ಕೊಡಗಿನ ಕಿತ್ತಳೆ ಗೊತ್ತು! ಕೊಡಗಿನ ಆ್ಯಪಲ್ ಹೇಗೆ?

ಮಡಿಕೇರಿ, ಏಪ್ರಿಲ್ 22: ಕೊಡಗು - ಹೌದು ಈ ಮಂಜಿನ ಊರು ಬೇಸಿಗೆಯಲ್ಲಿ ತುಸು ಹೆಚ್ಚೇ ಜನರಿಗೆ ಆಪ್ಯಾಯಮಾನವಾಗಿರುತ್ತದೆ. ಬೇಸಿಗೆಯ ಬಿಸಿ ತಾಳಲಾರದೆ ದೂರದೂರುಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಕೊಡಗು ಕಡೆ ಮುಖ ಮಾಡಿದರೆ ಸಾಕು. ಅಲ್ಲಿನ ತಂಪಾದ ವಾತಾವರಣ ಅಷ್ಟು ಮಸ್ತ್ ಆಗಿರುತ್ತದೆ.

ಇಂತಹ ವಾತಾವರಣವೇ ಇದೀಗ ಆ್ಯಪಲ್ ಬೆಳೆಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಮುಂದಾಗಿದೆ. ಹೌದು ಕೊಡಗಿನ ಕಿತ್ತಳೆಯ ಹಾಗೆ ಮುಂದಿನ ದಿನಗಳಲ್ಲಿ ಕೊಡಗಿನ ಆ್ಯಪಲ್ ಸಹ ಜಗತ್ಪ್ರಸಿದ್ಧವಾದರೆ ಅಚ್ಚರಿಯಿಲ್ಲ.

ಸೇಬು ಕೃಷಿ: ಹಿಮಾಚಲಕ್ಕಿಂತ ಕರ್ನಾಟಕ ಹೆಚ್ಚು ಪ್ರಶಸ್ತ!:

kodagu-climate-more-suitable-for-apple-cultivation-than-hp
ಆ್ಯಪಲ್ ತವರೂರಾದ ಹಿಮಾಚಲ ಪ್ರದೇಶದ ಹಿರಿಯ ವಿಜ್ಞಾನಿ ಡಾ. ಚಿರಂಜಿತ್ ಪರಮಾರ್ ಅವರೇ ಹೇಳಿರುವಂತೆ ಕರ್ನಾಟಕ ಅದರಲ್ಲೂ ಕೊಡಗಿನ ಹಿತಕರ ವಾತಾವರಣವು ಆ್ಯಪಲ್ ಕೃಷಿಗೆ ಹೇಳಿಮಾಡಿಸಿದಂತಿದೆ.

ರಾಜ್ಯದಲ್ಲಿ ಕೃಷಿ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಡಾ. ಪರಮಾರ್ ಅವರು ತುಮಕೂರು, ಬೆಂಗಳೂರು, ಉಪ್ಪಿನಂಗಡಿ ಮತ್ತು ಸೋಮವಾರ ಪೇಟೆಯಲ್ಲಿ ಸೇಬು ಕೃಷಿ ಕೈಗೊಳ್ಳಲು ಪ್ರಯತ್ನಗಳು ನಡೆಸಿವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸೇಬು ಕೃಷಿ ನಡೆದಿದೆ ಎಂದು ಹೇಳಿದ್ದಾರೆ.

ಅಂದಹಾಗೆ ಸೋಮವಾರಪೇಟೆಯ ಅಬ್ಬುಕಟ್ಟೆ ಸಮೀಪ ಈಗಾಗಲೇ ಸೇಬು ಕೃಷಿ ನಡೆಯುತ್ತಿದೆ. ಇಲ್ಲಿನ ಸೇಬು ಹೆಚ್ಚು ರುಚಿಕರವಾಗಿದೆ. ಕೊಡಗಿನ ಸಿಆರ್ ಶಿವಕುಮಾರ್ ಮತ್ತು ಉಪ್ಪಿನಂಗಡಿಯ ಕೃಷ್ಣ ಶೆಟ್ಟಿ ಸೇಬು ಕೃಷಿಯಲ್ಲಿ ತೊಡಗಿತುವುದು ಸ್ವಾಗತಾರ್ಹ ಎಂದು ಡಾ. ಪರಮಾರ್ ಮೆಚ್ಚುಗೆ ಸೂಚಿಸಿದ್ದಾರೆ.

ಹಾಗೆ ನೋಡಿದರೆ ಕರ್ನಾಟಕದ ಕೆಲ ಪ್ರದೇಶಗಳು ಹಿಮಾಚಲ ಪ್ರದೇಶಕ್ಕಿಂತ ಹೆಚ್ಚು ಪ್ರಶಸ್ತ ಸ್ಥಳಗಳಾಗಿವೆ. ಇಲ್ಲಿನ ವಾತಾವರಣ ಸೇಬು ಕೃಷಿಗೆ ಹಿತಕರವಾಗಿದೆ. ಹಿಮಾಚಲದಲ್ಲಿ ವರ್ಷಕ್ಕೆ ಒಂದು ಬೆಳೆಯಿದ್ದರೆ ಕರ್ನಾಟಕದ ರೈತರು ವರ್ಷಕ್ಕೆ 2 ಬಾರಿ ಸೇಬು ಬೆಳೆ ಬೆಳೆಯಬಹುದು ಎಂದು ಡಾ. ಪರಮಾರ್ ವಿಶ್ಲೇಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+