುರುತಿಸಿದೆ. ಜಾಗತಿಕ ಮಾರುಕಟ್ಟೆಗೆ ರಾಗಿ ತಲುಪಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ಬಾರ್ತ್ವಾಲ್ ಹೇಳಿದರು.

English summary
Millets have the power to solve global health problems Commercial ang Industry Minister Piyush Goyal Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X