ರಾಜ್ಯ ಬಜೆಟ್: ಗುಳೆ ತಪ್ಪಿಸುವ ಗುರಿ, ಕೃಷಿ ವಿಸ್ತರಣೆಗೆ ಒತ್ತು

ಬೆಂಗಳೂರು, ಫೆಬ್ರವರಿ 16: ಸಿದ್ದರಾಮಯ್ಯ ಅವರ ರೈತ ಪ್ರೀತಿ ಅವರ ಪ್ರತಿ ಬಜೆಟ್‌ನಲ್ಲೂ ಕಾಣಬಹುದು, ಈ ಬಜೆಟ್‌ನಲ್ಲಿಯೂ ಅದು ಮುಂದುವರೆದಿದೆ.

2018-19ರ ಕೃಷಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರಕ್ಕೆ ಭರ್ಜರಿ ಉಡುಗೊರೆಗಳನ್ನು ನೀಡಿದ್ದಾರೆ. ಕೃಷಿಗೆ ಸಹವರ್ತಿಯಾದಿಯಾದ ಪಶುಸಂಗೋಪನೆಗೂ ಸಿದ್ದರಾಮಯ್ಯ ಅವರು ವಿಶೇಷ ಆದ್ಯತೆ ನೀಡಿದ್ದಾರೆ.

ಗುಳೆ ತಡೆ, ಸ್ವಾವಲಂಬಿ ಬದುಕು ನಿರ್ಮಾಣದ, ಕೃಷಿಯನ್ನು ಲಾಭಕಾರಿ ಉದ್ದಿಮೆ ಮಾಡುವ ಸಲುವಾಗಿ ದೂರಗಾಮಿ ಯೋಜನೆಗಳನ್ನು ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

karnataka budget-2018: Agriculture gets more focus

* ಮಳೆ ಆಶ್ರಿತ ಬೆಳೆ ಬೆಳೆಯುವ ರೈತನಿಗೆ ಪ್ರತಿ ವರ್ಷ ಜಮೀನು ಮಿತಿ ಆಧರಿಸಿ ರೂ.10000 ಹಣ ನೇರ ವರ್ಗಾವಣೆ, ಒಣ ಭೂಮಿ ರೈತರ ನೆರವಿಗಾಗಿ 'ರೈತ ಬೆಳಕು' ಯೋಜನೆ.
* ಜನಪ್ರಿಯ ಯೋಜನೆ ಕೃಷಿ ಭಾಗ್ಯಕ್ಕೆ 600 ಕೋಟಿ ಅನುದಾನದೊಂದಿಗೆ ಯೋಜನೆ ಮುಂದುವರಿಕೆ.
* ಕೇಂದ್ರದ 'ಕರ್ನಾಟಕ ರೈತ ಸುರಕ್ಷಾ ಫಸಲ್ ಭಿಮಾ ಯೋಜನೆ'ಗೆ ರಾಜ್ಯದ ಪಾಲು ಹೆಚ್ಚಿಸಿ 845 ಕೋಟಿ ನೀಡಿಕೆ.
* ಸವಯವ ಕೃಷಿ ಪ್ರದೇಶವನ್ನು ಮುಂದಿನ ವರ್ಷಕ್ಕೆ 1.5 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಲು 50 ಕೋಟಿ ಅನುದಾನ
* ಲಾಭದಾಯಕ, ಆರೋಗ್ಯದಾಯಕ ಬೆಳೆಯಾದ ಸಿರಿಧಾನ್ಯ ಬೆಳೆಯಲು 24 ಕೋಟಿ ಹೆಚ್ಚುವರಿ ಅನುದಾನ.
* ಕಬ್ಬು ಕಟಾವು ಯಂತ್ರಗಳ ಖರೀದಿಗೆ 20 ಕೋಟಿ ಅನುದಾನ. ಕಬ್ಬು ಕಟಾವು ಯಂತ್ರಗಳ ಬೆಲೆ ಇಳಿಕೆ
* ಕೃಷಿ ಮಾಡುವ ಸಂಧರ್ಭ ಹಾವು ಕಚ್ಚಿ ಸಾವಿಗೀಡಾದರೆ ನೀಡಲಾಗುತ್ತಿದ್ದ ಪರಿಹಾರ 1 ಲಕ್ಷವನ್ನು 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

* ಬೆಳೆ ಕಟಾವು ಮಾಡಿ ಶೇಖರಿಸಿಟ್ಟ ಮೆದೆಗಳಿಗೆ ಬೆಂಕಿ ಬಿದ್ದರೆ 2000೦ ರೂಪಾಯಿ ಪರಿಹಾರ
* ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.
* ವಿಜಯಪುರ ಜಿಲ್ಲೆ ಮುದ್ದೆಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾಲಯ ಸ್ಥಾಪನೆ
* ಜಿಕೆವಿಕೆಯಲ್ಲಿ 1 ಕೋಟಿ ವೆಚ್ಚದಲ್ಲಿ ನಂಜುಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ
* ನೆಲಗಡಲೆ ಬೆಳೆಯುವ ರೈತರಿಗೆ ವೀಶೇಷ 50 ಕೋಟಿ ಪ್ಯಾಕೆಜ್, ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಸಿರಾ ಮತ್ತು ಚಿತ್ರದುರ್ಗಾ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿಗಳಲ್ಲಿಗೆ ಪ್ರಾಯೋಗಿಕ ಹಂತ ಜಾರಿ.

ತೋಟಗಾರಿಕೆ
* ಅಪರೂಪದ ಹಣ್ಣುಗಳ ಬೆಳೆ ಬೆಳೆಯಲು ಉತ್ತೇಜನ
* ತೋಟಗಾರಿಕೆ ಬೆಳೆಗಳ ಪೀಡಿ ಮತ್ತು ಸಮಗ್ರ ಪೋಷಕಾಂಶ ನೀಡುವಿಕೆಗೆ 10 ಕೋಟಿ ವಿಶೇಷ ಅನುದಾನ
* ತೆಂಗು ಬೆಳೆಗಾರರ ಅಭಿವೃದ್ಧಿಗಾಗಿ ಸಮಗ್ರ ನಿರ್ವಹಣಾ ಪದ್ಧತಿ ಅನುಸರಿಸಿ ತೋಟಗಳ ಪುನಶ್ಚೇತನಕ್ಕೆ ಕ್ರಮ
* ನಗರ ಮತ್ತು ನಗರ ಸುತ್ತಮುತ್ತಲು ಸೊಪ್ಪು ಬೆಳೆಯಲು ಹೈಡ್ರೊಫೋನಿಕ್ಸ್‌ ತಂತ್ರಜ್ಞಾನ ಬಳಕೆಗೆ ಉತ್ತೇಜನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+