ಹಾಲಿನ ಉತ್ಪನಗಳ ಮೇಲಿನ ಆಮದು ಸುಂಕ ನೀತಿ ಖಂಡಿಸಿ ರಸ್ತೆ ತಡೆದ ರೈತರು

ರಾಮನಗರ, ಅಕ್ಟೋಬರ್ 24: ಕೇಂದ್ರ ಸರ್ಕಾರ ವಿದೇಶಿ ಹಾಲು ಹಾಗೂ ಹಾಲು ಉತ್ಪನ್ನಗಳ ಮೇಲಿನ ಸುರಿ ಸುಂಕ ರದ್ದು ಮಾಡಿ ಭಾರತಕ್ಕೆ ಆಮದು ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು ಈ ನಡೆಯನ್ನು ವಿರೋಧಿಸಿ ಇಂದು ರಾಮನಗರ ಜಿಲ್ಲೆಯ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ರಾಮನಗರದ ಕಂದಾಯ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ದನಕರುಗಳನ್ನು ರಸ್ತೆಯಲ್ಲಿ ಹಿಡಿದುಕೊಂಡು ಮೆರವಣಿಗೆ ನಡೆಸಿದರು.

ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಬೇಕೆಂದು ರೈತರು ಕಚೇರಿಯ ಬಳಿ ಬಂದಾಗ ಪೊಲೀಸರು ಕಚೇರಿಯ ಒಳಗೆ ಪ್ರವೇಶ ನೀಡಲು ನಿರಾಕರಿಸಿ ಗೇಟ್ ಬಂದ್ ಮಾಡಿದರು. ಈ ವೇಳೆ ರೊಚ್ಚಿಗೆದ್ದ ರೈತರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ರೈತರನ್ನು ಸಮಾಧಾನಪಡಿಸಿ ಕಚೇರಿಯ ಒಳಗೆ ಪ್ರವೇಶ ನೀಡಿದರು. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸ್ಥಳಕ್ಕೆ ಬಂದು ರೈತರ ಮನವಿ ಸ್ವೀಕರಿಸಿದರು. ಇವತ್ತು ನಡೆದ ಹೋರಾಟದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ರೈತರು, ಹಾಲು ಉತ್ಪಾದಕರು ಸೇರಿದಂತೆ ವಿವಿಧ ಪಕ್ಷದ ರಾಜಕೀಯ ಮುಖಂಡರು ಭಾಗಿಯಾಗಿದ್ದರು.

Farmers Protest Against The Governments Import Tariff Policy On Milk Products

ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಎಂ.ರಾಮು, "ಕೇಂದ್ರ ಸರ್ಕಾರ ಹೈನುಗಾರಿಕೆ ಉದ್ಯಮವನ್ನು ಮುಕ್ತ ಮಾರುಕಟ್ಟೆ ನೀತಿಯಿಂದ ಹೊರಗಿಡಬೇಕು, ಇಲ್ಲವಾದಲ್ಲಿ ಹೈನುಗಾರಿಕೆಯನ್ನೇ ನಂಬಿರುವ ರಾಜ್ಯದ 80% ಜನ ಉದ್ಯೋಗ ಕಳೆದುಕೊಂಡು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳ ಬೇಕಾಗುತ್ತದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಹಾಲಿನ ಮೇಲಿನ ಪ್ರಸಕ್ತ ವಿಧಿಸುತ್ತಿರುವ ಸುಂಕವನ್ನು ರದ್ದು ಮಾಡದೆ ಮುಂದುವರೆಸೆಬೇಕು" ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+