ಉಪೇಂದ್ರ ಬಗ್ಗೆ ಯಾವುದೇ ಕಾಮೆಂಟ್ಸ್ ಮಾಡೋಲ್ಲ : ಎಸ್ಆರ್ ಹಿರೇಮಠ
ಧಾರವಾಡ, ಡಿಸೆಂಬರ್ 11: 'ರೈತರ ಜಮೀನಿನಲ್ಲಿ ನಟ ಉಪೇಂದ್ರ ರೆಸಾರ್ಟ್ ಕಟ್ಟಿರುವುದು ಸರಿಯಲ್ಲ, ರಾಜಕೀಯ ವ್ಯವಸ್ಥೆಯನ್ನು
ಬದಲಾವಣೆ ಮಾಡುತ್ತೇನೆ' ಎಂದು ಹೊರಟಿರುವ ನಟ ಉಪೇಂದ್ರ ಅವರು, ಮೊದಲು ರೈತರ ಜಮೀನನ್ನು ಹಿಂತಿರುಗಿಸಿ ಬದಲಾವಣೆ ತಮ್ಮಿಂದಲೇ ಆಗಲು ನಾಂದಿ ಹಾಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೋರ್ಟಿನಲ್ಲಿ ತೀರ್ಪು ಆಗುವ ಮುನ್ನವೇ ಉಪೇಂದ್ರ ಅವರು ರೈತರಿಗೆ ಜಮೀನು ವಾಪಸ್ ಕೊಟ್ಟು ಸುಧಾರಣೆ ತನ್ನಿಂದಲೇ ಆಗಲಿ ಅನ್ನೋದನ್ನು ತೋರಿಸಿಕೊಡಬೇಕಿದೆ. ಇನ್ನು ನನಗೆ ಅವರ ಮೇಲೆ ವೈಯಕ್ತಿಕ
ದ್ವೇಷ ಇಲ್ಲ, ಅಲ್ಲದೆ ಅವರ ಮುಂದಿನ ರಾಜಕೀಯ ಜೀವನವನ್ನು ಅವರು ಸುಧಾರಿಸಿಕೊಳ್ಳಲಿ ಎಂದು ನಾನು ಸಲಹೆ ನೀಡಿದ್ದೆ.

ಆದರೆ, ಉಪೇಂದ್ರರಿಗೆ ಆ ವಿಚಾರ ಮನವರಿಕೆ ಆಗಿಲ್ಲ. ಇನ್ನು ಅವರೊಬ್ಬ ಯುವಕರು, ಪಕ್ಷ ಸ್ಥಾಪಿಸಿದ್ದು ಸ್ವಾಗತಾರ್ಹ, ಆದ್ರೆ, ಅವರು ನನ್ನ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಇರೋದು ನನಗೆ ಸರಿ ಅನ್ನಿಸುತ್ತಿಲ್ಲ. ಹೀಗಾಗಿ ಇನ್ನೂ ಮುಂದೆ ಉಪೇಂದ್ರ ಬಗ್ಗೆ ನಾನು ಯಾವುದೇ ಕಾಮೆಂಟ್ಸ್ ಮಾಡೋಲ್ಲ ಎಂದರು.
ಇದಕ್ಕೂ ಮುನ್ನ, ಈ ಬಗ್ಗೆ ಪ್ರತಿಕ್ರಿಯಿಸಿದ್ದ ಉಪೇಂದ್ರ, 'ನಾನು ನಮ್ಮಣ್ಣ ಸೇರಿ ಜಮೀನು ತೆಗೆದುಕೊಂಡಿದ್ದೇವೆ. ಕೃಷಿಗೆಂದು ತೆಗೆದುಕೊಂಡ ಸ್ಥಳದಲ್ಲಿ ಕೃಷಿ ಮಾಡುತ್ತಿದ್ದೇವೆ. ರೆಸಾರ್ಟ್ ಹಿಂದೆ ಈ ಕೃಷಿ ಭೂಮಿಯಿದೆ. ಕೆ.ಎಸ್.ಡಿಯಿಂದ ನೆರವು ಪಡೆದು ರೆಸಾರ್ಟ್ ಮಾಡಿದ್ದೇವೆ. ಕೋರ್ಟ್ ನಿರ್ಧಾರ ತೆಗೆದುಕೊಂಡಿದೆ. ಹಿರೇಮಠ ಅವರು ಕೋರ್ಟ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಿದ್ದಾರೆ' ಎಂದು ಉಪೇಂದ್ರ ಅವರು ಹಿರೇಮಠ್ ಅವರನ್ನು ಪ್ರಶ್ನಿಸಿದ್ದರು.












Click it and Unblock the Notifications