ಕಾರಹುಣ್ಣಿಮೆ: ಎತ್ತುಗಳಿಗೆ ಇದೇನು ಮಾಡ್ತಿದ್ದಾರೆ ನೋಡಿ!
ಶಿಗ್ಗಾಂವ್, ಜೂನ್ 14: ರೈತಾಪಿ ಜನ ಸಂತಸಗೊಂಡಿದ್ದಾರೆ. ಮುಂಗಾರು ಅಲ್ಲಲ್ಲಿ ನಿಧಾನಕ್ಕೆ ಕಾಲಿಡುತ್ತಿದೆ. ಕೃಷಿಕರು, ಅದರಲ್ಲೂ ಉತ್ತರ ಕರ್ನಾಟಕದವರು ನಿನ್ನೆಯ ವಿಶೇಷ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಈ ಕಾರಹುಣ್ಣಿಮೆ ಸಂಭ್ರಮದ ಕೇಂದ್ರಬಿಂದು ರೈತನ ಸಂಗಾತಿ ಎತ್ತು. ಮಳೆ ಪ್ರಾರಂಭವಾಗುವ ಹೊತ್ತಿಗೆ ಎತ್ತುಗಳನ್ನು ಪೂಜಿಸಿ ಉಳುಮೆಗೆ ಸಜ್ಜಾಗುವಂತೆ ಪ್ರೇರೇಪಿಸುವ ಹಬ್ಬ ಇದು. ಮಣ್ಣಿನ ಮಕ್ಕಳು ಈ ಕಾರಹುಣ್ಣಿಮೆಯ ದಿನ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿ, ಹೊಟ್ಟೆ ತುಂಬ ಊಟ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿ ಮಳೆರಾಯ ಇಳಿಗೆ ಇಳಿಯುತ್ತಿದ್ದಂತೆಯೇ ಮತ್ತೆ ಕೆಲಸಕ್ಕೆ ಸಜ್ಜಾಗುವಲ್ಲಿ ಪ್ರೇರಣೆ ನೀಡುತ್ತದೆ.
ಇಲ್ಲಿ ಮತ್ತೋ ಒಂದು ವಿಶೇಷ ನಡೆಯುತ್ತದೆ. ಹಾವೇರಿಯ ನಿಂಗಪ್ಪ ಚವಡಿ (Ningappa Chavadi ಫೇಸ್ ಬುಕ್) ಈ ವಿಶೇಷತೆಯನ್ನು ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹೀಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪೌರಾಣಿಕ ಹಿನ್ನೆಲೆ ಎನೇ ಇರಲಿ ಕೃಷಿ ಚಟುವಟಿಕೆಗಳು ಆರಂಭವಾಗುವುದೇ ವರ್ಷಾಧಾರಣೆಯೊಂದಿಗೆ ಬರುವ ಈ ಕಾರಹುಣ್ಣಿಮೆಯ ದಿನ. ಹೊಲಗಳನ್ನು ಹಸನು ಮಾಡುವುದು, ಬಿತ್ತುವುದು ಸೇರಿದಂತೆ ಕೃಷಿ ಚಟುವಟಿಕೆಗಳು ಬಹಳ ಜೋರಾಗಿ ಆರಂಭವಾಗುತ್ತದೆ. ಆಗ ಎತ್ತುಗಳು ಬಿಡುವಿಲ್ಲದ ಕೆಲಸಕಾರ್ಯಗಳಲ್ಲಿ ತಲ್ಲೀನವಾಗುತ್ತವೆ. ಆದ್ದರಿಂದ ಅವುಗಳಿಗೆ ಶಕ್ತಿ ಬರಲೆಂದು ಕೋಳಿಮೊಟ್ಟೆಯನ್ನು ಹಾಕುತ್ತಾರೆ. ಮತ್ತು ಅರಿಶಣದ ಪುಡಿಯನ್ನು ಇವುಗಳ ನಾಲಿಗೆಗೆ ತಿಕ್ಕುವದರಿಂದ ಮೇವನ್ನು ಉತ್ತಮವಾಗಿ ಕಡಿದು ತಿನ್ನಲಿ ಎಂಬ ಸದಾಶಯವೂ ಇದೆ.
ಕಾರಹುಣ್ಣಿಮೆ ನಮಗೆಲ್ಲ ದೊಡ್ಡ ಹುಣ್ಣಮೆ. ಹಾಗಾಗಿ ಇವತ್ತು ನಮ್ಮ ಮನೆ ದೇವರು ಮೈಲಾರದ ಮೈಲಾರ ಲಿಂಗೇಶ್ವರ ಹಾಗೂ ದೇವರ ಗುಡ್ಡದ ಶ್ರೀ ಮಾಲತೇಶ (ಗುಡದಯ್ಯ) ದೇವಸ್ಥಾನಕ್ಕೆ ಹಣ್ಣು ಕಾಯಿ ಮಾಡಿಸಲೆಂದು ಜನ ಭಾರಿ ಸಂಖ್ಯೆಯೆಯಲ್ಲಿ ಸೇರುತ್ತಾರೆ. ಈ ಎರಡು ಕ್ಷೇತ್ರಗಳಿಗೆ ಹೋಗುವ ದಾರಿಯಲ್ಲಿ ಹೊನ್ನತ್ತಿ ಗ್ರಾಮದ ಶ್ರೀ ಹೊನ್ನಮ ದೇವಸ್ಥಾನಕ್ಕೆ ಹೋದಾಗ ನನ್ನ ಮೊಬೈಲಿಂದ ಕ್ಲಿಕ್ಕಿಸಿದ ಪೋಟೊವೊಂದು ಇಲ್ಲಿದೆ.













Click it and Unblock the Notifications