ಬೆಳೆಸಾಲ ಮನ್ನಾ: 2005 ರಿಂದ 2018ರ ಮಾರ್ಚ್ ವರೆಗೂ ವಿಸ್ತರಿಸಲು ಆಗ್ರಹ
ಬೆಂಗಳೂರು, ಜೂನ್ 2: ರಾಜ್ಯ ಸರ್ಕಾರ ಪ್ರಕಟಿಸಿರುವ ಸಾಲ ಮನ್ನಾ ಯೋಜನೆಯಲ್ಲಿ ಹಲವಾರು ತಿದ್ದುಪಡಿಗಳು ಅವಶ್ಯಕವಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸಾಲ ಮನ್ನಾ ರೈತರಿಗೆ ಬಿಕ್ಷೆಯಲ್ಲ ,ಸರ್ಕಾರಗಳು ಹಿಂದಿನಿಂದಲು ಕೃಷಿ ಉತ್ಬನಗಳಿಗೆ ಭೆಂಬಲ ಬೆಲೆ ಅವೈಜ್ಞಾನಿಕ ವಾಗಿ ನಿಗದಿ ಮಾಡಿದ ಕಾರಣ ರೈತ ನಷ್ಟ ಅನುಭವಿಸಿರುವ ಹಣವನ್ನು ಈ ಮೂಲಕ ತುಂಬಿಕೂಡುತ್ತದೆ ಎಂದು ಸ್ಪಷ್ಟಪಡಿಸಲಿ ಎಂದಿದ್ದಾರೆ.
ಬೆಳೆ ಸಾಲ ಮನ್ನಾ ಅವಧಿಯನ್ನು ಏಪ್ರಿಲ್1, 2009ರಿಂದ ಡಿಸೆಂಬರ್ 31 2017ರವರೆಗೆ ನಿಗದಿ ಪಡಿಸಿರುವುದು ಹೆಚ್ಚು ರೈತರು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ . ಕಬ್ಬುಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ವಿಳಂಬವಾಗಿ ಹಣ ಪಾವತಿ ಮಾಡಿದರೆ ಇದರಿಂದ ಹೆಚ್ಚು ರೈತರಿಗೆ ಸಾಲ ನವೀಕರಣವಾಗಿದೆ, ಇದು ಸಾಲ ಮನ್ನಾ ಯೋಜನೆ ಗೆ ಒಳಪಡುವುದಿಲ್ಲ ಆದ್ದರಿಂದ ಏಪ್ರಿಲ್ 1 2005ರಿಂದ ಮಾರ್ಚ್ 2018ರವರೆಗೂ ಯೋಜನೆಯನ್ನು ವಿಸ್ತರಿಸಬಕು ಎಂದು ಒತ್ತಾಯಿಸಿದ್ದಾರೆ.

ರೈತರು ಭೂಮಿ ದಾಖಲೆ ಇಲ್ಲದೆ. ಚಿನ್ನಗಿರವಿ ಇಟ್ಟು ಪಹಣಿ ಪತ್ರ ನೀಡಿ ಸಾಲ ಪಡೆದಿರುವ ಸಾಲವನ್ನು ಮನ್ನಾ ಮಾಡಲೇಬೇಕು. ರೈತರು ಬೆಳೆ ಸಾಲ ಮಾಡಿ ಮರುಪಾವತಿ ಮಾಡಲು ಸಾಧ್ಯವಾಗದೆ ಕಾರಣ ನ್ಯಾಯಾಲಯಗಳಲ್ಲಿ ದಾವೆ ಹೂಡಿರುವ ಪ್ರಕರಣಗಳಿಗೂ ಸಾಲ ಮನ್ನಾ ಆಗಲೇಬೇಕು
ರಾಜ್ಯದ ರೈತರು ಬೆಳೆ ಸಾಲವನ್ನು ಬಹುರಾಷ್ಟ್ರೀಯ ಬ್ಯಾಂಕುಗಳಾದ ಎಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಗಳಿಂದಲೂ ಬೆಳೆಸಾಲವನ್ನು ಪಡೆದಿರುತ್ತಾರೆ ಈ ಸಾಲವನ್ನು ಮನ್ನಾಮಾಡಬೇಕು. ಹಳ್ಳಿಯ ರೈತರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಸಹ ಸಾಲ ಪಡೆದಿದಾರೆ ಇಂತಹ ರೈತರಿಗೆ ಬೆಳೆ ಸಾಲ ಮನ್ನ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.












Click it and Unblock the Notifications