Good News: ರೈತರ ಕೃಷಿ ಸಾಲ ಮನ್ನಾ ಮಾಡಿದ ಜಾರ್ಖಂಡ್ ಸರ್ಕಾರ-ಎಷ್ಟು? ಇಲ್ಲಿದೆ ಮಾಹಿತಿ
Jharkhand Election 2024: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಇನ್ನು ದಿನಾಂಕ ಘೋಷಣೆಯಾಗಿಲ್ಲ. ಆದರೆ ಈಗಿನಿಂದಲೇ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ. ಇದರ ನಡುವೆಯೇ ಇದೀಗ ಜಾರ್ಖಂಡ್ ಸರ್ಕಾರ ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹಾಗಾದರೆ ಆ ಶುಭಸುದ್ದಿ ಏನು ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಜಾರ್ಖಂಡ್ ವಿಧಾನಸಭೆ ಚುನಾವಣೆ ದಿನಾಂಕದ ಘೋಷಣೆಯೊಂದೇ ಬಾಕಿಯಿದೆ. ಈಗಾಗಲೇ ಚುನಾವಣಾ ಆಯೋಗ ರಾಜ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಿ ಅಲ್ಲಿನ ಪರಿಸ್ಥಿತಿಗಳನ್ನು ಪರೀಶಿಲಿಸಿದೆ ಹಾಗೂ ಚುನಾವಣೆ ನವೆಂಬರ್‌ನಲ್ಲಿ ಅಂದರೆ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನುವ ಸೂಚನೆಯನ್ನೂ ನೀಡಿತ್ತು. ಇದರ ನಡುವೆಯೇ ಇದೀಗ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

ಜಾರ್ಖಂಡ್ ಸರ್ಕಾರವು ಎರಡು ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡಿದೆ. ಇದರಿಂದ ಇಲ್ಲಿನ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು 1,76,977 ರೈತರ 400.66 ಕೋಟಿ ರೂಪಾಯಿ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ಪ್ರಮುಖ ಬೇಡಿಕೆಯಲ್ಲಿ ಇದು ಒಂದಾಗಿದ್ದು, ಇದು ಈಡೇರಿದಂತಾಗಿದೆ.
2,00,000 ರೂಪಾಯಿವರೆಗಿನ ಸಾಲ ಮನ್ನಾ ಮಾಡಿ ಜಾರ್ಖಂಡ್ ಸರ್ಕಾರವು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು 1,76,977 ರೈತರ 400.66 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ, ಜಾರ್ಖಂಡ್‌ನ ಹೇಮಂತ್ ಸೊರೆನ್ ಸರ್ಕಾರವು ತನ್ನ ಪ್ರಮುಖ ಭರವಸೆಗಳಲ್ಲಿ ಒಂದನ್ನು ಈಡೇರಿಸಿದೆ.
ಈ ಹಿಂದೆ ಸೊರೆನ್ ಸರ್ಕಾರ ಮಯ್ಯಾ ಸಮ್ಮಾನ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಡಿ, ಮಹಿಳೆಯರಿಗೆ ಆಗಸ್ಟ್‌ನಿಂದ ಪ್ರತಿ ತಿಂಗಳು 1,000 ರೂಪಾಯಿ ಅಲ್ಲದೆ, ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ಸಹ ಮನ್ನಾ ಮಾಡಲಾಗುತ್ತಿದೆ. ಅಲ್ಲದೆ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
"ನಾವು ಮೊದಲ ಹಂತದಲ್ಲಿ 50,000 ರೂಪಾಯಿವರೆಗೆ ಸಾಲ ಮನ್ನಾ ಮಾಡಲು ಮತ್ತು ರೈತರಿಗೆ ಪ್ರಯೋಜನಗಳನ್ನು ನೀಡಲು ಯೋಜಿಸಿದ್ದೇವೆ. ಒಮ್ಮೆ ರೈತರು ಪ್ರತಿಕೂಲ ಹವಾಮಾನದಿಂದ ಹಾನಿಗೊಳಗಾದರೆ, ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ನಾವು ರಾಜ್ಯದ ಸುಮಾರು 38,00,000 ರೂಪಾಯಿ ನೋಂದಾಯಿತ ರೈತರ 2,00,00 ರೂಪಾಯಿವರೆಗಿನ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೇವೆ. ಇಂದು ಇದರಡಿಯಲ್ಲಿ ಸುಮಾರು 400 ಕೋಟಿ ರೂಪಾಯಿ ಮೊತ್ತದ ಸಾಲ ಮನ್ನಾ ಮಾಡಲಾಗುತ್ತಿದೆ," ಎಂದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಅಜಯ್ ಶಾ ಅವರು, "ಹೇಮಂತ್ ಸರ್ಕಾರ ಸಾಧನೆ ಮಾಡುವಲ್ಲಿ ವಿಫಲ ಆಗಿದೆ. ಕಳೆದ 5 ವರ್ಷದಲ್ಲಿ ಯಾವುದೇ ಅರ್ಥಪೂರ್ಣ ಪ್ರಗತಿ ಆಗಿಲ್ಲ. ಇದೀಗ ಅವರ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನು ಚುನಾವಣೆಯಲ್ಲಿ ಹಿನ್ನೆಲೆ ಅನುಭವಿಸುವ ಭಯದಲ್ಲಿ ಇಂತಹ ತುರಾತುರಿಯ ನಿರ್ಧಾರ ಕೈಗೊಂಡಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸೊರೇನ್ ಮಾತನಾಡಿ, "ಇಂದು ನಾವು ರೈತರನ್ನು ಗೌರವಿಸುತ್ತಿದ್ದೇವೆ. ಇದಕ್ಕೂ ಬಿಜೆಪಿ ಅಡ್ಡಿಪಡಿಸಬಾರದು. ಏಕೆಂದರೆ ನಿಮ್ಮ ಅಭಿವೃದ್ಧಿಗೆ ಏನೇ ಕೆಲಸ ಮಾಡಿದರೂ ಬಿಜೆಪಿಯವರು ಅದಕ್ಕೆ ಅಡ್ಡಿ ಮಾಡುತ್ತಾರೆ. ಇನ್ನು ರಾಜ್ಯದಲ್ಲಿ ಶೇಕಡ 80ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ರೈತರ ವಿರುದ್ಧ ಸಂಚು ರೂಪಿಸಿದೆ," ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications