• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದ ವಿ. ಸಿ. ಫಾರಂನಲ್ಲಿ ಡಿ. 2, 3ರಂದು ಕೃಷಿ ಮೇಳ

|
Google Oneindia Kannada News

ಮಂಡ್ಯ, ನವೆಂಬರ್ 30; ಮಂಡ್ಯದ ವಿ. ಸಿ. ಫಾರಂನ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಡಿಸೆಂಬರ್ 2 ಹಾಗೂ 3 ರಂದು ಕೃಷಿ ಮೇಳ ಆಯೋಜನೆ ಮಾಡಲಾಗಿದೆ.

ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನ ನಿರ್ದೇಶಕ ಡಾ. ಎನ್. ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದರು. ರೈತರಿಗೆ ಮಾಹಿತಿ ನೀಡುವ ಕೃಷಿ ಮೇಳವನ್ನು ವಿ. ಸಿ. ಫಾರಂ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.

ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಲು ನಿರ್ಣಯ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಲು ನಿರ್ಣಯ

ರೈತರಿಗೆ ಹೊಸ ತಂತ್ರಜ್ಞಾನ ಹಾಗೂ ತಳಿಗಳ ಮಾಹಿತಿ ನೀಡಲಾಗುವುದು. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು. ಐ. ಆರ್. 64 ಭತ್ತದ ತಳಿ ಬಹಳಷ್ಟು ಸ್ಥಳ ಆವರಿಸಿಕೊಂಡಿತ್ತು. ಆದರೆ ಇದರಲ್ಲಿ ಬೆಂಕಿ ರೋಗ ಬರುವ ಸಾಧ್ಯತೆ ಇದೆ. ಬೆಂಕಿ ರೋಗವನ್ನು ತಡೆಗಟ್ಟಿ ಕಡಿಮೆ ಅವಧಿಯಲ್ಲಿ ಬೆಳೆಯುವ ಕೆ. ಎಂ. ಪಿ 225 ಕಡಿಮೆ ಅವಧಿಯಲ್ಲಿ ಬೆಳೆಯುವ ಭತ್ತದ ಸುಧಾರಿತ ತಳಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಗೋಧಿ, ನುಚ್ಚಕ್ಕಿ ರಫ್ತು ನಿರ್ಬಂಧ ತೆಗೆಯಿರಿ, ದೇಶಿ ಕೃಷಿ ಉತ್ಪಾದನೆಗೆ ಆದ್ಯತೆ ನೀಡಿ: ಕೇಂದ್ರಕ್ಕೆ ರೈತರ ಮನವಿ ಗೋಧಿ, ನುಚ್ಚಕ್ಕಿ ರಫ್ತು ನಿರ್ಬಂಧ ತೆಗೆಯಿರಿ, ದೇಶಿ ಕೃಷಿ ಉತ್ಪಾದನೆಗೆ ಆದ್ಯತೆ ನೀಡಿ: ಕೇಂದ್ರಕ್ಕೆ ರೈತರ ಮನವಿ

ಆರ್. ಎನ್. ಆರ್. 15048 ಹೊಸ ಭತ್ತದ ತಳಿಯನ್ನು ಈಗಾಗಲೇ ರೈತರು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಈ ರೀತಿಯ ಹೊಸ ತಳಿಗಳ ಪರಿಚಯ ಹಾಗೂ ಪ್ರಾತ್ಯಕ್ಷಿಕೆಗಳು ಕೃಷಿ ಮೇಳದ ಮುಖ್ಯ ಆಕರ್ಷಣೆಯಾಗಿರುತ್ತದೆ.

ಸಾವಯವ ಕೃಷಿ, ರೈತರ ಹಿತರಕ್ಷಣೆಯಿಂದ ದೇಶ ಸಮೃದ್ಧ: ಯದುವೀರ್ ಸಾವಯವ ಕೃಷಿ, ರೈತರ ಹಿತರಕ್ಷಣೆಯಿಂದ ದೇಶ ಸಮೃದ್ಧ: ಯದುವೀರ್

ಎA. ಎ. ಹೆಚ್. 14-138 ಮುಸುಕಿನ ಜೋಳದ ಹೈಬ್ರೀಡ್ ತಳಿಯಾಗಿದ್ದು ಎಲೆ ಅಂಗಮಾರಿ ರೋಗಕ್ಕೆ ಸಹಿಷ್ಣುತೆ, ಕೇದಿಗೆ ರೋಗಕ್ಕೆ ಸಾಧರಣಾ ಸಹಿಷ್ಣುತೆ ಹೊಂದಿರುತ್ತದೆ. ಇದನ್ನು ಪ್ರದರ್ಶನದಲ್ಲಿ ನೋಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರಲೆ ಎಂಬ ಧಾನ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು ಸಂಪೂರ್ಣ ಒಣ ಪ್ರದೇಶದಲ್ಲಿ ನೀರು ಕಡಿಮೆ ಇರುವಂತ ಜಾಗದಲ್ಲಿಯು ಸಹ ಬೆಳೆಯಬಹುದಾದ ಧಾನ್ಯವಾಗಿದೆ ಇವುಗಳನ್ನು ಮೇಳದಲ್ಲಿ ನೋಡಬಹುದು.

ಸಿ. ಎನ್. ಎಫ್. ಎಸ್-1 ಎಂಬ ಮೇವಿನ ಜೋಳದ ತಳಿ ಅಧಿಕ ನಾರು ಮತ್ತು ಪ್ರೊಟೀನ್ ಅಂಶ ಹೊಂದಿರುತ್ತದೆ ಮತ್ತು ಮೇವಿಗಾಗಿ ಬೆಳೆಯಲಾಗುತ್ತಿದೆ. ಇದನ್ನು ಸಹ ರೈತರಿಗೆ ಪ್ರದರ್ಶನದಲ್ಲಿ ಇಡಲಾಗುವುದು. ಕ್ಷೇತ್ರ ಪ್ರಯೋಗದ ಮೂಲಕ ಭತ್ತದಲ್ಲಿ ಹೈಬ್ರೀಡ್ ತಳಿಯನ್ನ ರೈತರಿಗೆ ಹೊಸದಾಗಿ ಪರಿಚಯಿಸಲಾಗಿದೆ.

Krishi Mela In Mandya VC Farm On December 2 And 3

ವಿ.ಸಿ.ಫಾರಂನಲ್ಲಿ 17,000 ಕ್ಕೂ ಹೆಚ್ಚಿನ ತಳಿಗಳಿವೆ. ರೈತರಿಂದ ಬೇಡಿಕೆ ಇರುವ 100-150 ತಳಿಗಳನ್ನು ಸಂತತಿ ನಾಶವಾಗದಂತೆ ಉಳಿಸಿಕೊಳ್ಳಲಾಗಿದೆ ಅವುಗಳನ್ನು ಸಹ ಕೃಷಿ ಮೇಳದಲ್ಲಿ ನೋಡಬಹುದು.

ಇದೇ ವೇಳೆ ಕೃಷಿ ಮೇಳದ ಲಾಂಛನ ಬಿಡುಗಡೆ ಮಾಡಲಾಯಿತು. ಡೀನ್(ಕೃಷಿ) ಹಾಗೂ ಆವರಣದ ಮುಖ್ಯಸ್ಥ ಡಾ. ಎಸ್. ಎಸ್. ಪ್ರಕಾಶ್, ಕೃಷಿ ಮಹಾವಿದ್ಯಾಲಯದ ವಿಸ್ತೀರ್ಣ ವಿಭಾಗದ ಮುಖ್ಯಸ್ಥರಾದ ಡಾ. ರಂಗನಾಥ್, ಸಹ ವಿಸ್ತಾರಣಾ ನಿರ್ದೇಶಕ ಡಾ. ಡಿ. ರಘುಪತಿ ಮುಂತಾದವರು ಉಪಸ್ಥಿತರಿದ್ದರು.

ಈ ಬಾರಿಯ ಕೃಷಿ ಮೇಳದ ಆಕರ್ಷಣೆಗಳು; ಭತ್ತ ಕುರಿತಂತೆ ಸುಧಾರಿತ ತಳಿಗಳ ಹಾಗೂ ಹೈಬ್ರಿಡ್ ಗಳ ಪ್ರಾತ್ಯಕ್ಷಿಕೆ, ಶ್ರೀ ಪದ್ಧತಿ ಹಾಗೂ ಏರೋಬಿಕ್ ಭತ್ತದ ಬೇಸಾಯ ಪ್ರಾತ್ಯಕ್ಷಿಕೆ, ಡ್ರಮ್ಸ್‌ನಿಂದ ಹಾಗೂ ಯಂತ್ರ ಚಾಲಿತ ನಾಟಿ ಪ್ರಾತ್ಯಕ್ಷಿಕೆ, ಭತ್ತದಲ್ಲಿ ನೇರ ಬಿತ್ತನೆ ಪ್ರಾತ್ಯಕ್ಷಿಕೆ, ಬಿಜೋತ್ಪಾದನಾ ತಾಕುಗಳು, ರಾಗಿ ಸಿರಿಧಾನ್ಯ ಕುರಿತಂತೆ ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ.

English summary
Krishi mela in V C Farm, Mandya on December 2 and 3rd. Mandya and other district farmers can attend krishi mela.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X