ರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿ

Recommended Video

      ರೈತರ ಆಕ್ರೋಶಕ್ಕೆ ಗುರಿಯಾಗಿ ಭಾವುಕರಾದ ಎಚ್ ಡಿ ಕುಮಾರಸ್ವಾಮಿ

      ಬೆಂಗಳೂರು, ಡಿಸೆಂಬರ್ 06: ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ ಸಾಲಮನ್ನಾ ಕುರಿತಾಗಿ 'ನಾನು ಬೇರೆಯವರ ಹಂಗಿನಲ್ಲಿದ್ದೇನೆ' ಎಂದು ಹೇಳಿ ಭಾರಿ ವಿವಾದ ಎದುರುಹಾಕಿಕೊಂಡಿದ್ದರು. ಇಂದು ಮತ್ತೆ ಅದೇ ರೀತಿಯ ಮಾತನ್ನು ಸಿಎಂ ಆಡಿದ್ದಾರೆ.

      ಇಂದು ವಿಧಾನಸೌಧದಲ್ಲಿ ರೈತರ ಜೊತೆಗಿನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಮತ್ತೆ ತಾವು ಬೇರೆಯವರ ಹಂಗಿನಲ್ಲಿರುವುದಾಗಿ ಹೇಳಿದ್ದಾರೆ.

      ಸಭೆಯಲ್ಲಿ ರೈತರು ಸಾಲಮನ್ನಾ ವಿಷಯವಾಗಿ ಸಿಎಂ ಕುಮಾರಸ್ವಾಮಿ ಮೇಲೆ ಸಿಟ್ಟಿನಿಂದ ಮಾತನಾಡಿದರು. ಇದರಿಂದ ಬೇಸರಗೊಂಡ ಕುಮಾರಸ್ವಾಮಿ ಭಾವುಕವಾಗಿ ಮಾತನಾಡುತ್ತಾ, 'ನಾನು ಬೇರೆಯವರ ಹಂಗಿನಲ್ಲಿದ್ದೇನೆ, ಹಾಗಾಗಿ ಎಲ್ಲ ನಿರ್ಣಯಗಳೂ ನಾನೇ ಮಾಡಲಾಗದು' ಎಂದು ಹೇಳಿದರು.

      ಭಾವುಕರಾದ ಸಿಎಂ ಕುಮಾರಸ್ವಾಮಿ

      ಭಾವುಕರಾದ ಸಿಎಂ ಕುಮಾರಸ್ವಾಮಿ

      ಸಭೆಯಲ್ಲಿ ಭಾವುಕರಾದ ಸಿಎಂ, ಯಾವುದೇ ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನು ಕಣ್ಣೀರು ಹಾಕುತ್ತೇನೆ ಎಂದು ಹೇಳಿದರು. ಸಾಲಮನ್ನಾ ಮಾಡಿಯೇ ಸಿದ್ಧ ಎಂದ ಅವರು, ಕೆಲವು ಮಾಹಿತಿಗಳನ್ನು ರೈತರ ಮುಂದೆ ಇಟ್ಟರು.

      ಈಗ ಒಂದು ಲಕ್ಷ ಸಾಲಮನ್ನಾ

      ಈಗ ಒಂದು ಲಕ್ಷ ಸಾಲಮನ್ನಾ

      ರಾಷ್ಟ್ರೀಯ ಬ್ಯಾಂಕುಗಳ ಒಂದು ಲಕ್ಷ ಸಾಲವನ್ನು ಈ ವರ್ಷ ಮತ್ತು ಇನ್ನೊಂದು ಲಕ್ಷ ಸಾಲವನ್ನು ಮುಂದಿನ ವರ್ಷ ಕಂತಿನಂತೆ ಮನ್ನಾ ಮಾಡಲಾಗುವುದು. ಸಹಕಾರಿ ಬ್ಯಾಂಕುಗಳ 50000 ಸಾವಿರ ಸಾಲಮನ್ನಾ ಮಾಡಲಾಗುವುದು ಎಂದು ಸಿಎಂ ಹೇಳಿದರು.

      ಸಿಎಂ ವಿರುದ್ಧ ರೈತರು ಗರಂ

      ಸಿಎಂ ವಿರುದ್ಧ ರೈತರು ಗರಂ

      ರೈತರೊಂದಿಗಿನ ಸಭೆಯಲ್ಲಿ ಆರಂಭದಲ್ಲಿ ಸಿಎಂ ವಿರುದ್ಧ ರೈತರು ಗರಂ ಆಗಿದ್ದರು. ಸಾಲಮನ್ನಾ ಇನ್ನೂ ಆಗಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಸಹಕಾರಿ ಬ್ಯಾಂಕಿನ ಸಾಲಮನ್ನಾ ಬಹಳ ಕಡಿಮೆ ಆಯಿತು ಉಪಯೋಗಕ್ಕೆ ಬಾರದು ಎಂದು ಕೆಲವರು ಆಕ್ರೋಶಗೊಂಡರು.

      ಸಮಾಧಾನವಾದರು ರೈತರು

      ಸಮಾಧಾನವಾದರು ರೈತರು

      ಸಿಎಂ ಅವರು ಭಾವಕರಾಗಿ ಮಾತನಾಡಿ, ಸಾಲಮನ್ನಾದ ಮಾಹಿತಿಯನ್ನು ರೈತರ ಮುಂದೆ ಇಟ್ಟನಂತರ ರೈತರು ಸಮಾಧಾನಗೊಂಡರು. ವಿಧಾನಸೌಧದಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ವಿವಿಧ ಜಿಲ್ಲೆಯ ರೈತರು ಭಾಗವಹಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+