ಆಲೂಗಡ್ಡೆ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ಹಾಸನ, ಮೇ 08 : ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧವಾಗುತ್ತಿದ್ದಾರೆ. ಮೇ 11ರಿಂದ ಬಿತ್ತನೆ ಬೀಜ ಮಾರಾಟ ಮಾಡಬಹುದು ಎಂದು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದ್ದು, ದರವವನ್ನು ನಿಗದಿ ಮಾಡಲಾಗಿದೆ.

ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆಯು ಇನ್ನೇನು ಆರಂಭವಾಗಲಿದೆ. ಸಣ್ಣ ಗಾತ್ರದ ಆಲೂಗಡ್ಡೆ ಬಿತ್ತನೆ ಬೀಜಕ್ಕೆ 2,250 ರೂ. ಹಾಗೂ ದಪ್ಪ ಗಾತ್ರದ ಬಿತ್ತನೆ ಬೀಜಕ್ಕೆ 2,150 ರೂ. ಗರಿಷ್ಠ ಮಾರಾಟ ಬೆಲೆಯನ್ನು ಜಿಲ್ಲಾಡಳಿತ ನಿಗದಿ ಮಾಡಿದೆ.

ಮೊದಲು ಮೇ 08 ರಿಂದ ಬಿತ್ತನೆ ಬೀಜದ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ವರ್ತಕರು ಎ.ಪಿ.ಎಂ.ಸಿ ಯಲ್ಲಿಯೇ ವ್ಯಾಪಾರ ಮಾಡುವುದಾಗಿ ಒತ್ತಾಯಿಸುತ್ತಿರುವುದರಿಂದ ಅಲ್ಲಿ ಕೆಲವು ಸಿದ್ಧತೆಗಳನ್ನು ಮಾಡಬೇಕಿದೆ. ಆದ್ದರಿಂದ ಮೇ.11ರಿಂದ ಮಾರಾಟ ಆರಂಭವಾಗಲಿದೆ.

Fixed Rate Announce For Potato Seed Selling

ಆಲೂಗಡ್ಡೆ ಬಿತ್ತನೆ ಬೀಜದ ಬೆಲೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಎಚ್. ಡಿ. ರೇವಣ್ಣ, "ಜಿಲ್ಲೆಯ ರೈತರು ಕೊರೊನಾ ತುರ್ತು ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ, ಅವರಿಗೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ, ಹಾಗಾಗಿ ಈ ಬಾರಿ ಹೆಚ್ಚು ಲಾಭ ಮನೋಭಾವನೆ ಇಟ್ಟುಕೊಳ್ಳದೆ, ವರ್ತಕರು ರೈತರಿಗೆ ನೆರವಾಗಬೇಕು" ಎಂದರು.

ಬಿತ್ತನೆ ಬೀಜದ ಜೊತೆಗೆ ರಸಗೊಬ್ಬರ ಹಾಗೂ ಔಷದಿಗಳು ರೈತರಿಗೆ ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರಿ ಸಂಘಗಳ ಮೂಲಕ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಚ್. ಡಿ. ರೇವಣ್ಣ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ವರ್ತಕರೊಂದಿಗೆ ಚರ್ಚಿಸಿ ಆಲೂಗಡ್ಡೆ ಬಿತ್ತನೆ ಬೀಜದ ಗರಿಷ್ಠ ಬೆಲೆಯನ್ನು ನಿಗದಿಪಡಿಸಿದ ನಂತರ ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕೃತವಾಗಿ ಬಿತ್ತನೆ ಬೀಜದ ಬೆಲೆಗಳನ್ನು ಘೊಷಣೆ ಮಾಡಿದರು.

ಬಿತ್ತನೆ ಬೀಜದ ಮಾರಾಟದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸುವುದು ಹಾಗೂ ಇತರೆ ಎಲ್ಲಾ ಅಗತ್ಯ ಕ್ರಮಗಳನ್ನು ವರ್ತಕರು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಯಿತು.

ಎ.ಪಿ.ಎಂ.ಸಿ ಯಲ್ಲಿಯೇ ಬಿತ್ತನೆ ಬೀಜ ಮಾರಾಟ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಒಪ್ಪಿಗೆ ನೀಡಿದರು. ಹೆಚ್ಚು ಜನಸಂದಣಿಯಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವರ್ತಕರಿಗೆ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+