ರಾಜ್ಯ ಬಜೆಟ್: ಪಶುಸಂಗೋಪನೆಯಲ್ಲಿ ಕುರಿ/ಮೇಕೆಗಳದ್ದೆ ಕಾರುಬಾರು
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಬಜೆಟ್ 2018-19ರಲ್ಲಿ ಕೃಷಿ ಮತ್ತು ನೀರಾವರಿ ಪರವಾದ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿರುವ ಸಿದ್ದರಾಮಯ್ಯ ಅವರು ರೈತರ ಉಪಕಸುಬಾದ ಪಶುಸಂಗೋಪನೆಗೂ ಆದ್ಯತೆ ನೀಡಿದ್ದಾರೆ.
ಆದರೆ ಪಶುಸಂಗೋಪನೆಯಲ್ಲಿ ತಮ್ಮ ಜಾತಿಯ ಪ್ರೀತಿ ಮೆರೆದಿರುವ ಸಿದ್ದರಾಮಯ್ಯ ಅವರು ಕುರಿ ಮತ್ತು ಮೇಕೆ ಸಾಕಾಣೆದಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಸು, ಎತ್ತು ಸಾಕಾಣೆದಾರರಿಗೆ ಹೆಚ್ಚಿನ ಆದ್ಯತೆ ಈ ಬಾರಿಯ ಬಜೆಟ್‌ನಲ್ಲಿ ನೀಡಲಾಗಿಲ್ಲ.

ಪಶುಸಂಗೋಪನೆ
* ಕುರಿ ಮತ್ತು ಮೇಕೆ ಖರೀದಿಗೆಂದು ಸಹಕಾರಿ ಬ್ಯಾಂಕುಗಳಿಂದ ಪಡೆದ 50000 ಒಳಗಿನ ಮಧ್ಯಮಾವದಿ ಸಾಲ ಮನ್ನಾ
* ಕುರಿ ಮತ್ತು ಆಡು ಸಾಕಾಣೆ ಪ್ರೋತ್ಸಾಹಕ್ಕೆ 25000 ಘಟನ ಸ್ಥಾಪನೆ ಮತ್ತು 187 ಕೋಟಿ ಸಾಲಕ್ಕೆ ಸರ್ಕಾರವೇ ಖಾತ್ರಿ
* ಜಾನುವಾರು ಮೇವಿಗಾಗಿ ಮೇವು ಭದ್ರತಾ ನೀತಿ ಜಾರಿ
* ವಲಸೆ ಕುರಿಗಾರರ ಮತ್ತು ಕುರಿಗಳ ರಕ್ಷಣೆಗೆ ಟೆಂಟ್ ನಿರ್ಮಿಸಿಕೊಳ್ಳಲು ಅಗತ್ಯ ಸಾಮಗ್ರಿ ಖರೀದಿಗೆ 4 ಕೋಟಿ ಅನುದಾನ
* ಕುರಿ, ಮೇಕೆ ಚರ್ಮ ಮೌಲ್ಯ ವರ್ಧನೆಗೆ ಚರ್ಮ ಸಂಸ್ಕೃಣಾ ಘಟಕ ಸ್ಥಾಪನೆ
* ಗದಗ, ಕೊಪ್ಪಳ, ರಾಯಚೂರು, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಪಶು ರೋಗ ತಪಾಸಣಾ ಘಟಕ ಸ್ಥಾಪನೆಗೆ 3 ಕೋಟಿ ಅನುದಾನ
* ರಾಜ್ಯದ ಕುರಿ, ಮೇಕೆ ಮಾರುಕಟ್ಟೆ ಅಭಿವೃದ್ಧಿಗೆ 75 ಕೋಟಿ
* 14000 ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಗುಣಮಟ್ಟದ ಹಾಲು ಶೇಖರಣೆ ಆಧಾರದ ಮೇಲೆ ಪ್ರತಿ ಲೀಟರ್ ಹಾಲಿಗೆ 20 ಪೈಸೆಯಂತೆ 50 ಕೋಟಿ ಅನುದಾನ
ರೇಷ್ಮೆ
* ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಬೆಂಗಳೂರು, ಮೈಸೂರು ರೇಷ್ಮೆ ಕಾರಿಡಾರ್ ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ, ಚನ್ನಪಟ್ಟಣದಲ್ಲಿ ಅಂತರರಾಷ್ಟ್ರೀಯ ಲೈವ್ ಮ್ಯೂಸಿಯಂ ಸ್ಥಾಪನೆ
* ತಲಘಟ್ಟಪುರ ರೇಷ್ಮೆ ಸಂಶೋಧನೆ ಅಭಿವೃದ್ಧಿ ಕೇಂದ್ರದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯ ಸ್ಥಾಪನೆ
* ಸೋಲಿಗ ಜನಾಂಗಕ್ಕೆ ನೆರವಾಗಲು ಬಿಳಿರಂಗನ ಬೆಟ್ಟದ ಮೇಲೆ ಇಲಾಖೆ ಜಾಗದಲ್ಲಿ ಹಿಪ್ಪುನೇರಳೆ ಮರ ಕೃಷಿ, ರೇಷ್ಮೆ ಸಾಕಲು ಶೆಡ್‌ಗಳ ನಿರ್ಮಾಣ, ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆಗೆ ಕ್ರಮ.











Click it and Unblock the Notifications