ಭಾರೀ ಮಳೆ ಈರುಳ್ಳಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

ಬಳ್ಳಾರಿ, ಸೆಪ್ಟೆಂಬರ್ 09: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಜಲವೃತಗೊಂಡಿವೆ. ಹವಮಾನ ವೈಪರಿತ್ಯದಿಂದಾಗಿ ಬೆಳೆಗಳಿಗೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳು ಹಾನಿಯಾಗುವ ಆತಂಕದಲ್ಲಿ ರೈತರಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕು ವ್ಯಾಪ್ತಿಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶಿಲೀಂಧ್ರದ ಬೆಳವಣೆಗೆಯಿಂದ ಕೊಳೆ ರೋಗ ಬಾಧೆಯು ಈರುಳ್ಳಿ ಬೆಳೆಯನ್ನು ಕಾಡುತ್ತಿದೆ.

ತಾಲೂಕಿನ ವಿವಿಧ ಭಾಗಗಳಲ್ಲಿ ಈ ರೋಗ ಕಂಡುಬರುತ್ತಿದ್ದು, ಈರುಳ್ಳಿ ಬೆಳೆಯುವ ರೈತರು ಮುಂಜಾಗ್ರತೆ ಕ್ರಮಗಳನ್ನು ಹಾಗೂ ಔಷದೋಪಚಾರವನ್ನು ಕೈಗೊಳ್ಳಬೇಕು ಎಂದು ಹೂವಿನಹಡಗಲಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Heavy Rains Tips To Farmers To Protect Onion Crop

ಕೈಗೊಳ್ಳಬೇಕಾದ ಕ್ರಮಗಳು; ಪರ್ಯಾಯ ಬೆಳೆ ಪದ್ದತಿಯನ್ನು ಅನುಸರಿಸಬೇಕು. ಪದೇ ಪದೇ ಈರುಳ್ಳಿ ಬೆಳೆಯನ್ನು ಒಂದೇ ಹೊಲದಲ್ಲಿ ಹಲವು ಬಾರಿ ಬೆಳೆಯುತ್ತಿದ್ದರೆ ಕೊಳೆ ರೋಗ ಭಾಧೆಯು ಹೆಚ್ಚಾಗಿ ಬರುತ್ತದೆ.

ಹೊಲದಲ್ಲಿ ನೀರು ನಿಲ್ಲದಂತೆ ಹಾಗೂ ಹೆಚ್ಚಿನ ತೇವಾಂಶ ಇರದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಈರುಳ್ಳಿ ಗಡ್ಡೆಗಳು ಕೊಳೆ ರೋಗಕ್ಕೆ ತುತ್ತಾಗಿ ಬೇಗನೆ ಹಾನಿಯಾಗುತ್ತವೆ. ಬೆಳೆಯಲ್ಲಿ ಕಳೆ ಬಾರದಂತೆ ನಿಯಂತ್ರಿಸಬೇಕು.

ಟ್ರೈಕೋಡರ್ಮಾ 2 ಕಿ. ಗ್ರಾಂ. ಪ್ರತಿ 100 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರಕ್ಕೆ ಚೆನ್ನಾಗಿ ಬೆರಸಿ ಪ್ರತಿ ಎಕರೆ ಹೊಲದಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ಹಾಕಬೇಕು ಇದರಿಂದ ಶೀಲಿಂಧ್ರ ಬೆಳೆವಣೆಗೆಯನ್ನು ತಡೆಯುತ್ತದೆ.

Heavy Rains Tips To Farmers To Protect Onion Crop

Vespa (Propiconazole ಶೇ.13.9+ Difenconazole ಶೇ.13.9 EC) 1 ಮೀಲಿ/ 1 ಲೀಟರ್ ನೀರಿಗೆ + Imidacloprid 17.8 SL 0.3 ml/ 1ಲೀಟರ್ ನೀರಿಗೆ Taqat (Captan ಶೇ.70+ Hexaconazole ಶೇ.5 WP) 2 ಗ್ರಾಂ/ 1 ಲೀಟರ್ ನೀರಿಗೆ + Thiamethoxam 25 wg 0.3 gm 1 ಲೀಟರ್ ನೀರಿಗೆ Amistar Top (Azoxystrobin ಶೇ.20+ Difenoconazole ಶೇ.12.5 SC) 1ಮೀಲಿ/1 ಲೀಟರ್ ನೀರಿಗೆ Merger (Tricyclazole ಶೇ.18 + Mancozeb ಶೇ.62 WP) 2ಗ್ರಾಂ/1 ಲೀಟರ್ ನೀರಿಗೆ Custodia (Azoxystrobin ಶೇ.11 + Tebuconazole ಶೇ.18.3 w/w SC) 1ಮೀಲಿ/1 ಲೀಟರ್ ನೀರಿಗೆ. ಈ ಮೇಲಿನ ಔಷದಿಗಳಲ್ಲಿ ಯಾವುದಾದರು ಒಂದನ್ನು ಬಳಸಬೇಕು. ಎಂಟು ದಿನಗಳ ಅವಧಿಯಲ್ಲಿ 2 ಬಾರಿ ಸಿಂಪರಣೆಯನ್ನು ಕೈಗೊಂಡು ಈರುಳ್ಳಿ ಬೆಳೆಯಲ್ಲಿ ಕೊಳೆ ರೋಗ ಬಾಧೆಯನ್ನು ನಿಯಂತ್ರಿಸಬಹುದು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹನುಮಂತನಾಯ್ಕ ಟಿ. ಮತ್ತು ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ. ಸಿ ಎಂ. ಕಾಲಿಬಾವಿ, ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೀಟ ಶಾಸ್ತ್ರದ ಸಹಾಯಕ ಪ್ರಾಧ್ಯಪಕರಾದ ಡಾ. ಹನುಮಂತಪ್ಪ ಶ್ರೀಹರಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಚಂದ್ರಕುಮಾರ ಎನ್. ಎಲ್ ಮಂತಾದ ಅಧಿಕಾರಿಗಳು ತಾಲೂಕಿನ ವಿವಿಧ ಭಾಗದಲ್ಲಿ ಬೆಳೆಯನ್ನು ಪರಿಶೀಲಿಸಿ ಈ ಸಲಹೆ ನೀಡಿದ್ದಾರೆ.

10 ಎಕರೆ ಜಮೀನು ಒದಗಿಸಿ; ಕೂಡ್ಲಿಗಿ ಹತ್ತಿರದ ಎನ್. ಹೆಚ್. 50ಗೆ ಮೂಲ ಸೌಕರ್ಯ ಒದಗಿಸಲು 10 ಎಕರೆ ಜಮೀನು ನೀಡಲು ಅಸಕ್ತ ಜಮೀನು ಮಾಲೀಕರು ಸಹಾಯಕ ಆಯುಕ್ತರ/ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸಂಪರ್ಕಿಸಿ ಎಂದು ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಹೆದ್ದಾರಿಗಳ ಅಕ್ಕ ಪಕ್ಕ ಪ್ರಯಾಣಿಕರಿಗೆ ಮೂಲ ಸೌಕರ್ಯಗಳನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ನಿರ್ಮಿಸುವ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್. 50ಗೆ ಹೊಂದಿಕೊಂಡ ಒಟ್ಟು 10ಎಕರೆ ಜಮೀನು ಅಗತ್ಯವಿದೆ.

ಮಾಲೀಕರು ಜಮೀನು ನೀಡಲು ಇಚ್ಛಿಸಿದಲ್ಲಿ ಹೊಸಪೇಟೆಯ ಸಹಾಯಕ ಆಯುಕ್ತರು/ ಹೊಸಪೇಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+