ರೈತರ ಕಷ್ಟಕ್ಕೆ ಸ್ಪಂದಿಸಿದ ನಿವೃತ್ತ ಅಧಿಕಾರಿ; ಗ್ರಾಹಕರಿಗೆ ಸಿಕ್ಕಿತು ತಾಜಾ ಹಣ್ಣು

ದಾವಣಗೆರೆ, ಜೂನ್ 02 : ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ಉದ್ಯೋಗಿ. ನಿವೃತ್ತಿಯ ಸಮಯದಲ್ಲಿಯೂ ರೈತರಿಗೆ ಸಹಾಯಕವಾಗುವ ಕಾರ್ಯಕ್ರಮ ರೂಪಿಸಿದ್ದಾರೆ. ರೈತರ ಜೊತೆ ಸಭೆ ನಡೆಸಿ 'ರೈತರಿಂದ ನೇರವಾಗಿ ಗ್ರಾಹಕ' ಎನ್ನುವ ವೇದಿಕೆ ಸಿದ್ಧಪಡಿಸಿ, ರೈತರಿಗೆ ನೆರವಾಗಿದ್ದಾರೆ.

Recommended Video

      ಯಾರಿಂದ ಅಧಿಕಾರ ಕಳೆದುಕೊಂಡೆ ಅಂತಾ ನನಗೆ ಗೊತ್ತು | HD Kumaraswamy | Oneindia Kannada

      ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ 'ರೈತರಿಂದ ಗ್ರಾಹಕರಿಗೆ ನೇರ ಮಾರಾಟ' ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದವರು ಡಾ. ಟಿ. ಹೆಚ್. ಗೌಡ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣಾ ನಿರ್ದೇಶಕರು.

      ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ರೈತರ ಸಭೆ ಸೇರಿಸಿ ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿಸಿದ್ದಾರೆ. ನೇರ ಮಾರಾಟ ವ್ಯವಸ್ಥೆಯಿಂದ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತು ಲಾಭ ಗಳಿಸಬದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

      Farmer To Consumer Model Helps Farmers

      ಮಾವು, ಪಪ್ಪಾಯ ಮತ್ತು ನುಗ್ಗೆ ಬೆಳೆದ ರೈತರನ್ನು ಒಗ್ಗೂಡಿಸಿ ಸಭೆ ನಡೆಸಿದ ಡಾ. ಟಿ. ಹೆಚ್. ಗೌಡ ಅವರು ಕೊರೊನಾ ಲಾಕ್‌ ಡೌನ್ ಸಮಯದಲ್ಲಿ ರೈತರಿಗೆ ಅವರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಆಗುತ್ತಿದ್ದ ತೊಂದರೆಯನ್ನು ಗಮನಿಸಿ ಅವರಿಗೆ ನೆರವಾಗಿದ್ದಾರೆ.

      ಟಿ. ಸಿ. ಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಮತ್ತು ತಾಯಿ ರೈತರು ಬೆಳೆದ ಸಾವಯವ ಮಾವಿನ ಹಣ್ಣುಗಳನ್ನು ಖರೀದಿಸುವ ಮೂಲಕ ಈ ವೇದಿಕೆಗೆ ಚಾಲನೆ ನೀಡಿದರು.

      Farmer To Consumer Model Helps Farmers

      "ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಗಳಾಗಬೇಕಿದೆ. ರೈತರು ಗ್ರಾಹಕರಿಗೆ ನೇರ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಅಲ್ಲದೆ, ಈ ರೀತಿ ನೇರ ಮಾರಾಟದಿಂದ ರೈತರು ಮತ್ತು ಗ್ರಾಹಕರ ಮಧ್ಯ ಉತ್ತಮ ಸಂಬಂಧ ಬೆಳೆದು ಗುಣಮಟ್ಟದ ಉತ್ಪನ್ನಗಳು ದೊರೆಯುತ್ತವೆ" ಎಂದು ಡಾ. ಟಿ. ಹೆಚ್. ಗೌಡ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+