ಪಿರಿಯಾಪಟ್ಟಣ: ರಾಸಾಯನಿಕ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ
ಪಿರಿಯಾಪಟ್ಟಣ, ನವೆಂಬರ್, 02: ಬೆಳೆ ನಷ್ಟ ಹಾಗೂ ಸಾಲಬಾಧೆಗೆ ಹೆದರಿದ ರೈತನೋರ್ವ ರಾಸಾಯನಿಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಇದರಿಂದ ಇದೇ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಹತ್ತಕ್ಕೆ ಏರಿದೆ.
ಪಿರಿಯಾಪಟ್ಟಣ ತಾಲೂಕಿನ ತೆಲಗಿನಕುಪ್ಪೆ ಗ್ರಾಮದ ಕಾಂತರಾಜು(35) ಆತ್ಮಹತ್ಯೆಗೆ ಶರಣಾದ ರೈತ. ಈತ ತೆಲಗಿನಕುಪ್ಪೆ ಗ್ರಾಮದ ತನ್ನ ಮನೆಯ ಬಳಿ ನವೆಂಬರ್ ಸೋಮವಾರ ಬೆಳಿಗ್ಗೆ ಜೋಳ ಸಂರಕ್ಷಣೆಗೆ ಉಪಯೋಗಿಸುವ ರಾಸಾಯನಿಕ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ರೈತರಿಗೆ ಸಹಕಾರ ನೀಡಲು ಪಶುಭಾಗ್ಯ ಯೋಜನೆ]

ಕಾಂತರಾಜು ತೆಲಗಿನಕುಪ್ಪೆಯಲ್ಲಿ ಎರಡು ವರೆ ಎಕರೆ ಜಮೀನನ್ನು ಹೊಂದಿದ್ದರು. ಈತ ತನ್ನ ಜಮೀನಿನಲ್ಲಿ ಶುಂಠಿ, ಜೋಳ, ಇನ್ನಿತರೆ ಬೆಳೆಗಳನ್ನು ಬೆಳೆದಿದ್ದರು. ಅಕಾಲಿಕ ಮಳೆ, ನೀರಿನ ಕೊರತೆಯಿಂದಾಗಿ ಬೆಳೆ ಸಂಪೂರ್ಣ ನಾಶ ಹೊಂದಿದೆ.[ಮಾಧ್ಯಮಗಳು ರೈತರಿಗೆ ಏಕವಚನ ನೀಡುವುದು ಯಾಕೆ?]
ಇವರು ಬೇಸಾಯಕ್ಕಾಗಿ ತಾಲೂಕಿನ ಸೀಗೂರಿನ ಎಸ್ ಬಿಐ ಬ್ಯಾಂಕಿನಲ್ಲಿ 2.5 ಲಕ್ಷ ರೂ.ಗಳ ಸಾಲ ಪಡೆದಿದ್ದರು. ಇತರೆಡೆ ಖಾಸಗಿಯಾಗಿ 3 ಲಕ್ಷರೂ.ಗಳನ್ನು ಸಾಲ ಮಾಡಿದ್ದರು. ಬೆಳೆ ಸಂಪೂರ್ಣ ನಾಶವಾದ ಕಾರಣ ನೊಂದ ಕಾಂತರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬದವರು ಈತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications