ದೇಶಾದ್ಯಂತ ಸಾಲಮನ್ನಾ ಆಗಲು ರಾಹುಲ್ ಪ್ರಧಾನಿಯಾಗಬೇಕು: ಸಿದ್ದರಾಮಯ್ಯ

Recommended Video

      ಬಿ ಎಸ್ ವೈ ಹಾಗು ಬಿ ಶ್ರೀರಾಮುಲುರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

      ಬಳ್ಳಾರಿ, ನವೆಂಬರ್ 23: ರಾಹುಲ್ ಗಾಂಧಿ ಪ್ರಧಾನಿಯಾದರೆ ದೇಶಾದ್ಯಂತ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
      ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದರು.

      ಕೇಂದ್ರದ ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಹಾಗೂ ಸಂಸದರೂ ಕೂಡ ರೈತರ ಸಾಲಮನ್ನಾ ಮಾಡಿ ಎಂದು ಮೋದಿ ಬಳಿ ಹೇಳುವ ಧೈರ್ಯ ಮಾಡುತ್ತಿಲ್ಲ, ಲಕ್ಷಾಂತರ ಕೋಟಿ ಕೈಗಾರಿಕೆಗಳ ಸಾಲಮನ್ನಾ ಮಾಡಿರುವ ಪ್ರಧಾನಿ ಮೋದಿ ರೈತರ ವಿಚಾರದಲ್ಲಿ ಅಸಡ್ಡೆ ತೋರುತ್ತಿದ್ದಾರೆ ಎಂದು ಹೇಳಿದರು.

      ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ವಿಧಾನಸಭಧದ ಮೂರನೇ ಮಹಡಿ ಕನಸು ಇನ್ನೂ ಬೀಳುತ್ತಿದೆಯಂತೆ, ಸರ್ಕಾರ ಬೀಳುತ್ತದೆ ಎಂದು ಕನಸು ಕಾಣುವುದನ್ನು ಇನ್ನೂ ಬಿಟ್ಟಿಲ್ಲ ಎಂದು ಟೀಕಿಸಿದರು.

      ಯಡಿಯೂರಪ್ಪ ಅವರದ್ದು ತಿರುಕನ ಕನಸು

      ಯಡಿಯೂರಪ್ಪ ಅವರದ್ದು ತಿರುಕನ ಕನಸು

      ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ವಿಧಾನಸೌಧ ಮೂರನೇ ಮಹಡಿ ಕನಸಿನ್ನು ಹೋದಂತಿಲ್ಲ, ಸರ್ಕಾರ ಬೀಳುತ್ತದೆ ನಾನು ಸಿಎಂ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರ ಕನಸು ತಿರುಕನ ಕನಸು, ಹಸಿರು ಟವೆಲ್ ಹಾಕಿದಾಕ್ಷಣ ಬಿಎಸ್‌ವೈ ಅವರು ರೈತನ ಮಗನೇ? ನಾವೂ ರೈತರ ಮಕ್ಕಳಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

      ಚುನಾವಣೆ ಬಗ್ಗೆ ಶ್ರೀರಾಮುಲು ಕುರಿತು ಡಿಕೆಶಿ ವ್ಯಂಗ್ಯ

      ಚುನಾವಣೆ ಬಗ್ಗೆ ಶ್ರೀರಾಮುಲು ಕುರಿತು ಡಿಕೆಶಿ ವ್ಯಂಗ್ಯ

      ಬಳ್ಳಾರಿ ಗೆಲುವ ಈ ಬಾರಿ ನಮಗೆ, ಇದು ಬಿಜೆಪಿ ಭದ್ರಕೋಟೆ ಎಂದು ಬೀಗುತ್ತಿದ್ದ ಶ್ರೀರಾಮುಲು ಕನಸು ಇಂದು ಏನಾಗಿದೆ. ಶ್ರೀರಾಮುಲು ಅಣ್ಣನವರು ಚುನಾವಣಾ ಸಮಯದಲ್ಲಿ ಶಾಂತಾ ಪಾರ್ಲಿಮೆಂಟ್ ್ಎ ಡಿಕೆಶಿ ಜೈಲಿಗೆ ಎಂದು ಹೇಳುತ್ತಿದೆ. ಶ್ರೀರಾಮುಲು ಅಣ್ಣನವರು ನ್ಯಾಯಾಧೀಶರಂತೆ ಅಂದು ತೀರ್ಪು ನೀಡಿದ್ದರು.

      ಶ್ರೀರಾಮುಲುಗೆ ಸಂಸ್ಕೃತಿ ಗೊತ್ತಿಲ್ಲ

      ಶ್ರೀರಾಮುಲುಗೆ ಸಂಸ್ಕೃತಿ ಗೊತ್ತಿಲ್ಲ

      ಶ್ರೀರಾಮುಲುಗೆ ಸಂಸ್ಕೃತಿ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. ಶ್ರೀರಾಮುಲು ಅವರಿಗೆ ಶ್ರೀರಾಮುಲು ಅವರಿಗೆ ಕೃತಜ್ಞತೆ ಹೇಳಿ ಅಭ್ಯಾಸವಿಲ್ಲ, ಮತದಾರರಿಗೆ ಕೃತಜ್ಞತೆ ಹೇಳುವುದು ನಮ್ಮ ಸಂಸ್ಕೃತಿ ಆದರೆ ಅವರಿಗೆ ಆ ಸಂಸ್ಕೃತಿ ತಿಳಿದಿಲ್ಲ ಎಂದರು.

      ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲಮನ್ನಾ ದಾಖಲೆ ಸಲ್ಲಿಸಿವೆ

      ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲಮನ್ನಾ ದಾಖಲೆ ಸಲ್ಲಿಸಿವೆ

      ರಾಜ್ಯ ಸಮ್ಮಿಶ್ರ ಸರ್ಕಾರವು ರೈತರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಷಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಕುರಿತು ಮಾಹಿತಿ ನೀಡಲು ಸಹಕಾರ ಸಂಘಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ.

      ಹಾಗಾಗಿ ನವೆಂಬರ್ 25ರೊಳಗೆ ಸಾಲಮನ್ನಾ ದೃಢೀಕೃತ ಮಾಹಿತಿ ನೀಡಲು ರಾಜ್ಯ ಸರ್ಕಾರ ಗಡುವು ನೀಡಿದೆ. ಸಹಕಾರ ಸಂಘಗಳ ಸಾಲಮನ್ನಾ ತೀರ್ಮಾನದಂತೆ ಫಲಾನುಭವಿ ರೈತರ ದ್ವಯಂ ದರಢೀಕರಣ ಪತ್ರ ಹಾಗೂ ಆಧಾರ್ ಒಪ್ಪಿಗೆ ಪತ್ರ ಪಡೆಯಲು ಸಂಘಗಳಿಗೆ ನವೆಂಬರ್ 25 ಅಂತಿಮ ಗಡುವು ನೀಲಡಾಗಿತ್ತು. ಆದರೆ ಈ ಮೊದಲೇ ಎಲ್ಲಾ ದಾಖಲೆ ಸರ್ಕಾರಕ್ಕೆ ಸಲ್ಲಿಸಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+