Nrega Scheme: ಮಣ್ಣಿನ ತೇವಾಂಶ ಕೊರತೆಗೆ ನರೇಗಾ ಆಸರೆ: ಹೊಲದಲ್ಲಿ ಬದು ಮೊಗದಲ್ಲಿ ನಗು
ರಾಯಚೂರು ಜುಲೈ 24: ರಾಯಚೂರು ತಾಲೂಕಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕೃಷಿ ಇಲಾಖೆಯೊಂದಿಗೆ ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯ ಮತ್ತು ಅಂತರ್ಜಲ ಅಭಿವೃದ್ಧಿಗಾಗಿ, ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.
ರಾಯಚೂರು ತಾಲೂಕಿನಲ್ಲಿ 6 ಹೋಬಳಿಗಳಲ್ಲಿ ಕೃಷಿ ಇಲಾಖೆಯಿಂದ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ಒದಗಿಸಿ, 59 ಬದು ನಿರ್ಮಾಣ ಕಾಮಗಾರಿ ಮಾಡಲಾಗಿದೆ. 13 ಕಾಮಗಾರಿ ಪ್ರಗತಿ ಹಂತದಲ್ಲಿವೆ. ಏಪ್ರಿಲ್ ತಿಂಗಳನಿಂದ ಜುಲೈ ಮೊದಲ ವಾರದವರೆಗೆ 7996 ಮಾನವ ದಿನಗಳನ್ನು ಸೃಜಿಸಿ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳು ಅನುಷ್ಠಾನ ಮಾಡುವುದರೊಂದಿಗೆ ನರೇಗಾ ಕುಟುಂಬಗಳಿಗೆ ಅರ್ಥಿಕ ನಿರ್ವಹಣೆಗೆಯೊಂದಿಗೆ ನೀರಿನ ಸಂರಕ್ಷಣೆಗೆ ಸಹಕಾರಿಯಾಗಿದೆ.

ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಜಾಗೀರ ವೆಂಕಟಪೂರು ಗ್ರಾಮದ ರೈತನಾದ ಶ್ರೀ ತಿಪ್ಪಣ್ಣ ತಂದೆ ಉಮಾಪತಿ ಸರ್ವೆ ನಂಬರ್ 110/4 ರಲ್ಲಿ ತುಂಬಾ ವರ್ಷಗಳಿಂದ ಬದು ಹಾಕದೇ ಸವಕಳಿಯಾಗಿತ್ತು ಹಾಗೂ ಮಳೆ ಕಡಿಮೆ ಆದಾಗ, ಭೂಮಿಯಲ್ಲಿ ತೇವಾಂಶ ಕೊರತೆಯಾಗುತ್ತಿತ್ತು. ಮಹಾತ್ಮ ಗಾಂದಿ ನರೇಗಾ ಯೋಜನೆಯಡಿ ಕಂದಕಗಳು ತೆಗೆದು ಬದುವಿಗೆ ಮಣ್ಣು ಹಾಕಿದ್ದರಿಂದ ಬದು ಗಟ್ಟಿಯಾಗಿದೆ ಮತ್ತು ಕದಕಗಳಲ್ಲಿ ನೀರು ತುಂಬಿಕೊಂಡು, ಮಣ್ಣಿನಲ್ಲಿ ನೀರು ಇಂಗಿಕೊಳ್ಳುವುದರಿಂದ ಕಡಿಮೆ ಮಳೆಯಾದರೂ ಮಣ್ಣಿನಲ್ಲಿ ತೇವಾಂಶ ಕಾಪಾಡುತ್ತದೆ ಮತ್ತು ಕೆಲಸ ಮಾಡಿದ ಕೂಲಿ ಹಣ ಕೂಡ ದೊರೆತಿದೆ ಎಂದು ನರೇಗಾ ಹಾಗೂ ಕೃಷಿ ಇಲಾಖೆಗೆ ಧನ್ಯವಾದಗಳು ತಿಳಿಸಿದ್ದಾರೆ.
ಏನಿದು?
ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿ, ತೆಗೆದ ಗುಂಡಿಗಳಲ್ಲಿ ಮಳೆ ಬಂದಾಗ, ನೀರು ಶೇಖರಣೆಯಾಗಿ ನೀರಿನಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಮಣ್ಣಿನ ಸಂರಕ್ಷಣೆ ಜೊತೆಗೆ ರೈತರಿಗೆ ಸಾಕಷ್ಟು ಪ್ರಯೋಜನಗಳು ಲಭಿಸಲಿದೆ.

ಏನೂ ಮಾಡಬೇಕು:
ರೈತರು ತಮ್ಮ ಹೊಲಗಳಲ್ಲಿ ಕಂದಕ ಬದು ನಿರ್ಮಿಸಲು ಅರ್ಥಿಕ ತೊಂದರೆ ಅನುಭವಿಸುತ್ತಿದ್ದವರಿಗೆ, ನರೇಗಾ ಯೋಜನೆಯಿಂದ ಅನುದಾನ ಸಿಗಲಿದೆ. ಒಂದು ಎಕರೆಯಲ್ಲಿ 15 ಕಂದಕ ಬದುಗಳನ್ನು ತೆಗೆಯಲು ರೂ 14,449/- ಸಾವಿರ ರೂ ಕೂಲಿ ಹಣ ಹಾಗೂ ರೂ 2,500/- ಸಾಮಾಗ್ರಿ ವೆಚ್ಚ ನೀಡುವ ಮೂಲಕ ಉದ್ಯೋಗ ಚೀಟಿದಾರರು ತಮ್ಮ ಜಮೀನಿನನಲ್ಲಿ ಕೆಲಸ ಮಾಡಲು ಉದ್ಯೋಗ ಕಲ್ಪಿಸಲಾಗುತ್ತದೆ.
ಒಂದು ಗುಂಡಿ ನಿರ್ಮಿಸುವ ವಿನ್ಯಾಸ 15. ಅಡಿ ಉದ್ದ, 3 ಅಡಿ ಆಗಲ, 2 ಅಡಿ ಆಳ ಗುಂಡಿ ತೆಗೆಯಬೇಕು.ಒಂದು ಎಕೆರೆಯಲ್ಲಿ 15 ಗುಂಡಿಗಳನ್ನು ನಿರ್ಮಿಸಬಹುದಾಗಿದೆ.
ಬದು ನಿರ್ಮಾಣದ ಅನುಕೂಲಗಳು
ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ10 ರಿಂದ 15 ರಷ್ಟು ಬೆಳೆ ಇಳುವರಿ, ಒಂದು ಕಂದಕ ಬದುವಿನಲ್ಲಿ ಸುಮಾರು 3 ಸಾವಿರ ಲೀಟರನಂತೆ ಒಟ್ಟು 45,000 ಲೀಟರ್ ಭೂಮಿಯಲ್ಲಿ ಇಂಗುವ ಮೂಲಕ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಮುಂದುವರೆದು ಬದು ಬೇಸಾಯಕ್ಕಾಗಿ ರೈತರು ಬದುಗಳ ಮೇಲೆ ತೋಟಗಾರಿಕೆ, ಅರಣ್ಯ ಸಸಿಗಳನ್ನು ನಾಟಿ ಮಾಡಿದಲ್ಲಿ, ಬದುಗಳ ಸ್ಥಿರೀಕರಣ ಹಾಗೂ ಅದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.
ನರೇಗಾ ಯೋಜನೆಯ ವ್ಯಯಕ್ತಿಕ ಕಾಮಗಾರಿಗಳಡಿ ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಣ್ಣು ಮತ್ತು ನೀರು ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಸಿ, ಉತ್ತಮ ಇಳುವರಿಗೆ ಸಹಕಾರಿಯಾಗಲಿದೆ ಎಂದು ತಾಪಂ ಇಓ ಚಂದ್ರಶೇಖರ ಪವಾರ್ ಹೇಳಿದರು












Click it and Unblock the Notifications