10 ಗಂಟೆ ವಿದ್ಯುತ್ ನೀಡಲು ರೈತರೇ ಬೇಡ ಎಂದಿದ್ದಾರೆ: ಕುಮಾರಸ್ವಾಮಿ
ಬೆಳಗಾವಿ, ಡಿಸೆಂಬರ್ 11: ಹಗಲಿನಲ್ಲಿ ಸತತ 10 ಗಂಟೆ ಪಂಪ್‌ಸೆಟ್‌ಗೆ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದೆ ಆದರೆ ರೈತರೇ ಇದಕ್ಕೆ ಬೇಡ ಎಂದಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಇಂದು ಸದನಕ್ಕೆ ತಿಳಿಸಿದರು.
ರೈತರ ಪಂಪ್‌ಸೆಟ್‌ಗೆ ವಿದ್ಯುತ್ ನೀಡುವಲ್ಲಿ ಆಗುತ್ತರುವ ವ್ಯತ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೆಚ್ಚು ವಿದ್ಯುತ್ ನೀಡಿದರೆ ಹೆಚ್ಚು ಕಾಲ ಪಂಪ್‌ಸೆಟ್ ಓಡಿ ಅಂತರ್ಜಲ ಬೇಗ ಖಾಲಿ ಆಗುತ್ತದೆ ಹಾಗಾಗಿ ಹೆಚ್ಚು ವಿದ್ಯುತ್ ಬೇಡವೆಂದು ಕೆಲವು ರೈತರೇ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಅವರು ಹೇಳಿದರು.
ಈಗ ದಿನಕ್ಕೆ 7 ಗಂಟೆ ಕಾಲ ಕೃಷಿಗೆ 3 ಫೇಸ್ ವಿದ್ಯುತ್ ನೀಡಲಾಗುತ್ತಿದೆ. ನಿರಂತರ ಜ್ಯೋತಿ ಪೂರ್ಣಗೊಂಡಿರುವ ಕಡೆ ದಿನದ 20 ರಿಂದ 22 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ಗುಣಮಟ್ಟ ಹೆಚ್ಚಿಸಲು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯವು ಬರದಿಂದ ನಲುಗುತ್ತಿದೆ, ನೀರಿನ ಅವಶ್ಯಕತೆ ಇದೆ ಹಾಗಾಗಿ ಏಳು ಗಂಟೆ ಬದಲಿಗೆ ಗ್ರಾಮೀಣ ಭಾಗಗಳಿಗೆ 10 ಗಂಟೆ ವಿದ್ಯುತ್ ನೀಡಿ ಎಂದು ಅವರು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರು ಆಗ್ರಹಿಸಿದರು.
ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆ ಅಘೋಷಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಆದರೆ ಸರ್ಕಾರವು ಇದೇ ವೇಳೆ ಗ್ರಾಮೀಣ ಭಾಗಗಳಿಗೂ 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದಿದೆ.












Click it and Unblock the Notifications