ವಿಡಿಯೋ : ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರೈತರು
Recommended Video

ಬೆಳಗಾವಿ, ನವೆಂಬರ್ 19 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಬಗ್ಗೆ ನೀಡಿದ್ದ ಒಂದು ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ರೈತರು ವಿಡಿಯೋ ಮೂಲಕ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಬ್ಬು ಬೆಳೆಗಾರರು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಭಾನುವಾರ ಲಾರಿಯನ್ನು ನುಗ್ಗಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಮಹಿಳೆಗೆ ನೋವಾಗುವಂತೆ ಮಾತನಾಡಿದ್ದರು. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣಾಗಿದೆ.

'ಸುವರ್ಣ ಸೌಧಕ್ಕೆ ನುಗ್ಗಿದ್ದು ರೈತರಲ್ಲ, ನಮ್ಮ ರೈತರು ಶಾಂತಿ ಪ್ರಿಯರು, ಪ್ರತಿಭಟನೆ ನಡೆಸಿದ್ದು ಗೂಂಡಾಗಳು' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆದ್ದರಿಂದ, ಇಂದು ರೈತರು ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ವಿಡಿಯೋದಲ್ಲಿ ಏನಿದೆ? : ಕೇಳ್ರಪ್ಪೋ ಕೇಳಿ...ಕರ್ನಾಟಕದ ಮಹಾ ಜನರೇ ಕೇಳಿ. ರೈತರು ಎಂದರೆ ಯಾರು? ದೇವೇಗೌಡರು, ದೇವೇಗೌಡರ ಮಕ್ಕಳು, ಅವರ ಮೊಮ್ಮಕ್ಕಳು, ಅವರ ಸೊಸೆಯಂದಿರು, ಅವರ ಮರಿಮಕ್ಕಳು ಮಾತ್ರ ರೈತರು.
ಪ್ರತಿಭಟನೆ ಮಾಡುವವರು, ಹಸಿರು ಶಾಲು ಹಾಕಿಕೊಂಡಿರುವವರು ಅವರೆಲ್ಲರೂ ಕಳ್ಳರು, ದರೋಡೆಕೋರರು ಕೇಳ್ರಪ್ಪೋ ಕೇಳಿ ಎಂದು ರೈತರು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications