ಎಲ್ಲಾ ಖಾಯಲೆಗೂ ರಾಮಬಾಣ ಸಿರಿಧಾನ್ಯ, ಕೊಳ್ಳುವುದಕ್ಕೆ ಇಲ್ಲಿ ಬನ್ನಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ 'ರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳ-2017’ ಏಪ್ರಿಲ್ 28 ಹಾಗೂ 29 ರಂದು ನಡೆಯಲಿದೆ. ಸಿರಿಧಾನ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಈ ಮೇಳ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು, ಏಪ್ರಿಲ್ 28: ಕೃಷಿ ಇಲಾಖೆ ಸಹಯೋಗದಲ್ಲಿ ಸರಕಾರ ಆಯೋಜಿಸಿರುವ ರಾಷ್ಟ್ರೀಯ ವಾಣಿಜ್ಯ 'ಸಾವಯವ ಸಿರಿಧಾನ್ಯ ಮೇಳ-2017'ಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 28 ಹಾಗೂ 29 ರಂದು ಈ ಮೇಳ ನಡೆಯಲಿದೆ. ಸಿರಿಧಾನ್ಯಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಈ ಮೇಳ ಹಮ್ಮಿಕೊಳ್ಳಲಾಗಿದೆ.[ಏ. 29, 30 ರಂದು ಸಿರಿಧಾನ್ಯ ಅಡುಗೆ ಸ್ಪರ್ಧೆ: ನೀವೂ ಭಾಗವಹಿಸಿ!]
ಸಿರಿಧಾನ್ಯಗಳಲ್ಲಿ ಅತೀ ಹೆಚ್ಚಿನ ಪ್ರಮಾಣದ ಪ್ರೊಟೀನ್, ನಾರಿನಾಂಶ, ವಿಟಮಿನ್, ಅಗತ್ಯ ಅಮೈನೊ ಆ್ಯಸಿಡ್, ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ 'ಇ' ಅಂಶಗಳು ಕೂಡಿದ್ದು, ದೇಹಕ್ಕೆ ಹೆಚ್ಚು ಪೌಷ್ಟಿಕಾಂಶ ನೀಡುತ್ತವೆ.
ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಿರಿಧಾನ್ಯಗಳನ್ನು ಹೆಚ್ಚು ಬಳಕೆ ಮಾಡುವ ಮೂಲಕ ಸದೃಢ ಆರೋಗ್ಯ ಹೊಂದುವಲ್ಲಿ ಪರಿಣಾಮಕಾರಿ ಬದಲಾವಣೆ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ, ಕೃಷಿ ಇಲಾಖೆ ಸಹಯೋಗದಲ್ಲಿ ಸಾವಯವ ಸಿರಿಧಾನ್ಯಗಳು-2017 ರಾಷ್ಟ್ರೀಯ ವಾಣಿಜ್ಯ ಮೇಳ ಆಯೋಜಿಸಲಾಗಿದೆ.

ಸಾವಯವ ಬೆಳೆಗಳಿಗೆ ಉತ್ತೇಜನ
ಬೆಳೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದೆ. ಇದರಿಂದ ಜಾಗತಿಕ ಪರಿಸರ ಹಾಗೂ ಮಣ್ಣಿನ ಆರೋಗ್ಯ ಕೆಡುತ್ತಿದ್ದು, ಇದು ಜನರಲ್ಲಿ ಆತಂಕ ಉಂಟು ಮಾಡಿದೆ. ಮತ್ತೊಂದೆಡೆ ಯಾವುದೇ ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿರದೇ ಜಗತ್ತಿನೆಲ್ಲೆಡೆ ಜೀವನಶೈಲಿ ಕಾಯಿಲೆಗಳು ಹೆಚ್ಚಾಗುತ್ತಿವೆ.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಪರಿಸರದ ಬಗೆಗಿನ ಅರಿವು ಮೂಡಿಸಲು ಈ ಮೇಳ ಸಹಾಯಕವಾಗಲಿದೆ. ಜನರಲ್ಲಿ ಸಿರಿಧಾನ್ಯಗಳ ಸೇವನೆಯನ್ನು ಕುರಿತಂತೆ ಆಸಕ್ತಿಯನ್ನೂ ಬೆಳೆಸಲು ಈ ಮೇಳ ಸಹಕಾರಿಯಾಗಲಿದೆ.

ಸಿರಿಧಾನ್ಯಗಳು ಎಂದರೇನು?
ಸಿರಿಧಾನ್ಯಗಳು ಅಂದರೆ ಉತ್ಕ್ರಷ್ಟ ಆಹಾರ. ಸಿರಿಧಾನ್ಯಗಳು ಸಣ್ಣ ಬೀಜ ರೂಪದ ಧಾನ್ಯಗಳಾಗಿದ್ದು, ಇವು ಭಾರತ ಹಾಗೂ ಆಫ್ರಿಕಾ ರಾಷ್ಟ್ರಗಳ ದೇಶೀ ಬೆಳೆಗಳಾಗಿವೆ. ಭಾರತದಲ್ಲಿ ಸಿರಿಧಾನ್ಯಗಳನ್ನು ಅನಾದಿ ಕಾಲದಿಂದಲೂ ಬೆಳೆಯಲಾಗುತ್ತಿದೆ. ಭಾರತದಲ್ಲಿ ಸಿರಿಧಾನ್ಯಳನ್ನು 30 ದಶಲಕ್ಷ ಎಕರೆ ಭೂಪ್ರದೇಶದಲ್ಲಿ ಬೆಳೆಯಲಾಗುತ್ತದೆ.
ಭತ್ತಕ್ಕೆ ಹೋಲಿಸಿದರೆ ಸಿರಿಧಾನ್ಯ ಬೆಳೆಸಲು ಶೇ 70ರಷ್ಟು ಕಡಿಮೆ ನೀರಿನ ಅವಶ್ಯವಿದೆ. ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳ ಅವಶ್ಯವಿಲ್ಲ. ಹೀಗಾಗಿ ಇವು ಸಂಪೂರ್ಣ ಸಾವಯವ ಹಾಗೂ ಪರಿಸರ ಸ್ನೇಹಿ. ಕಡಿಮೆ ಉತ್ಪಾದನಾ ವೆಚ್ಚ ಮತ್ತು ಉತ್ತಮ ಇಳುವರಿ ಹಾಗೂ ಕಡಿಮೆ ಫಲವತ್ತತೆ ಭೂಮಿಯಲ್ಲಿ ಬೆಳೆಯಬಲ್ಲವು.[ಡಿಜಿಟಲ್ ಸ್ಪರ್ಷದೊಂದಿಗೆ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭ]

ಪೋಷಕಾಂಶಗಳ ಕಣಜ
ಸಿರಿಧಾನ್ಯಗಳು ಅತೀ ಹೆಚ್ಚಿನ ಪ್ರಮಾಣದ ಪ್ರೊಟೀನುಗಳು, ನಾರಿನಂಶ, "ಬಿ" ಕಾಂಪ್ಲೆಕ್ಸ್ ವಿಟಮಿನ್ಗಳು, ಅಗತ್ಯ ಅಮೈನೊ ಆ್ಯಸಿಡ್ಗಳು, ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ "ಇ" ಅಂಶಗಳಿಂದ ಕೂಡಿದ್ದು ಹೆಚ್ಚು ಪೌಷ್ಟಿಕವಾಗಿವೆ. ಸಿರಿಧಾನ್ಯಗಳಲ್ಲಿ ಕಬ್ಬಿಣಾಂಶ, ಮೆಗ್ನೀಸಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಸಿಯಂ ಹಾಗೂ ಪೊಟ್ಯಾಸಿಯಂ ಅಂಶಗಳು ಹೇರಳವಾಗಿರುತ್ತವೆ.
ಇತ್ತೀಚಿನ ದಿನಗಳಲ್ಲಿ, ಸಣ್ಣ-ಬೀಜಗಳ ಗುಂಪಿಗೆ (highly variable small-seeded gras) ಸೇರಿದ ಸಿರಿಧಾನ್ಯಗಳನ್ನು "ಅತ್ಯುತ್ಕೃಷ್ಟ ಆಹಾರ" (super food) ಎಂದೇ ಪರಿಣಿಸಲಾಗಿದೆ. ಈ ಗ್ಲುಟೆನ್ಮುಕ್ತ ಧಾನ್ಯಗಳು ಅತೀ ಹೆಚ್ಚು ನಾರು, ಕ್ಯಾಲ್ಸಿಯಂ, ಪ್ರೋಟೀನುಗಳು ಹಾಗೂ ಖನಿಜಾಂಶಗಳನ್ನು ಹೊಂದಿವೆ.

ಆರೋಗ್ಯ ಲಾಭಗಳು
• ಹೆಚ್ಚಿನ ನಾರಿನಾಂಶ ಹಸಿವನ್ನು ನೀಗಿಸುತ್ತದೆ ಹಾಗೂ ಬೊಜ್ಜನ್ನು ಕಡಿಮೆಗೊಳಿಸುತ್ತದೆ.
• ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ.
• ಪಿತ್ತಗಲ್ಲು (gallstones) ಹಾಗೂ ಹೊಟ್ಟೆಯ ಹುಣ್ಣುಗಳನ್ನು ತಡೆಗಟ್ಟುವಲ್ಲಿ ಹಾಗೂ ಅವುಗಳ ಅದರ ಚಿಕಿತ್ಸೆಗೆ ಲಾಭಕಾರಿ.
• ರಕ್ತಹೀನತೆ, ಪಿತ್ತಜನಕಾಂಗದ ತೊಂದರೆ ಹಾಗೂ ಅಸ್ತಮಾ ಕಾಯಿಲೆಯನ್ನು ಕಡಿಮೆಗೊಳಿಸುತ್ತದೆ.
• ಇದರ ಹೈಪೊ ಅಲೆರ್ಜಿಕ್ ಗುಣಗಳು ಅಲರ್ಜಿಯನ್ನು ತಡೆಗಟ್ಟಬಲ್ಲದು.
• ರಕ್ತದ ಗ್ಲೂಕೋಸ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಹಾಗೂ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆಗೊಳಿಸುತ್ತದೆ.
• ಇದರ ಆ್ಯಂಟಿ-ಆಕ್ಸಿಡೆಂಟ್ಗಳು ಉತ್ಕರ್ಷಣ ಒತ್ತಡವನ್ನು (oxidative stress) ಕಡಿಮೆಗೊಳಿಸುತ್ತದೆ.
• ಕ್ಯಾನ್ಸರ್ ಸಂಭವವನ್ನು ಕಡಿಮೆಗೊಳಿಸುತ್ತದೆ.
• ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.

ಸಾವಯವ ಮತ್ತು ಸಿರಿಧಾನ್ಯ ಮೇಳದ ವಿಶೇಷಗಳು
ಇದೊಂದು ರಾಷ್ಟ್ರಮಟ್ಟದ ಸಮಾವೇಶವಾಗಿದ್ದು, ಕೃಷಿ, ತೋಟಗಾರಿಕೆ, ಸಂಸ್ಕರಣೆ ಹಾಗೂ ಮಾರಾಟ ಕ್ಷೇತ್ರದಲ್ಲಿ ಬೃಹತ್ ಅವಕಾಶಗಳನ್ನು ಕಲ್ಪಿಸುವ ಅತ್ಯುತ್ತಮ ವೇದಿಕೆಯಾಗಿದೆ.
ಈ ಮೇಳದಲ್ಲಿ ಸಾವಯವ ಕೃಷಿಕರು, ರೈತರ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಖರೀದಿದಾರರು, ರಫ್ತುದಾರರು, ಮೌಲ್ಯಾಧಾರಿತ ಸಾವಯವ ಉತ್ಪನ್ನಗಳ ತಯಾರಕರು, ಹೋಟೆಲ್ ಉದ್ಯಮಿಗಳು, ಕೃಷಿ ಉಪಕರಣಗಳ ತಯಾರಕರು ಸೇರಲಿದ್ದಾರೆ.
ಇದರ ಜತೆಗೆ ತಮ್ಮ ಉತ್ಪನ್ನಗಳನ್ನು ಹಾಗೂ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿನ ತಮ್ಮ ಪರಿಣಿತಿಗಳನ್ನು ಪ್ರದರ್ಶಿಸಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಜ್ಞಾನ ವಿನಿಮಯಕ್ಕೆ ವೇದಿಕೆ
ಈ ಮೇಳವು ಎಲ್ಲ ಸಾವಯವ ಭಾಗೀದಾರರಿಗೆ ಸಾವಯವ ಕೃಷಿಯ ವ್ಯಾಪಾರ, ವಹಿವಾಟು ಕುರಿತು ಮಾಹಿತಿ ಹಾಗೂ ಜ್ಞಾನ ವಿನಿಮಯವನ್ನು ಪ್ರೋತ್ಸಾಹಿಸುವ ಪ್ರಮುಖ ವೇದಿಕೆಯಾಗಲಿದೆ. ಜೊತೆಗೆ, ಉತ್ಪಾದಕರು ಹಾಗೂ ಮಾರಾಟಗಾರರ ನಡುವಿನ ಅಂತರವನ್ನು ಕಡಿಮೆ ಮಾಡಿ ನೇರ ಸಂಪರ್ಕ ಕಲ್ಪಿಸುವತ್ತ ಸಹಕಾರಿಯಾಗಲಿದೆ.
ರಾಜ್ಯದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ರೈತರು ಸಂಘಟಿತರಾಗಿ 14 ಪ್ರಾಂತೀಯ ಒಕ್ಕೂಟಗಳನ್ನು ರಚಿಸಿಕೊಂಡಿರುತ್ತಾರೆ. ಇವರು ಈಗಾಗಲೇ ವೈವಿಧ್ಯಮಯ ಸಾವಯವ ಉತ್ಪನ್ನಗಳನ್ನು ಮತ್ತು ಸಿರಿಧಾನ್ಯಗಳನ್ನು ಉತ್ಪಾದಿಸುತ್ತಿದ್ದಾರೆ. ಈ ವಾಣಿಜ್ಯ ಮೇಳವು ರೈತರ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಸುಲಭ ಮತ್ತು ಉತ್ತಮ ವೇದಿಕೆಯಾಗಿದೆ. ಸಾವಯವ ಮತ್ತು ಸಿರಿಧಾನ್ಯಗಳ ಅಗತ್ಯಗಳಿಗೆ ಇದು ಅತ್ಯುತ್ತಮ ಅವಕಾಶ ಕಲ್ಪಿಸುತ್ತದೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications