ಮಹದಾಯಿ ತೀರ್ಪು ಮುಂದೇನು? ಶೀಘ್ರ ಸರ್ವಪಕ್ಷ ಸಭೆ ಎಂದ ಸಿಎಂ

ಬೆಂಗಳೂರು, ಆಗಸ್ಟ್ 18: ಮಹಾದಾಯಿ ತೀರ್ಪಿನ ಕುರಿತು ಸರ್ವಪಕ್ಷ ಸಭೆಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಹಾದಾಯಿ ತೀರ್ಪು ಪೂರ್ಣ ಸಮಾಧಾನವನ್ನು ನೀಡಿಲ್ಲ, ಕುಡಿಯುವ ಉದ್ದೇಶಕ್ಕಾಗಿ ನೀರು ಕೊಟ್ಟಿರುವುದು ಸತ್ಯ, ಆದರೆ ಮಹಾದಾಯಿ ತೀರ್ಪಿನ ಕುರಿತು ಅಧಿ ಸೂಚನೆ ಹೊರಡಿಸುವವರೆಗೆ ಕಾಮಗಾರಿ ಆರಂಭಿಸಲೂ ಸಾಧ್ಯವಿಲ್ಲ.

ಕೃಷಿ ಅಗತ್ಯಗಳಿಗೆ ನೀರು ಕೊಟ್ಟಿಲ್ಲ, ನಮ್ಮ ಬೇಡಿಕೆ ಎಷ್ಟಿತ್ತೋ ಅಷ್ಟು ನೀರೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ಕ್ರಮ ಏನಾಗಬೇಕು ಎಂಬ ಬಗ್ಗೆ ನಿರ್ಧರಿಸಲು ಇದೇ ವಾರ ಎಲ್ಲ ಪಕ್ಷಗಳ ಮುಖಂಡರನ್ನು ಕರೆದು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Mahadayi row: CM will hold all party meeting soon

ಸೆಪ್ಟೆಂಬರ್‌ ಮೊದಲ ವಾರದ ಬಳಿಕ ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ, ಪ್ರತಿ ಜಿಲ್ಲೆಯಲ್ಲೂ ಒಂದೊಂದು ದಿನ ಇದ್ದು ಜನರ ಅಹವಾಲು ಸ್ವೀಕರಿಸುವುದರೊಂದಿಗೆ ಜಿಲ್ಲಾಡಳಿತದೊಂದಿಗೂ ಸಮಾಲೋಚನೆ ನಡೆಸುತ್ತೇನೆ. ಬೆಳಗಾವಿಯ ಸುವರ್ಣ ಸೌಧಕ್ಕೆ ಕೆಲ ಇಲಾಖೆಗಳನ್ನು ಸ್ತಳಾಂತರಿಸುವ ಪ್ರಕ್ರಿಯೆ ನಡೆದಿದ್ದು ಶೀಘ್ರವೇ ಆ ಕೆಲ ಆರಂಭವಾಗಲಿದೆ ಎಂದು ತಿಳಿಸಿದರು.

ತೀರ್ಪಿನಿಂದಾಗಿ ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ದೊರೆತಿದೆ. ಕುಡಿಯಲು 5.5 ಟಿಎಂಸಿ ಅಡಿ ನೀರು ನೀಡಿದ್ದು, 8.2 ಟಿಎಂಸಿ ಅಡಿ ನೀರನ್ನು ವಿದ್ಯುತ್‌ಗೆ ಉತ್ಪಾದನೆಗೆ ಬಳಸಿಕೊಳ್ಳಲು ಹೇಳಲಾಗಿದೆ. 5.5 ಟಿಎಂಸಿ ಅಡಿ ನೀರಿನಲ್ಲಿ 4 ಟಿಎಂಸಿ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಹಾಗೂ 1.5 ಟಿಎಂಸಿ ಅಡಿ ನೀರನ್ನು ಕಳಸಾ-ಬಂಡೂರಾ ಯೋಜನೆಗೆ ಬಳಸಿಕೊಳ್ಳುವಂತೆ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+