ಭಾರತದಲ್ಲಿ 2022-23ರಲ್ಲಿ 112ಲಕ್ಷ ಟನ್‌ಗಿಂತ ಹೆಚ್ಚು ಗೋಧಿ ಉತ್ಪಾದನೆ ನಿರೀಕ್ಷೆ

ನವದೆಹಲಿ, ಜನವರಿ 13: ಭಾರತದವು ಕಳೆದ ವರ್ಷಕ್ಕಿಂತ ಪ್ರಸ್ತಕ 2022-23 ರಲ್ಲಿ ಗೋಧಿ ಉತ್ಪಾದನೆಯಲ್ಲಿ ಮಹತ್ತರ ದಾಖಲೆ ಬರೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಈ 2022-23 ವರ್ಷದ ಗೋಧಿ ಬೆಳೆ ಋತುವಿನಲ್ಲಿ (ಜುಲೈ-ಜೂನ್) 112 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಗೋಧಿ ಉತ್ಪಾದನೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ 2021-22ರಲ್ಲಿ ಗೋಧಿ ಉತ್ಪಾದನೆ ಕಡಿಮೆ ಯಾಗಿತ್ತು. ಅದರಲ್ಲೂ ಗೋಧಿ ಬೆಳೆಯುವ ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ್ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಹವಾಮಾನ ಬದಲಾವಣೆ, ಅಧಿಕ ಉಷ್ಣಾಂಶದ ಪ್ರಭಾವದಿಂದ ಗೋಧಿ ಉತ್ಪಾದನೆಯು 106.84 ಮಿಲಿಯನ್ ಟನ್‌ಗಳಿಗೆ ಕುಸಿದಿತ್ತು ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ಎರಡು ವರ್ಷಗಳ ಹಿಂದೆ ನೋಡುವುದಾದರೆ 2020-21ರಲ್ಲಿ ದೇಶವು 109.59 ಮಿಲಿಯನ್ ಟನ್‌ಗಳ ಗೋಧಿ ಉತ್ಪಾದಿಸಿ ಪ್ರಗತಿ ಸಾಧಿಸಿತ್ತು. ಅದಾದ ನಂತರ ಮರುವರ್ಷ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆ ಆಗಲಿಲ್ಲ. ಪ್ರಸ್ತುತ ವರ್ಷದಲ್ಲಿ ಹವಾಮಾನ ಪರಿಸ್ಥಿತಿಗಳು ಉತ್ತಮವಾಗಿದೆ. ಈಗಾಗಲೇ ರೈತರು ಹೆಚ್ಚಿನ ಗೋಧಿಯನ್ನು ಅತ್ಯಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ.

India In Wheat Production Expect This Year More Than 112 Lakh Tonnes

ಈ ಕಾರಣದಿಂದಲೇ 2023ರ ಮಾರ್ಚ್ ವೇಳೆಗೆ ಕೊಯ್ಲಿಗೆ ಬರಲಿರುವ ಗೋಧಿ ಬೆಳೆಯಲ್ಲಿ ಹೆಚ್ಚು ಉತ್ಪಾದನೆ ಸಾಧ್ಯವಾಗಲಿದೆ. ಒಟ್ಟು ಉತ್ಪಾದನೆಯು 112 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಎಂದು ವ್ಯಾಪಾರಿಗಳು ಹಾಗೂ ಆಹಾರ ತಜ್ಞರು ಅಂದಾಜಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಬಿತ್ತನೆ ಆಗಿದೆ?

ಮುಖ್ಯ ರಾಬಿ (ಚಳಿಗಾಲ) ಬೆಳೆಯಾದ ಗೋಧಿಯ ಬಿತ್ತನೆಯು ಅಕ್ಟೋಬರ್‌ನಿಂದ ಪ್ರಾರಂಭವಾಯಿತು, ಆದರೆ ಕೊಯ್ಲು ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್‌ ಆರಂಭಕ್ಕೆ ಶುರುವಾಗಲಿದೆ. ಇನ್ನೂ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2022-23 ರ ಬೆಳೆ ವರ್ಷದ (ಜುಲೈ-ಜೂನ್) ಪ್ರಸಕ್ತ ರಾಬಿ ಹಂಗಾಮಿನ ಜನವರಿ 6 ರವರೆಗೆ ರೈತರು 332.16 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿಯನ್ನು ಬಿತ್ತಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 329.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಕಂಡಿತ್ತು.

India In Wheat Production Expect This Year More Than 112 Lakh Tonnes

ದೇಶದ ಗೋಧಿ ಬಿತ್ತನೆಯ ಪ್ರಮುಖ ರಾಜ್ಯಗಳಾದ ರಾಜಸ್ಥಾನನಲ್ಲಿ ಒಟ್ಟು 2.52 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ 1.69 ಲಕ್ಷ ಹೆಕ್ಟೇರ್, ಮಹಾರಾಷ್ಟ್ರ 1.20 ಲಕ್ಷ ಹೆಕ್ಟೇರ್, ಗುಜರಾತ್ 0.70 ಲಕ್ಷ ಹೆಕ್ಟೇರ್, ಛತ್ತೀಸ್‌ಗಢ 0.63 ಲಕ್ಷ ಹೆಕ್ಟೇರ್, ಬಿಹಾರ 0.44 ಲಕ್ಷ ಹೆಕ್ಟೇರ್, ಪಶ್ಚಿಮ ಬಂಗಾಳದಲ್ಲಿ 0.10 ಲಕ್ಷ ಹೆಕ್ಟೇರ್, ಜಮ್ಮು ಮತ್ತು ಕಾಶ್ಮೀರ 0.06 ಲಕ್ಷ ಹೆಕ್ಟೇರ್ ಹಾಗೂ ಅಸ್ಸಾಂನಲ್ಲಿ 0.03 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತಲಾಗಿದೆ ಅಧಿಕೃತ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+