112.18 MT ಗೋಧಿ ಉತ್ಪಾದನೆಯಿಂದ ಭಾರತ ದಾಖಲೆ ಬರೆಯಲಿದೆ: ಕೃಷಿ ಸಚಿವಾಲಯ
ದೇಶದದಲ್ಲಿ ಹಿಂಗಾರು ಅವಧಿಯಲ್ಲಿ ಪ್ರಮುಖ ಬೆಳೆಯಾದ ಗೋಧಿ ಉತ್ಪಾದನೆಯು 2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) ದಾಖಲೆ ಮಟ್ಟದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಂದಾಜಿಸಿದೆ.
ಬೆಂಗಳೂರು, ಫೆಬ್ರವರಿ 15: ದೇಶದದಲ್ಲಿ ಹಿಂಗಾರು ಅವಧಿಯಲ್ಲಿ ಪ್ರಮುಖ ಬೆಳೆಯಾದ ಗೋಧಿ ಉತ್ಪಾದನೆಯು 2022-23 ಬೆಳೆ ವರ್ಷದಲ್ಲಿ (ಜುಲೈ-ಜೂನ್) ದಾಖಲೆ ಮಟ್ಟದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಅಂದಾಜಿಸಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಶಾಖದ ಅಲೆಯಿಂದಾಗಿ ಹಿಂದಿನ ವರ್ಷ ಅಂದರೆ 2021-22ರಲ್ಲಿ ಕೇವಲ 107.74 ಮಿಲಿಯನ್ ಟನ್ ನಷ್ಟು ಮಾತ್ರ ಗೋಧಿ ಉತ್ಪಾದನೆ ಆಗಿತ್ತು. ಅದು ಈ ಭಾರಿ 112.18 ಮಿಲಿಯನ್ ಟನ್‌ಗಳಷ್ಟು ಏರಿಕೆ ಕಂಡು ಹೊಸ ದಾಖಲೆ ಬರೆಯಲಿದೆ ಎಂದು ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಆಹಾರ ಧಾನ್ಯಗಳ ಉತ್ಪಾದನೆಯ ಎರಡನೇ ಅಂದಾಜು ವರದಿ ತಿಳಿಸಿದೆ.
2020-21 ಬೆಳೆ ಅವಧಿಯಲ್ಲಿ ಪ್ರಮುಖ ರಾಬಿ ಬೆಳೆ ಗೋಧಿಯು 109.59 ಮಿಲಿಯನ್ ಟನ್ ಉತ್ಪಾದನೆ ಕಂಡಿತ್ತು. 2022-23 ಬೆಳೆ ವರ್ಷದಲ್ಲಿ ಗೋಧಿ ಉತ್ಪಾದನೆಯು 112.18 ಮಿಲಿಯನ್ ಟನ್ ಆಗುವ ಸಾಧ್ಯತೆ ಇದೆ. ಇದು ಹಿಂದಿನ ವರ್ಷದ ಉತ್ಪಾದನೆಗಿಂತ 4.40 ಮಿಲಿಯನ್ ಟನ್ ಹೆಚ್ಚು ಎನ್ನಲಾಗಿದೆ.

2022-23ರಲ್ಲಿ (ಜುಲೈ-ಜೂನ್) ರಾಬಿ ಋತುವಿನಲ್ಲಿ ಗೋಧಿ ಬೆಳೆಯನ್ನು 343.23 ಲಕ್ಷ ಹೆಕ್ಟೇರ್‌ಗಳ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಅದರ ಹಿಂದಿನ ವರ್ಷ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಲ್ಲದೇ ಈ ಭಾರಿ ವಾತಾವರಣದಲ್ಲಿನ ಹವಾಮಾನ ಪರಿಸ್ಥಿತಿ ಉತ್ತಮವಾಗಿದೆ.
ಹೆಚ್ಚೆಚ್ಚು ಗೋಧಿ ಬೆಳೆ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಮಧ್ಯ ಪ್ರದೇಶಕ್ಕೆ ಈಗಾಗಲೇ ಗೋಧಿ ಕೊಯ್ಲಿಗೆ ಬರಲು ಸಿದ್ಧವಾಗಿದೆ. 2022-23 ರಾಬಿ ಬೆಳೆಯ ವರ್ಷದಲ್ಲಿ ಆಹಾರಧಾನ್ಯಗಳು ಒಟ್ಟು ಉತ್ಪಾದನೆಯು 323.55 ಮಿಲಿಯನ್ ಟನ್‌ಗಳಷ್ಟು ಆಗುವ ಮೂಲಕ ದಾಖಲೆ ಬರೆಯಲಿದೆ ಎಂದು ಸರ್ಕಾರ ನಿರೀಕ್ಷೆ ಇಟ್ಟುಕೊಂಡಿದೆ.

ಈ ಒಟ್ಟು ರಾಬಿ ಬೆಳೆಗಳ ಉತ್ಪಾದನೆಯು ಹಿಂದಿನ ವರ್ಷಕ್ಕಿಂತಲೂ ಸರಿಸುಮಾರು 7.93 ಮಿಲಿಯನ್ ಟನ್‌ಗಳಷ್ಟು ಅತ್ಯಧಿಕ ಎಂದು ಸಚಿವಾಲಯ ತಿಳಿಸಿದೆ.












Click it and Unblock the Notifications