ರೈತರ ಸಾಲಮನ್ನಾ: ಕುಮಾರಣ್ಣ ನೀಡಿದ್ದ ಡೆಡ್ ಲೈನ್ ಮುಗೀತು!

Recommended Video

      ರೈತರ ಸಾಲ ಮನ್ನಾಗೆ ಎಚ್ ಡಿ ಕುಮಾರಸ್ವಾಮಿ ವಿಧಿಸಿದ್ದ ಗಡುವು ಮುಕ್ತಾಯದ ಹಂತ | Oneindia Kannada

      ಬೆಂಗಳೂರು, ಡಿಸೆಂಬರ್ 4 : ರಾಜ್ಯದ ಸರಿಸುಮಾರು 44 ಲಕ್ಷ ರೈತರ 46 ಸಾವಿರ ಕೋಟಿ ರೂ ಕೃಷಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಮಗೆ ತಾವೇ ವಿಧಿಸಿಕೊಂಡಿದ್ದ ಡಿಸೆಂಬರ್ 5ರ ಗಡುವು ಮುಕ್ತಾಯವಾಗುತ್ತಾ ಬಂದಿದ್ದು, ಸಾಲ ಮನ್ನಾ ಯೋಜನೆ ಅನುಷ್ಠಾನ ಮರೀಚಿಕೆಯಾಗಿದೆ.

      ರಾಜ್ಯದಲ್ಲಿರುವ ಸರಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು 2 ಲಕ್ಷ ರೂವರೆಗೆ ಸಾಲಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈ ಯೋಜನೆ ಕುರಿತಂತೆ ತೆಗೆದುಕೊಂಡಿರುವ ಹಲವಾರು ಕ್ರಮಗಳ ಹೊರತಾಗಿಯು ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ.

      ಸದ್ಯ ಸಹಕಾರ ವಲಯದ 9,500 ಕೋಟಿ ರೂಗಳ ಸಾಲಮನ್ನಾ ಮಾತ್ರ ಪೂರ್ಣಗೊಂಡಿದ್ದು, ನವೆಂಬರ್ ಅಂತ್ಯದ ವೇಳೆಗೆ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಬಾಕಿ ಸಾಲ ಮನ್ನಾ 8500 ಕೋಟಿ ಸೇರಿದಂತೆ ಒಟ್ಟು 2000 ಕೋಟಿ ರೂಗಳ ಸಾಲಮನ್ನಾ ಮಾತ್ರ ಜಾರಿಗೊಂಡಿದೆ.

      HDKs deadline ends on farmers loan waiver scheme

      ಆದರೆ ಇನ್ನು ಬಾಕಿ ಇರುವ ಸರಿಸುಮಾರು 44 ಸಾವಿರ ಕೋಟಿ ರೂಗಳ ಸಾಲಮನ್ನಾ ಹಾಗೆಯೇ ಉಳಿದಿದೆ. ಇದರಿಂದ ಬೆಳೆಸಾಲದ ಮೇಲಿನ ಬಡ್ಡಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಮುಖಂಡ ಚಾಮರಾಸಮಾಲಿ ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

      ಆದರೆ ರೈತರ ವಾದವನ್ನು ಒಪ್ಪದ ಸಹಕಾರ ಸಚಿವ ಬಂಡೆಪ್ಪ ಕಾಂಶೆಂಪೂರ್ ರಾಜ್ಯದ 20 ಲಕ್ಷ ರೈತರ ಸಹಕಾರ ಸಾಲಮನ್ನಾ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ರೈತರ ಸಾಲದ ದತ್ತಾಂಶಗಳ ಸಂಗ್ರಹ ಪೂರ್ಣಗೊಂಡಿದೆ.

      ಅಲ್ಲದೆ ಜುಲೈನಿಂದ ನವೆಂಬರ್ ಒಳಗಿನ ರೈತರ ಸಾಲದ ಬಾಕಿ ಮೊತ್ತ 1400 ಕೋಟಿ ರೂಗಳನ್ನು ಈಗಾಗಲೇ ಆಯಾ ರೈತರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ರೈತರ ಸಾಲದ ದತ್ತಾಂಶಗಳ ಸಂಗ್ರಹ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಸಾಲಮನ್ನಾ ಯೋಜನೆ ಅನುಷ್ಠಾನ ವಿಳಂಬವಾಗಿರುವುದು ನಿಜ ಆದರೆ ಯೋಜನೆ ಸಂಪೂರ್ಣ ಸ್ಥಗಿತಗೊಂಡಿಲ್ಲ ರಾಜ್ಯ ಸರ್ಕಾರದ ಪರವಾಗಿ, ಹಣವನ್ನು ತುಂಬಲು ಈಗಾಗಲೇ ಕ್ರಮ ಕೈಗೊಂಡಿದ್ದು, ರೈತರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+