ಅಡಿಕೆಗೆ ಸಹಾಯ ಧನ ವಿಸ್ತರಣೆಗೊಳಿಸಲು ಸೂಕ್ತ ಕ್ರಮ: ಸಿಎಂ ಬೊಮ್ಮಾಯಿ

ತೋಟಗಾರಿಕೆ ಬೆಳೆ ವ್ಯಾಪ್ತಿಯಲ್ಲಿ ಬರುವ ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಭರವಸೆ ನೀಡಿದರು.

ಚತ್ರದುರ್ಗ, ಮಾರ್ಚ್ 19: ತೋಟಗಾರಿಕೆ ಬೆಳೆ ವ್ಯಾಪ್ತಿಯಲ್ಲಿ ಬರುವ ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಭರವಸೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಹನಿ ನೀರಾವರಿ ಜೊತೆಗೆ ಸೇರಿಸಬೇಕೆಂದು ರೈತರ ಒತ್ತಾಯ ಇದೆ ಎಂಬುದಕ್ಕೆ ಉತ್ತರಿಸಿದರು. ಸಾಕಷ್ಟು ಯೋಜನೆ ಈಗಾಗಲೇ ಹನಿ ನೀರಾವರಿ ಯೋಜನೆಯಡಿ ಇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡಾ 90 ಪ್ರತಿಶದಷ್ಟು ಸಹಾಯಧನ ಒದಗಿಸಲಾಗುತ್ತಿದೆ.

Govt Will Be Taken Action For Extend To Subsidy For Arecanut, CM Basavaraj Bommai

ಅಡಿಕೆ ಬೆಳೆಯು ತೋಟಗಾರಿಕೆಯ ವ್ಯಾಪ್ತಿಗೆ ಬರುತ್ತದೆ. ಸಾಮಾನ್ಯ ವರ್ಗದವರಿಗೆ ಶೇಕಡಾ 50 ರಿಂದ ಶೇಕಡಾ 75 ಪ್ರತಿಶದಷ್ಟು ಹೆಚ್ಚಿಸಿದೆ. ಅಡಿಕೆ ಬೆಳೆ ವ್ಯಾಪ್ತಿ ವಿಸ್ತರಣೆಗೆ ಅಗತ್ಯ ಕ್ರಮ ವಹಿಸಲಾಗುವುದು.

ಅಡಿಕೆಯನ್ನು ವಿದೇಶದಿಂದ ಭಾರತದಕ್ಕೆ ಆಮದು ಮಾಡಿಕೊಳ್ಳುವ ನಿರ್ಧಾರದ ವಿರುದ್ಧ ಸಾಕಷ್ಟು ಆಕ್ಷೇಪಣೆ, ಆಕ್ರೋಶ ವ್ಯಕ್ತವಾಗಿದ್ದವು. ಇದರ ಮಧ್ಯೆ ಹಲವು ದಿನಗಳ ಹಿಂದೆ ಕೇಂದ್ರ ಸರ್ಕಾರವು ಸಹಕಾರಿ ಸಂಸ್ಥೆಗಳ ಮನವಿ ಮಾಡಿದ್ದರಿಂದಾಗಿ ಅಡಿಕೆ ಆಮದ ಮೇಲಿನ ಕನಿಷ್ಠ ದರವನ್ನು ತುಸು ಹೆಚ್ಚಳ ಮಾಡಿತ್ತು. ಈ ನಿರ್ಧಾರವನ್ನು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸ್ವಾಗ​ತಿ​ಸಿ​ತ್ತು. ಕೇಂದ್ರ ಬಿಜೆಪಿ ಸರ್ಕಾರವು ಬಹುದಿನಗಳ ಬೇಡಿಕೆಯಾಗಿದ್ದ ಪ್ರತಿ ಕೆ.ಜಿ. ಅಡಿಕೆ ಬೆಲೆಯನ್ನು ಏರಿಕೆ ಮಾಡಿದೆ. ಆಮದು ಮೇಲಿನ ಕನಿಷ್ಠ ದರ​ ಸದ್ಯ ಕೆ.ಜಿ.ಗೆ 100 ರೂಪಾಯಿ ಹೆಚ್ಚಳ ಮಾಡಿ ಕೇಂದ್ರ ಆದೇಶ ಹೊರಡಿಸಿತ್ತು. ಸದ್ಯ ಹಾಲಿ ಪ್ರತಿ ಕೆ.ಜಿ. ಅಡಿಕೆಗೆ 251 ಇದ್ದು, ಅದರ ಬೆಲೆ ಏರಿಕೆ ಬಳಿಕ 351 ರೂ.ಗೆ ಏರಿಕೆ ಕಂಡಿದೆ.

Govt Will Be Taken Action For Extend To Subsidy For Arecanut, CM Basavaraj Bommai

ಆರ್ಥಿಕ ಸಹಾಯ ಕೇಳಿದ್ದ ಸಚಿವರು

ಇನ್ನೂ ಕರ್ನಾಟಕದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಅಡಿಕೆಗೆ ಎಲೆಚುಕ್ಕೆ ರೋಗ ಬಾಧಿಸುತ್ತಿದೆ.ಅದರ ನಿವಾರಣೆಗಾಗಿ ಅನುಭವಿ ರೈತರು ನೀಡಿದ ಸಲಹೆ ಮೇರೆಗೆ 15 ಕೋಟಿ ಆರ್ಥಿಕ ಸಹಾಯ ಕೇಳಲಾಗಿತ್ತು. ಈ ಸಂಬಂಧ ತೋಟಗಾರಿಕೆ ಸಚಿವ ಎನ್‌.ಮುನಿರತ್ನ ಪ್ರತಿಕ್ರಿಯಿಸಿ, ಹಣಕ್ಕಾಗಿ ಸರ್ಕಾರ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರೇ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಅವರೇ ಖುದ್ದು ತೆರಳಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ರೋಗ ನಿಯಂತ್ರಣದ ಪರಿಹಾರ ಬಗ್ಗೆ ಮಾತನಾಡಿದ್ದರು.

ಶೀಘ್ರವೇ ನೀರಗಂಟಿಗಳ ಸಮಸ್ಯೆಗಳಿಗೆ ಪರಿಹಾರ

ನಗರ ಸ್ಥಳೀಯ ಸಂಸ್ಥೆಗಳು ನೀರಗಂಟಿಗಳು ಹಾಗೂ ಸ್ವಚ್ಚತಾ ಕಾರ್ಯ ಮಾಡುವವರು ಸರ್ಕಾರ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಚುನಾವಣೆ ಸಂದರ್ಭದಲ್ಲಿ ಬಹಳ ಜನ ಪ್ರತಿಭಟನೆ ಮಾಡುತ್ತಾರೆ. ನೀರಗಂಟಿಗಳ ಸಮಸ್ಯೆ ತಿಳಿದಿದ್ದು, ಅವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಚಿತ್ರದುರ್ಗಕ್ಕೆ ಅಮಿತ್ ಶಾ ಭೇಟಿ: ದಿನಾಂಕ ನಿಗದಿಯಾಗಿಲ್ಲ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಇನ್ನೂ ಖಾತ್ರಿಪಡಿಸಿಲ್ಲ. ಬಹಳಷ್ಟು ಪ್ರಸ್ತಾವನೆಗಳು ಹೋಗಿವೆ. ದಿನಾಂಕ ನೋಡಿ ಸೋಮವಾರ ಇಲ್ಲವೇ ಮಂಗಳವಾರ ಅವರ ಭೇಟಿ ಕರಿತು ಖಚಿತಪಡಿಸುವುದಾಗಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+