ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ನೂರರ ಸಂಭ್ರಮ

ನೂರನೇ ವರ್ಷಾಚರಣೆಯಲ್ಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ 260ಕ್ಕೂ ಹೆಚ್ಚು ವೈವಿಧ್ಯದ ಹೂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆಕರ್ಷಕ ಅಂಥೋರಿಯಂ, ಆರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಲಿಲ್ಲಿ, ಅಗ್ ಪಾಂಥಸ್, ಸೈಕ್ಲೊಮನ್, ಪೆಟೂನಿಯಾ ಸೇರಿದಂತೆ 100ಕ್ಕೂ ಹೆಚ್ಚು ವರ್ಣಾಕರ್ಷಕ ಹೂಗಳ ವಿನ್ಯಾಸದ ಜೋಡಣೆ ಗಮನ ಸೆಳೆಯಲಿದೆ. [ಗ್ಯಾಲರಿ]
ಆ.5ರಂದು ಮಧ್ಯಾಹ್ನ 3ಕ್ಕೆ ಮೇಯರ್ ಪಿ.ಶಾರದಮ್ಮ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದ ಅನಂತಕುಮಾರ್, ಶಾಸಕ ಡಾ.ಡಿ. ಹೇಮಚಂದ್ರಸಾಗರ್ ಮುಂತಾದವರು ಭಾಗವಹಿಸಲಿದ್ದಾರೆ.
ಆ.6 ಮತ್ತು 7ರಂದು ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಒಣ ಹೂವಿನ ಜೋಡಣೆ ಕಲೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಆಗಸ್ಟ್ 12ರಂದು ವಿಜೇತರೈಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಬಹುಮಾನ ವಿತರಿಸಲಿದ್ದಾರೆ.
ವಾಹನ ನಿಲುಗಡೆ: ಡಾ.ಎಂ.ಎಚ್.ಮರಿಗೌಡ ರಸ್ತೆ ಕಡೆಯಿಂದ ಬರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ಲಘು ವಾಹನಗಳು ಪ್ರವೇಶ ದ್ವಾರ -2ರ (ಕೆ.ಎಚ್.ರಸ್ತೆ) ಮುಖಾಂತರ ಪ್ರವೇಶಿಸಿ, ಇದೇ ಮಾರ್ಗದ ಮೂಲಕ ನಿರ್ಗಮಿಸಲು ಅವಕಾಶ ಕಲ್ಪಿಸಲಾಗಿದೆ. ಸಿದ್ದಾಪುರ ಕಡೆಯಿಂದ ಬರುವ ವಾಹನಗಳಿಗೆ ದ್ವಾರ-3ರ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.












Click it and Unblock the Notifications