ಭಾರತವು ಈ ವರ್ಷ ನಿರೀಕ್ಷೆಗಿಂತಲೂ 9.25 ಲಕ್ಷ ಬೇಲ್‌ಗಳಷ್ಟು ಕಡಿಮೆ ಹತ್ತಿ ಉತ್ಪಾದಿಸಿದೆ
ಬೆಂಗಳೂರು, ಜನವರಿ 15: ಭಾರತದಲ್ಲಿ ಹತ್ತಿ ಉತ್ಪಾದನೆ ಪ್ರಸಕ್ತ 2022-23ನೇ ಋತುವಿನಲ್ಲಿ ನಿರೀಕ್ಷೆಗಿಂತ 9.25 ಲಕ್ಷ ಬೇಲ್‌ಗಳಷ್ಟು ಕಡಿಮೆ ಉತ್ಪಾದನೆ ಆಗಿದೆ ಎಂದು ಕಾಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಎಐ) ತಿಳಿಸಿದೆ.
ಪ್ರಸಕ್ತ 2022-23ನೇ ಋತುವಿನಲ್ಲಿ ಒಟ್ಟು ಸುಮಾರು 330.50 ಲಕ್ಷ ಬೇಲ್ (1 ಬೇಲ್ = 172kg) ಹತ್ತಿ ಉತ್ಪಾದನೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಉತ್ಪಾದನೆ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಈ ವರ್ಷ 9.25 ಲಕ್ಷ ಹತ್ತಿ ಉತ್ಪಾದನೆ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 307 ಲಕ್ಷ ಬೇಲ್ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿತ್ತು ಎಂದು ಸಿಎಐ ಹೇಳಿದೆ.

2022ರ ಅಕ್ಟೋಬರ್ 1 ರಿಂದ ಆರಂಭವಾದ ಹಂಗಾಮಿನಲ್ಲಿ ಹತ್ತಿ ಉತ್ಪಾದನೆಯು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ತಲಾ 2 ಲಕ್ಷ ಬೇಲ್‌ಗಳಷ್ಟು ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅದೇ ರಾಜ್ಯಗಳಿಂದ ಕ್ರಮವಾಗಿ ಈ ವರ್ಷ 82.50 ಲಕ್ಷ ಬೇಲ್‌ಗಳು, 13 ಲಕ್ಷ ಬೇಲ್‌ಗಳು ಮತ್ತು 22 ಲಕ್ಷ ಬೇಲ್ ಉತ್ಪಾದನೆ ನಿರೀಕ್ಷಿಸಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಕಳೆದ ಅಕ್ಟೋಬರ್ ತಿಂಗಳಿಂದ ಡಿಸೆಂಬವರೆಗೆ ಒಟ್ಟು ಹತ್ತಿ ಪೂರೈಕೆಯು 116.27 ಲಕ್ಷ ಬೇಲ್‌ಗಳು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 80.13 ಲಕ್ಷ ಬೇಲ್‌ಗಳ ಪೂರೈಕೆ ಆಗಿದ್ದು, 4.25 ಲಕ್ಷ ಬೇಲ್ ಹತ್ತಿಯು ಆಮದಾಗಿದೆ. ಸದ್ಯಕ್ಕೆ ಉಗ್ರಾಣದಲ್ಲಿ ಅಂದಾಜು 31.89 ಲಕ್ಷ ಬೇಲ್‌ಗಳ ಹತ್ತಿ ಸಂಗ್ರಹವಿದೆ. ಗುಜರಾತ್ ರಾಜ್ಯ ಮಾತ್ರ ಹತ್ತಿ ಉತ್ಪಾದಣೆಯಲ್ಲಿ ಸ್ಥಿರತೆ ಹೊಂದಿದೆ ಎನ್ನಲಾಗಿದೆ. ಬೇರೆ ರಾಜ್ಯಗಳಿಗಿಂತ ಉತ್ತಮ ಇಳುವರಿ ಸಿಗುಬಹುದು ಎಂದು ಸಿಎಐ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್-ಡಿಸೆಂಬರ್ ವರೆಗೆ ಒಟ್ಟು 65 ಲಕ್ಷ ಬೇಲ್ ಗಳ ಬಳಕೆಯಾಗಿದ್ದರೆ, 2022ರ ಡಿಸೆಂಬರ್ 31ರವರೆಗೆ 2 ಲಕ್ಷ ಬೇಲ್‌ಗಳು ವಿದೇಶಕ್ಕೆ ರಫ್ತು ಮಾಡಲಾಗಿದೆ. ಈ ವರ್ಷದ 2022-23 ಹತ್ತಿ ಋತುವಿನ ಅಂತ್ಯದ ವೇಳೆಗೆ ಅಂದರೆ ಮುಂದಿನ ಸೆಪ್ಟೆಂಬರ್ 30ರ ಹೊತ್ತಿಗೆ 374.39 ಲಕ್ಷ ಬೇಲ್ ಹತ್ತಿ ಪೂರೈಕೆ ಆಗುವ ಸಾಧ್ಯತೆ ಇದೆ.
ಒಟ್ಟಾರೆ ಋತುವಿನ ಅಂದಾಜು 330.50 ಲಕ್ಷ ಬೇಲ್‌ಗಳು ಗಳಲ್ಲಿ ಆಮದು ಅಂದಾಜು 12 ಲಕ್ಷ ಬೇಲ್ ಆಗಿದೆ. ಕಳೆದ ಅಕ್ಟೋಬರ್ 1 ರ ಆರಂಭದಲ್ಲಿ ದೇಶದಲ್ಲಿ 31.89 ಲಕ್ಷ ಬೇಲ್‌ಗಳ ಪ್ರಥಮ ಹಂತದ ಸಂಗ್ರಹಣೆ ಮಾಡಲಾಗಿತ್ತು.
ಈ ಋತುವಿನ ದೇಶೀಯ ಬಳಕೆ ಅಂದಾಜು 300 ಲಕ್ಷ ಬೇಲ್‌ಗಳಾಗಿದ್ದರೆ, ರಫ್ತು ಮಾಡುವ ಬೇಲ್‌ಗಳ ಸಂಖ್ಯೆ 30 ಲಕ್ಷ ಎಂದು ಸಂಸ್ಥೆ ವಿವರಿಸಿದೆ.












Click it and Unblock the Notifications