Arecanut & Copra Price: ₹16,000 ದಾಟಿದ ಕೊಬ್ಬರಿ ಬೆಲೆ; ಅಡಿಕೆ ದರ ಎಷ್ಟಿದೆ?
ತೆಂಗು ಬೆಳೆಗಾರರಲ್ಲಿ ಕೊನೆಗೂ ಕೊಬ್ಬರಿ ಬೆಲೆ ಸಮಾಧಾನ ತರುವಂತಹ ಹಂತಕ್ಕೆ ತಲುಪಿದೆ. ಕೆಲವು ದಿನಗಳಿಂದ 15,000 ರೂಪಾಯಿ ದಾಟಿದ್ದ ಕ್ವಿಂಟಾಲ್ ಕೊಬ್ಬರಿ ಬೆಲೆ ಇದೀಗ 16,000 ರೂಪಾಯಿ ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ಕೊಟ್ಟಿದೆ. ಒಂದು ಕಡೆ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದರೆ ಮತ್ತೊಂದು ಕಡೆ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಶನಿವಾರ ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಕನಿಷ್ಠ 13,000 ರೂಪಾಯಿ ಇದ್ದರೆ, ಗರಿಷ್ಠ 16,000 ರೂಪಾಯಿಗೆ ಮಾರಾಟವಾಗಿದೆ. ಶುಕ್ರವಾರ ಅರಸಿಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಗರಿಷ್ಠ 14,500 ರೂಪಾಯಿಗೆ ಮಾರಾಟವಾಗಿತ್ತು, ಒಂದೇ ದಿನ ಕ್ವಿಂಟಾಲ್ ಕೊಬ್ಬರಿ ಬೆಲೆ 1500 ರೂಪಾಯಿ ಹೆಚ್ಚಾಗಿದೆ.

ಶುಕ್ರವಾರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 14,200 ರೂಪಾಯಿ ಇದ್ದರೆ ಗರಿಷ್ಠ 15,000 ರೂಪಾಯಿಗೆ ಮಾರಾಟವಾಗಿತ್ತು. ಮಧುಗಿರಿಯಲ್ಲಿ ಕನಿಷ್ಠ 10,000 ರೂಪಾಯಿ ಇದ್ದರೆ ಗರಿಷ್ಠ ಬೆಲೆ 11,000 ರೂಪಾಯಿ ಆಗಿತ್ತು.
ಸದ್ಯ ಕೊಬ್ಬರಿ ಬೆಲೆ 16,000 ರೂಪಾಯಿ ದಾಟಿರುವುದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ 18,000 ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 2 | ಬಂಟ್ವಾಳ | ಹೊಸ ವೆರೈಟಿ | ₹28,500 | ₹40,500 | ₹40,000 |
| 3 | ಭದ್ರಾವತಿ | ರಾಶಿ | ₹45,000 | ₹45,000 | ₹45,000 |
| 4 | ಚನ್ನಗಿರಿ | ರಾಶಿ | ₹40,069 | ₹48,949 | ₹42,599 |
| 5 | ಚಿತ್ರದುರ್ಗ | ಅಪಿ | ₹47,619 | ₹48,029 | ₹47,859 |
| 6 | ಚಿತ್ರದುರ್ಗ | ಕೆಂಪು ಗೋಟು | ₹27,809 | ₹28,210 | ₹28,000 |
| 7 | ಚಿತ್ರದುರ್ಗ | ರಾಶಿ | ₹47,139 | ₹47,569 | ₹47,389 |
| 8 | ಕೊಪ್ಪ | ಗೊರಬಲು | ₹30,599 | ₹32,432 | ₹32,261 |
| 9 | ಕೊಪ್ಪ | ರಾಶಿ | ₹32,500 | ₹48,000 | ₹42,000 |
| 10 | ಶಿರಸಿ | ಚಾಲಿ | ₹32,509 | ₹35,888 | ₹33,985 |
| 11 | ಶಿರಸಿ | ರಾಶಿ | ₹40,150 | ₹46,099 | ₹42,863 |
| 12 | ಸೊರಬ | ಕೋಕಾ | ₹12,313 | ₹17,313 | ₹14,525 |
| 13 | ಸೊರಬ | ರಾಶಿ | ₹30,313 | ₹48,399 | ₹42,420 |
| 14 | ಸೊರಬ | ಸಿಪ್ಪೆಗೋಟು | ₹14,313 | ₹31,313 | ₹16,664 |
| 15 | ಸಾಗರ | ರಾಶಿ | ₹46,500 | ₹46,500 | ₹46,500 |
| 16 | ಶಿವಮೊಗ್ಗ | ರಾಶಿ | ₹30,638 | ₹48,899 | ₹47,099 |
| 17 | ಶಿವಮೊಗ್ಗ | ಸರಕು | ₹60,399 | ₹86,300 | ₹61,109 |
| 18 | ಸಿದ್ದಾಪುರ | ಕೆಂಪು ಗೋಟು | ₹17,899 | ₹21,699 | ₹17,899 |
| 19 | ಸಿದ್ದಾಪುರ | ಚಾಲಿ | ₹31,699 | ₹34,109 | ₹33,899 |
| 20 | ಸಿದ್ದಾಪುರ | ರಾಶಿ | ₹41,699 | ₹45,799 | ₹45,299 |
ಅಡಿಕೆ ಬೆಳೆಗಾರರಲ್ಲಿ ಆತಂಕ
ಒಂದು ಕಡೆ ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದರೆ ಮತ್ತೊಂದು ಕಡೆ ಅಡಿಕೆ ಬೆಲೆಯಲ್ಲಿ ಕುಸಿತ ಕಾಣುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕೊಳೆ ರೋಗ, ನೀರಿನ ಕೊರತೆಯಂತ ಸವಾಲುಗಳ ನಡುವೆಯೂ ಬೆಳೆ ಉಳಿಸಿಕೊಂಡ ರೈತರಿಗೆ ಬೆಲೆ ಕುಸಿತ ಚಿಂತೆಗೆ ಕಾರಣವಾಗಿದೆ.
ಶನಿವಾರ ಚಿತ್ರದುರ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಶಿ ಅಡಿಕೆ ಬೆಲೆ ಕನಿಷ್ಠ 47,139 ರೂಪಾಯಿ ಇದ್ದರೆ ಗರಿಷ್ಠ 48,029 ರೂಪಾಯಿಗೆ ಮಾರಾಟವಾಗಿದೆ. ಭದ್ರಾವತಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಶಿ ಅಡಿಕೆ ಬೆಲೆ 45,000 ರೂಪಾಯಿ ಆಗಿತ್ತು, ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 40,069 ರೂಪಾಯಿ ಇದ್ದರೆ ಗರಿಷ್ಠ 48,949 ರೂಪಾಯಿ ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹13,000 | ₹16,000 | ₹14,980 |
| 2 | ಅರಸೀಕೆರೆ | ಬೇರೆ | ₹7,200 | ₹10,000 | ₹7,250 |
| 3 | ಬೆಂಗಳೂರು | ಕೊಬ್ಬರಿ | ₹12,500 | ₹13,500 | ₹13,000 |
| 4 | ಬೇಲೂರು | ಕೊಬ್ಬರಿ | ₹14,500 | ₹14,500 | ₹14,500 |
| 5 | ಮಧುಗಿರಿ | ಕೊಬ್ಬರಿ | ₹10,000 | ₹11,100 | ₹11,000 |
| 6 | ತಿಪಟೂರು | ಕೊಬ್ಬರಿ | ₹14,200 | ₹15,000 | ₹14,500 |
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications