ಚಿಕ್ಕಮಗಳೂರು: 10 ಹೆಕ್ಟೇರ್‌ ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್‌ ಚಲಾಯಿಸಿದ ಅನ್ನದಾತ, ಕಾರಣ ಏನು?

ಚಿಕ್ಕಮಗಳೂರು, ಮೇ, 30: ಸಾವಿರಾರು ರೂಪಾಯಿ ಖರ್ಚು ಮಾಡಿ ಆಲೂಗಡ್ಡೆ ಬೀಜವನ್ನು ಬಿತ್ತನೆ ಮಾಡಿ 15 ದಿನ ಕಳೆದರೂ ಬೆಳೆ ಮಾತ್ರ ಕಾಣಿಸಿಕೊಂಡಿಲ್ಲ. ಇದರಿಂದ ಮನನೊಂದ ರೈತ ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಇನ್ನುಳಿದ ಸಂಪೂರ್ಣ ಬೆಳೆಯನ್ನೇ ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ.

ಕೇವಲ 5 ದಿನಕ್ಕೆ ಬೆಳೆಯುತ್ತದೆ ಎಂದು ಹಾಸನದ ಆಲೂಗಡ್ಡೆ ಮಂಡಿಯಿಂದ ಸಿರ್ಗಾಪುರ ಗ್ರಾಮದ 60-70 ರೈತರು ಮೂರು ಲಾರಿಯಲ್ಲಿ ಆಲೂಗಡ್ಡೆ ಬೀಜವನ್ನು ತಂದಿದ್ದರು. ಆದರೆ 15 ದಿನ ಕಳೆದರೂ ಬೆಳೆ ಬಾರದ ಹಿನ್ನೆಲೆ ರೈತರೊಬ್ಬರು ತಮ್ಮ 10 ಹೆಕ್ಟೇರ್‌ ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿ ಇನ್ನುಳಿದ ಬೆಳೆಯನ್ನು ನಾಶ ಮಾಡಿದ್ದಾರೆ. ಅಲ್ಲದೆ ಇದೀಗ ಕಳಪೆ ಗುಣಮಟ್ಟದ ಬೀಜ ಕೊಟ್ಟಿದ್ದಾರೆ ಎಂದು ಆಲೂಗಡ್ಡೆ ಮಂಡಿ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Farmer who destroyed 10 hectares potato crops at Sirgapura villege

ತುರ್ತು ಪರಿಹಾರ ನೀಡಬೇಕು

ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ, ತೋಟದ ಬೆಳೆಗಳು ಹಾಗೂ ಬಡವರ ಮನೆಗಳು ಹಾಳಾಗಿದ್ದು, ತುರ್ತು ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಸಂಘದ ಬಲ್ಲೂರು ರವಿಕುಮಾರ್ ಅವರು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 53,700 ಹೆಕ್ಟೇರ್ ಭತ್ತ ಬೆಳೆದಿದ್ದು, 700 ಹೆಕ್ಟೇರ್ ಹಾಳಾಗಿದೆ. ಇದರಿಂದ 105 ಕೋಟಿ ರೂಪಾಯಿ ನಷ್ಟ ಆಗಲಿದೆ. ಪ್ರತಿ ಹೆಕ್ಟೇರ್‌ಗೆ 30 ಸಾವಿರ ರೂಪಾಯಿ ಖರ್ಚಾಗಲಿದೆ. ಗೊಬ್ಬರ, ಯಂತ್ರೋಪಕರಣ ಬಂಡವಾಳ ಸೇರಿದಂತೆ ಇಷ್ಟು ಖರ್ಚು ಬರುತ್ತದೆ. ಈ ಹಿನ್ನೆಲೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಒಂದು ಲಕ್ಷದ 20 ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬೆಳೆದಿದ್ದು, ಇದರಲ್ಲು 86 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಜಗಳೂರಿನಲ್ಲಿ 31.2 ಹೆಕ್ಟೇರ್, ದಾವಣಗೆರೆ 45 ಹೆಕ್ಟೇರ್, ಚನ್ನಗಿರಿ 37 ಹೆಕ್ಟೇರ್ ಹಾಳಾಗಿದೆ. ಇದರಲ್ಲಿ 21 ಹೆಕ್ಟೇರ್ ಬಾಳೆ, 5 ಹೆಕ್ಟೇರ್ ಪಪ್ಪಾಯಿ ನೀರುಪಾಲಾಗಿದೆ ಎಂದು ಮಾಹಿತಿ ನೀಡಿದರು.

ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ, ತೋಟದ ಬೆಳೆಗಳು, ಬಡವರ ಮೆನೆಗಳು ಹಾಳಾಗಿದ್ದು, ತುರ್ತು ಕ್ರಮ ತೆಗೆದುಕೊಳ್ಳಬೇಕು. ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯ ಹಾಗೂ ತಾಲೂಕಿನ ಕಸಬಾ ಹೋಬಳಿಗಳು, ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿ, ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಹೋಬಳಿಗಳಲ್ಲಿ ಭತ್ತದ ಬೆಳೆಗಳು ಹಾಳಾಗಿವೆ.

ಭತ್ತದ ಮಾರುಕಟ್ಟೆಯಲ್ಲಿ 2,200 ರೂಪಾಯಿ ರಿಂದ 2,300 ರೂಪಾಯಿ ದರ ಇದೆ. ಪ್ರಸ್ತುತ 40 ರಿಂದ 50 ಚೀಲ ಇಳುವರಿ ಬರುತ್ತಿದ್ದು, ಪ್ರತಿ ಹೆಕ್ಟೇರ್‌ಗೆ 75,000 ರಿಂದ 80,000 ರೂಪಾಯಿ ಹಣ ಸಿಗುತ್ತದೆ. ಆದರೆ ಅಕಾಲಿಕ ಮಳೆಯಿಂದ ಇದೀಗ ಸುಮಾರು 60,000 ರೂಪಾಯಿ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರ ಭೂಮಿಯ ಉಳುಮೆ, ಗೊಬ್ಬರ ಔಷಧಿ ಮತ್ತು ಕೂಲಿ ಕೆಲಸಕ್ಕೆ ಪ್ರತಿ ಹೆಕ್ಟೇರ್‌ಗೆ 30,000 ರೂಪಾಯಿ ವೆಚ್ಚ ಆಗುತ್ತದೆ. ಆದ್ದರಿಂದ ಪ್ರತಿ ಹೆಕ್ಟೇರ್‌ 50,000 ರೂಪಾಯಿ ಸರ್ಕಾರದಿಂದ ರೈತರ ಖಾತೆಗೆ ಜಮಾ ಮಾಡಬೇಕು. ತೋಟದ ಬೆಳೆಗಳಾದ ಬಾಳೆ, ಎಲೆ, ಮಾವು ಸೇರಿದಂತೆ ಇತರೆ ತೋಟಗಳು ಮಳೆ ಮತ್ತು ಆಲಿಕಲ್ಲು ಮಳೆಯಿಂದ ನಾಶವಾಗಿದೆ ಎಂದು ರೈತರು .

ನಾವು ಇದೀಗ ಬೆಳೆ ನಷ್ವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ 50,000 ರೂಪಾಯಿ ಭರಿಸಬೇಕು. ಮತ್ತೊಂದೆಡೆ ಬಡವರ ಮನೆಗಳ ಮೇಲ್ಚಾವಣಿಗಳು ಗಾಳಿ, ಮಳೆಯಿಂದ ಹಾರಿ ಹೋಗಿದ್ದು, ಇಂತಹ ಬಡವರ ಮನೆಗಳನ್ನು ಗುರುತಿಸಿ ಸರ್ಕಾರ ತಾತ್ಕಾಲಿಕ ಪರಿಹಾರವನ್ನು ನೀಡಬೇಕು. ಹಾಗೆಯೆ ಶಾಶ್ವತ ಪರಿಹಾರವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+