ಡಿಸೆಂಬರ್‌ನಲ್ಲಿ ಮಾವು ಬೆಳೆ ನಿರ್ವಹಣೆ; ಸಲಹೆಗಳು
ಕಲಬುರಗಿ, ಡಿಸೆಂಬರ್ 07: ಮಾವು ಬೆಳೆಯುವ ರೈತರಿಗೆ ತೋಟಗಾರಿಕಾ ಇಲಾಖೆ ಡಿಸೆಂಬರ್ ತಿಂಗಳಿನ ಸಲಹೆಗಳನ್ನು ನೀಡಿದೆ. ರೈತರು ಮಾವಿನ ಗಿಡಗಳಿಗೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಮಾವು ಬೆಳೆದ ರೈತರು ಈ ತಿಂಗಳಿನಲ್ಲಿ ಮಾವು ಬೆಳೆಗಳಿಗೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸಲಹೆಗಳನ್ನು ನೀಡಿದ್ದಾರೆ.
ಮಾವಿನ ಗಿಡಗಳಿಗೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ವಿಕೃತಗೊಂಡಿರುವ ಹೂ ಗೊಂಚಲು ಮತ್ತು ರೆಂಬೆಗಳನ್ನು ಕತ್ತರಿಸಿ, ಕತ್ತರಿಸಿದ ಭಾಗಕ್ಕೆ ತಾಮ್ರದ ಆಕ್ಸಿಕ್ಲೋರೈಡ್ ಮುಲಾಮನ್ನು ಹಚ್ಚಬೇಕು. ನಂತರ ನ್ಯಾಪ್ತಾಲ್ ಆಸಿಟಿಕ್ ಆಸಿಡ್ (ಫ್ಲಾನೋಪಿಕ್ಸ್) 0.25 ಮಿ.ಲೀ./ಲೀ ದ್ರಾವಣದಿಂದ ಸಿಂಪಡಣೆ ಮಾಡಬೇಕು ಎಂದು ತಿಳಿಸಲಾಗಿದೆ.

ಮಾವಿನ ಜಿಗಿಹುಳು ಹತೋಟಿಗೆ ಮೊದಲನೆಯದಾಗಿ ಹೂ-ಗೊಂಚಲು ಅರಳುವ ಮುಂಚೆ/ ಹೂವಿನ ಮೊಗ್ಗು ಒಡೆಯುವ ಸಂದರ್ಭದಲ್ಲಿ ಇಮಿಡಾಕ್ಲೋಪ್ರಿಡ್ 17.8 (ಕಾನ್ಫಿಡಾರ್, ಇಮಿಡಾಗೋಲ್ಡ್, ಟಾಟಾಮಿಡಾ) (0.3 ಮಿ.ಲೀ./ಲೀ.) ನ್ನು ಸಿಂಪಡಣೆ ಮಾಡಬೇಕು ಎಂದು ಮಾಹಿತಿ ನೀಡಲಾಗಿದೆ.
ಮಾವಿನ ಬೆಳೆಗಳ ನಿರ್ವಹಣೆ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ರೈತರು ತೋಟಗಾರಿಕೆ ಇಲಾಖೆಯ (ಹಾರ್ಟಿ ಕ್ಲಿನಿಕ್) ವಿಷಯ ತಜ್ಞರಾದ ಮಂಜುನಾಥ್ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 7259984026.












Click it and Unblock the Notifications