ಬರ ತಾಲೂಕುಗಳ ಪಟ್ಟಿಗೆ ಸೇರಿದ ಬೆಂಗಳೂರು ಜಿಲ್ಲೆ

Karnataka govt declares 19 more taluks as drought-hit
ಬೆಂಗಳೂರು, ಜು.29: ಮುಂಗಾರು ಮಳೆ ಕೊರತೆಯಿಂದ ಬಳಲುತ್ತಿರುವ ರಾಜ್ಯದ ತಾಲೂಕುಗಳ ಪಟ್ಟಿಗೆ ಬೆಂಗಳೂರು ಜಿಲ್ಲೆಯ ತಾಲೂಕುಗಳು ಸೇರ್ಪಡೆಗೊಂಡಿದೆ. ಒಟ್ಟಾರೆ 19 ತಾಲೂಕುಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು, ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 142ಕ್ಕೇರಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅರೆ ಮಲೆನಾಡು ಭಾಗದ ತಾಲೂಕುಗಳು ಕೂಡಾ ಸೇರ್ಪಡೆಗೊಂಡಿದೆ.

ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. 14 ಜಿಲ್ಲೆಗಳಲ್ಲಿ ಎಲ್ಲೋ ಒಂಚೂರು ಮಳೆಯಾಗಿದೆ. 7 ಜಿಲ್ಲೆಗಳಲ್ಲಂತೂ ಮಳೆಯ ಸೂಚನೆಯೇ ಇಲ್ಲ. ಹೊಸ ಪಟ್ಟಿಯಂತೆ ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ತಾಲೂಕುಗಳು ಸೇರಿದೆ.

19 ತಾಲೂಕುಗಳ ಹೆಸರು ಈ ರೀತಿಯಾಗಿದೆ: ಆನೇಕಲ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ಮಾಲೂರು, ನೆಲಮಂಗಲ, ಚನ್ನಗಿರಿ, ಹರಿಹರ, ಎಚ್ ಡಿ ಕೋಟೆ, ರಾಮನಗರ, ಹುಣಸೂರು, ಭದ್ರಾವತಿ, ಶಿವಮೊಗ್ಗ, ಗೋಕಾಕ, ತರೀಕೆರೆ, ಶಿಕಾರಿಪುರ, ಚನ್ನಗಿರಿ ಹಾಗೂ ಆಲೂರು.

ನೈಋತ್ಯ ಮುಂಗಾರು ಮಾರುತಗಳು ಐದಾರು ಜಿಲ್ಲೆಗಳಲ್ಲಿ ಮಳೆ ತಂದರೂ ಉಳಿದ 25 ಜಿಲ್ಲೆಗಳಲ್ಲಿ ತೀರಾ ಕ್ಷೀಣವಾಗಿದೆ. 17 ಜಿಲ್ಲೆಗಳಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಅಲ್ಲಲ್ಲಿ ಮಳೆ, ತುಂತುರು ಹನಿ ಪ್ರೋಕ್ಷಣೆಯಾಗಿದ್ದು ಬಿಟ್ಟರೆ ಒಣ ಹವೆ ಮುಂದುವರೆದಿದೆ.

ಕರ್ನಾಟಕದ 175 ತಾಲೂಕುಗಳ ಪೈಕಿ 142 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇತ್ತೀಚೆಗೆ ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯದ ಅನ್ನದಾತರ ನೆರವಾಗಲು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿತ್ತು. 16 ಲಕ್ಷ ರೈತರು ಪಡೆದಿರುವ 3,500 ಕೋಟಿ ರು. ಸಾಲವನ್ನು ಬಡ್ಡಿಸಮೇತ ಮನ್ನಾ ಮಾಡುವುದಾಗಿ ಹೇಳಿ, ರೈತರಲ್ಲಿ ಮತ್ತೆ ಉಸಿರು ತುಂಬಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+