ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ಗೆ ತೆರಳಲಿರುವ ಎಚ್ ಡಿಕೆ

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಾಯಕರ ತಂಡದಿಂದ ಇಸ್ರೇಲ್ ಪ್ರವಾಸ. ಆ ದೇಶದ ಕೃಷಿ, ನೀರಾವರಿ ಬಗ್ಗೆ ಅಧ್ಯಯನಕ್ಕಾಗಿ ಪ್ರವಾಸ.

ಬೆಂಗಳೂರು, ಆಗಸ್ಟ್ 26: ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಅನುಸರಿಸುವ ಮೂಲಕ ಅತಿ ಕಡಿಮೆ ಸಂಪನ್ಮೂಲಗಳಲ್ಲಿ ವಿಪುಲವಾದ ಪ್ರತಿಫಲ ಪಡೆಯುತ್ತಿರುವ ಇಸ್ರೇಲ್ ದೇಶಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಎಚ್. ಡಿ. ಕುಮಾರ ಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು, ಹಾಗೂ ರೈತರು ಉಳ್ಳ 10 ಜನರ ತಂಡ ಭೇಟಿ ನೀಡಲಿದೆ.

ಸಂಸದ ಸಿ.ಎಸ್. ಪುಟ್ಟರಾಜು, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ. ರಂಗಪ್ಪ, ಆಯ್ದ ರೈತರುಳ್ಳ ಎಂಟು ಜನರ ತಂಡ ಆಗಸ್ಟ್ 26ರ ಸಂಜೆ ಇಸ್ರೇಲ್ ಗೆ ಪ್ರಯಾಣ ಬೆಳೆಸಲಿದೆ. ಈ ತಂಡವು ಸೆಪ್ಟಂಬರ್ 4ರಂದು ಭಾರತಕ್ಕೆ ವಾಪಸ್ಸಾಗಲಿದೆ ಎಂದು ಮೂಲಗಳು ತಿಳಿಸಿವೆ.

HD Kumaraswamy and his team flys to Isreal to study agriculture, irrigation systems

ನವದೆಹಲಿಯಿಂದ ಆಗಸ್ಟ್ 26ರ ಸಂಜೆ ಇಸ್ರೇಲ್ ಗೆ ಪಯಣಿಸಲಿರುವ ಈ ತಂಡ, ಐದು ದಿನಗಳ ಕಾಲ ಅಲ್ಲಿ ಅಧ್ಯಯನ ನಡೆಸಲಿದೆ ಎಂದು ಹೇಳಲಾಗಿದೆ.

ಅಲ್ಲಿಗೆ ಭೇಟಿ ನೀಡಲಿರುವ ತಂಡ, ಅಲ್ಲಿನ ಕೃಷಿ ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ತೋಟಗಾರಿಕೆ, ಪಶು ಸಂಗೋಪನೆ, ಅಂತರ್ಜಲ ನಿರ್ವಹಣೆ ಮುಂತಾದ ಅನೇಕ ವಿಚಾರಗಳನ್ನು ಅಧ್ಯಯನ ಮಾಡಿ ಬರಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+