ಹಾಪ್‌ಕಾಮ್ಸ್: 20ಲಕ್ಷದೊರೆಗಿನ ಹಣ್ಣು-ತರಕಾರಿ ಖರೀದಿಗೆ ಟೆಂಡರ್ ಇಲ್ಲ

ಬೆಂಗಳೂರು, ಮಾರ್ಚ್ 21: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇನ್ನುಮುಂದೆ ಹಾಪ್‌ಕಾಮ್ಸ್ ನಲ್ಲಿ ಮಾಸಿಕ 20 ಲಕ್ಷದವರೆಗೆ ಯಾವುದೇ ಟೆಂಡರ್ ಕರೆಯದೆ ಹಣ್ಣು-ತರಕಾರಿ ಖರೀದಿಸಬಹುದು.ಈ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸರ್ಕಾರಿ ಇಲಾಖೆಗಳು ಮತ್ತು ಅಂಗ ಸಂಸ್ಥೆಗಳು ಕಚೇರಿ ಕ್ಯಾಂಟೀನ್ ಗೆ, ಹಾಸ್ಟೆಲ್ ಗಳಿಗೆ ಹಾಗೂ ಯಾವುದೇ ಸಭೆ-ಸಮಾರಂಭಗಳಿಗೆ ಅಗತ್ಯವಿರುವ ಹಣ್ಣು ಮತ್ತು ತರಕಾರಿಗಳನ್ನು ಯಾವುದೇ ಜಿಲ್ಲಾ ಹಾಪ್‌ಕಾಮ್ಸ್ ಗಳಿಂದ ಮಾಸಿಕ ಗರಿಷ್ಠ 20ಲಕ್ಷ ರೂ.ಮಿತಿಗೊಳಪಟ್ಟು ಖರೀದಿಸಬಹುದು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಅಧಿನಿಯಮ 1999ರ ಕಲಂ 4(ಜಿ) ಅಡಿ ಖರೀದಿಗಾಗಿ ವಿನಾಯಿತಿ ನೀಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ ಪ್ರಕಾರ ಈ ಹಿಂದೆ ಯಾವುದೇ ಸರ್ಕಾರಿ ಸಂಸ್ಥೆ, ಆಸ್ಪತ್ರೆ, ಜೈಲು, ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಗಳು ಹಾಪ್ ಕಾಮ್ಸ್ ನಿಂದ ಹಣ್ಣು-ತರಕಾರಿ ಖರೀದಿಸಲು ಒಂದು ಲಕ್ಷ ರೂ ಮೇಲ್ಪಟ್ಟಿದ್ದರೆ ಅದಕ್ಕೆ ಟೆಂಡರ್ ಕರೆಯಬೇಕಾಗಿತ್ತು.

Govt institutions purchases from Hopcoms without tender

5 ಲಕ್ಷ ರೂ ಮೇಲ್ಪಟ್ಟಿದ್ದರೆ ಆನ್‌ಲೈನ್ ಮೂಲಕ ದರಪಟ್ಟಿಯೊಂದಿಗೆ ಕರೆದು, ನಂತರ ಪೂರ್ವಾಪರಗಳನ್ನು ಚರ್ಚಿಸಿ ಒಪ್ಪಿಗೆಯಾದರೆ ಮಾತ್ರ ಖರೀದಿಸುತ್ತಿದ್ದರು. ಆದರೆ ಇನ್ನುಮುಂದೆ ಟೆಂಡರ್ ಕರೆಯಬೇಕಿಲ್ಲ. ನೇರವಾಗಿ 20ಲಕ್ಷ ರೂವರೆಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ವಿಶ್ವನಾಥ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+