ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಮನ್ನಾ ಸೇರಿದಂತೆ ಸಂಪುಟದ ಪ್ರಮುಖ ನಿರ್ಣಯ

By Prasad
|
Google Oneindia Kannada News

Cabinet decides to waive farmers loan
ಬೆಂಗಳೂರು, ಆ. 24 : ವಿಧಾನಸಭೆಯಲ್ಲಿ ಚರ್ಚೆಯಾದಂತೆ ರಾಜ್ಯದ 15 ಲಕ್ಷಕ್ಕೂ ಹೆಚ್ಚು ರೈತರಿಗೆ 25 ಸಾವಿರ ರೂಪಾಯಿ ಸಾಲ ಮನ್ನಾ ಮಾಡಲು ಗುರುವಾರ ನಡೆದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಚಿವ ಸಂಪುಟ ಸಭೆಯ ನಂತರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಾಗೇರಿ ವಿಶ್ವೇಶ್ವರ ಹೆಗಡೆ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದರು.

1ನೇ ಆಗಸ್ಟ್ 2011ರಿಂದ 25ನೇ ಜುಲೈ 2012ರವರೆಗೆ ಸಾಲ ಪಡೆದವರಿಗೆ ಈ ಸೌಲಭ್ಯ ಅನ್ವಯಿಸಲಿದ್ದು, ಇದಕ್ಕಾಗಿ 3,500 ಕೋಟಿ ರೂಪಾಯಿ ಹಣ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಅವರು ತಿಳಿಸಿದರು. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಇತರ ಕೆಲವು ಪ್ರಮುಖ ನಿರ್ಣಯಗಳು ಇಂತಿವೆ:

* ಸುಮಾರು 2160 ಕೋಟಿ ಅಂದಾಜು ವೆಚ್ಚದಲ್ಲಿ 189 ಗ್ರಾಮೀಣ ಮತ ಕ್ಷೇತ್ರಗಳಲ್ಲಿನ 30 ಕಿ.ಮೀ. ರಸ್ತೆ ಅಭಿವೃದ್ಧಿ.

* ಪ್ರೊ: ಮಾಲಿ ಮುದ್ದಣ ಸಮಿತಿ ವರದಿ ಆಧಾರದ ಮೇಲೆ 19 ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಒಪ್ಪಿಗೆ.

* ಸ್ವ ಬೀಜಾಭಿವೃದ್ಧಿ ಯೋಜನೆಯಡಿ ರೈತರು ತಮಗೆ ಬೇಕಾದ ಬಿತ್ತನೆ ಬೀಜ ಬೆಳೆಯಲು ಅನುಕೂಲ ಕಲ್ಪಿಸಲು 50 ಕೋಟಿ ರೂ. ಹಣವನ್ನು ಬಿಡುಗಡೆ.

* ಸುಮಾರು 442 ಆಹಾರ ನಿರೀಕ್ಷಕರು 154 ಆಹಾರ ಶಿರಸ್ತೇದಾರರಿಗೆ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ನೀಡಲು ಸಚಿವ ಸಂಪುಟ ನಿರ್ಧಾರ.

* ರಾಜ್ಯದ ಪದವಿ ಕಾಲೇಜುಗಳ ಅಭಿವೃದ್ಧಿಗಾಗಿ 300 ಕೋಟಿ ಹಣ ಬಿಡುಗಡೆಗೆ ಅನುಮೋದನೆ. ಈ ಅನುದಾನದಲ್ಲಿ 200 ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ, 80 ಪ್ರಯೋಗಾಲಯಗಳಿಗೆ ಸೌಲಭ್ಯ, 38 ಹೊಸ ಕಾಲೇಜು ಕಟ್ಟಡ ನಿರ್ಮಾಣ, ಹೆಚ್ಚುವರಿ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುವುದು.

* ಬೆಂಗಳೂರು ಪೂರ್ವ ತಾಲ್ಲೂಕು ಕೃಷ್ಣರಾಜಪುರ ಹೋಬಳಿಯ ಕ್ಯಾಸನಹಳ್ಳಿ ಗ್ರಾಮದಲ್ಲಿ ನಿಮ್ಯಾನ್ಸ್ ಸಂಸ್ಥೆ ವಿಸ್ತರಣಕ್ಕೆ 39 ಎಕರೆ 38 ಗುಂಟೆ ಜಮೀನು ನೀಡಲು ಸಮ್ಮತಿ.

* ರಾಷ್ಟ್ರೀಯ ಭೂ ದಾಖಲೆ ಆಧುನೀಕರಣಕ್ಕೆ 100 ಕೋಟಿ ರೂ. ಹಣ ಬಿಡುಗಡೆಗೆ ನಿರ್ಧಾರ.

* ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಪರಿಶಿಷ್ಠಜಾತಿ, ಪರಿಶಿಷ್ಠ ಪಂಗಡಗಳು ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಲು ಕ್ಯಾಬಿನೆಟ್ ಉಪಸಮಿತಿ ರಚಿಸಲು ಒಪ್ಪಿಗೆ.

* ಗೃಹ ಮಂಡಳಿ ವತಿಯಿಂದ 53 ವಿವಿಧ ವಸತಿ ಯೋಜನೆಯಡಿ ಸುಮಾರು 7888 ಕೋಟಿ ರೂ. ವೆಚ್ಚದಲ್ಲಿ 134,471 ನಿವೇಶನ ನಿರ್ಮಾಣ 6867 ಮನೆ ನಿರ್ಮಾಣಕ್ಕೆ ನಿರ್ಧಾರ.

* ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಸುಮಾರು 945 ಲಕ್ಷ ರೂ. ವೆಚ್ಚದಲ್ಲಿ ಮುಸ್ಲಿಂ ವಸತಿ, ಶಾಲಾ ಸಂಕಿರಣ ನಿರ್ಮಾಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

English summary
Karnataka cabinet has decided to waive loans of farmers upto 25 thousand rupees. It has also decided to give initiative to many developmental work to be taken up in Karnataka. Education minister Vishweshwar Hegde Kageri briefed the news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X