ಲಾಲ್ ಬಾಗ್ ಹೂವಿನ ಅರಮನೆಗೆ ಸ್ವಾಗತ, ಸುಸ್ವಾಗತ
ಬೆಂಗಳೂರು, ಆಗಸ್ಟ್ 6 : ಈ ಬಾರಿ ಲಾಲ್ ಬಾಗ್ ಬಲ್ಲಿ ಬೆಂಗಳೂರು ಅರಮನೆ ತಲೆ ಎತ್ತಿದೆ. ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆ.7ರಿಂದ 16ರ ತನಕ ನಡೆಯಲಿದ್ದು, ಲಕ್ಷ-ಲಕ್ಷ ಹೂಗಳಿಂದ ಬೆಂಗಳೂರು ಅರಮನೆಯನ್ನು ಲಾಲ್ ಬಾಗ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿದೆ.
ಆಗಸ್ಟ್ 7 ರಂದು ಬೆಳಗ್ಗೆ ಮೈಸೂರು ರಾಣಿ ಪ್ರಮೋದಾ ದೇವಿ ಒಡೆಯರ್ ಮತ್ತು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರದರ್ಶನವನ್ನು ಉದ್ಘಾಟಿಸಲು ಆಗಮಿಸಲಿದ್ದಾರೆ.[ಬೆಂಗಳೂರು ಅರಮನೆ ನೋಡಲು ಲಾಲ್ ಬಾಗ್‌ಗೆ ಬನ್ನಿ]
ಆನ್‌ಲೈನ್ ಮೂಲಕವೂ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಟಿಕೆಟ್ ಬುಕ್ ಮಾಡಬಹುದು. www.lalbaghflowershow.in ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಎಲ್ಲ ಮಾರ್ಗದರ್ಶಿ ಸೂತ್ರಗಳು ಸಿಗುತ್ತವೆ. ಲಾಲ್ ಬಾಗ್ ನಲ್ಲಿ ಬೆಂಗಳೂರು ಹೂವಿನ ಅರಮನೆ ಯಾವ ರೀತಿ ನಿರ್ಮಾಣವಾಗುತ್ತಿದೆ ಒಮ್ಮೆ ನೋಡಿಕೊಂಡು ಬರೋಣ...

ಕೆಂಪು ಮತ್ತು ಹಸಿರು ಹೊದಿಕೆಯ ಅರಮನೆ
3 ಲಕ್ಷಕ್ಕೂ ಅಧಿಕ ಡಚ್ ಗುಲಾಬಿ ಹೂಗಳಿಂದ ಬೆಂಗಳೂರು ಅರಮನೆಯನ್ನು ನಿರ್ಮಿಸಲಾಗುತ್ತಿದೆ. 45 ಅಡಿ ಉದ್ದ, 35 ಅಡಿ ಎತ್ತರ ಮತ್ತು 20 ಅಡಿ ಅಗಲದ ಅರಮನೆಯ ಎದುರು ಭಾಗ ಕೆಂಪು ಮತ್ತು ಬಿಳಿ ಹೂಗಳಿಂದ ಕಂಗೋಳಿಸಿದರೆ, ಹಿಂಬದಿಗೆ ಹಸಿರು ಹೊದಿಕೆ ಮಾಡಲಾಗಿದೆ.

ತೋಟಗಾರಿಕಾ ಇಲಾಖೆ ಮಳಿಗೆಗಳು
ತೋಟಗಾರಿಕಾ ಇಲಾಖೆ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸುಮಾರು 150 ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಾಣ ಮಾಡಲಿವೆ. ಹೂ ಗಿಡಗಳು, ಹಣ್ಣು ಮತ್ತು ಟೆರೆಸ್ ನರ್ಸರಿ ಕುರಿತಂತೆ ಸಕಲ ಮಾಹಿತಿ ದೊರೆಯಲಿದೆ.

ಕಳೆದ ವರ್ಷ ಮೈಸೂರು ಅರಮನೆ
ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಪ್ರದರ್ಶನದಲ್ಲಿ ಮೈಸೂರು ಅರಮನೆಯನ್ನು ನಿರ್ಮಿಸಲಾಗಗಿತ್ತು. ಹೂವಿನಿಂದ ಅಲಂಕೃತಗೊಂಡಿದ್ದ ಮೈಸೂರು ಅವರಮನೆಯನ್ನು ಸುಮಾರು 5 ಲಕ್ಷ ಜನ ಕಣ್ಣು ತುಂಬಿಕೊಂಡಿದ್ದರು.

ಒಡೆಯರ್ ಪ್ರತಿಮೆಗಳು
ಮೈಸೂರು ಒಡೆಯರ್ ಅವರ ಪ್ರತಿಮೆಗಳು, ಅಬ್ದುಲ್ ಕಲಾಂ ಮರಳಿನ ಕಲಾಕೃತಿ ಈ ಬಾರಿಯ ಫಲಪುಷ್ಟಪ ಪ್ರದರ್ಶನದ ವಿಶೇಷತೆಗಳಾಗಿವೆ. ಜತೆಗೆ ಸುಮಾರು 200 ಕ್ಕೂ ಅಧಿಕ ಹೂವುಗಳನ್ನು ಒಂದೇ ಜಾಗದಲ್ಲಿ ನಿಂತು ಕಣ್ಣು ತುಂಬಿಕೊಳ್ಳಬಹುದು.

ತೋಟಗಾರಿಕಾ ಇಲಾಖೆ ಸದಾ ಮುಂದು
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ಪ್ರದರ್ಶನದ ಜತೆಗೆ ತೋಟಗಾರಿಕೆ ಇಲಾಖೆ ಮಾವು ಮತ್ತು ಹಲಸಿನ ಮೇಳಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಪ್ ಕಾಮ್ಸ್ ಅಡಿಯಲ್ಲಿ ದ್ರಾಕ್ಷಿ ಮೇಳವವನ್ನು ನಡೆಸಿದೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications