ಕರ್ನಾಟಕದಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ: ನರೇಂದ್ರ ಮೋದಿ
Recommended Video

ಬೆಂಗಳೂರು, ಮೇ 02: "ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ರೈತ ಘಟಕದೊಂದಿಗೆ ತಮ್ಮ ಅಧಿಕೃತ ನಮೋ app ಮೂಲಕ ವಿಡಿಯೋ ಸಂವಾದ ನಡೆಸಿದ ಮೋದಿ, ಕರ್ನಾಟಕ ಸರ್ಕಾರ ನಿರ್ಲಕ್ಷ್ಯದಿಂದ ಕರ್ನಾಟಕದ ರೈತರು ಫಸಲ್ ಭಿಮಾ ಯೋಜನೆಯ ಲಾಭವನ್ನೂ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
Kisaan ko apne khet mein aise ped lagaane ki swantantra ho jisse uski aye mein badhotri ho. Kisaan ke ghar mein jab beti paida ho, uss time woh ek aisa ped lagaade toh jab beti shaadi hogi, uss time jab woh ped kaatega toh shaadi ka kharcha uss ek ped se nikal jayega: PM Modi pic.twitter.com/s1WApAdY2r
— ANI (@ANI) May 2, 2018
ಕರ್ನಾಟಕದ ರೈತರ ಅಗತ್ಯಗಳು, ಸರ್ಕಾರ ಮತ್ತು ನಿಸರ್ಗದ ಸಹಕಾರ ಬಯಸುತ್ತವೆ. ಕರ್ನಾಟಕದ ರೈತ ಮುಖಂಡ ಬಿ ಎಸ್ ಯಡಿಯೂರಪ್ಪನವರು ರೈತರ ಕಲ್ಯಾಣಕ್ಕಾಗಿ ಮತ್ತು ಅವರ ಆದಾಯವನ್ನು ದ್ವಿಗುಣವಾಗಿಸುವುದಕ್ಕೆ ಸಿದ್ಧರಿದ್ದಾರೆ. ಕರ್ನಾಟಕದ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರವೂ ಸದಾ ಸಿದ್ಧವಿದೆ ಎಂದು ಅವರು ಹೇಳಿದರು.












Click it and Unblock the Notifications