ಕೋಳಿಗೆ ಕಾವು ಕೊಡುವುದನ್ನು ಸಿಎಂ ಹೇಳಿಕೊಡ್ತಾರಾ?: ಈಶ್ವರಪ್ಪ ವ್ಯಂಗ್ಯ
ಬೆಂಗಳೂರು, ಆಗಸ್ಟ್ 10: ಭತ್ತ ನಾಟಿ ಮಾಡಿ ಇಸ್ರೇಲ್ ಕೃಷಿ ಪದ್ಧತಿಗೆ ಕುಮಾರಸ್ವಾಮಿ ಚಾಲನೆ ನೀಡಿದ್ದನ್ನು ವ್ಯಂಗ್ಯದ ಮೊನಚಿನಿಂದ ಬಿಜೆಪಿ ಮುಖಂಡ ಈಶ್ವರಪ್ಪ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರೈತರಿಗೆ ನಾಟಿ ಮಾಡುವುದನ್ನು ಹೇಳಿಕೊಡುವುದು ಕೋಳಿಗೆ ಕಾವು ಕೊಡುವುದು ಹೇಳಿಕೊಟ್ಟಂತೆ ಎಂದು ವ್ಯಂಗ್ಯ ಮಾಡಿದ್ದಾರೆ.
ರೈತರಿಗೆ ಕೃಷಿ ಪಾಠ ಮಾಡುತ್ತಿರುವ ಸಿಎಂ ಕೋಳಿಗೆ ಕಾವು ಕೊಡುವುದು ಹೇಗೆ ಎಂದೂ ಹೇಳಿಕೊಡುತ್ತಾರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಸೀತಾಪುರದ ಭತ್ತದ ಗದ್ದೆಯಲ್ಲಿ ನಾಟಿ ಮಾಡಿ, ಇಸ್ರೆಲ್ ಮಾದರಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜೊತೆಗೆ ರೈತರೊಂದಿಗೆ ಚರ್ಚೆಯನ್ನೂ ಮಾಡಿದ್ದಾರೆ.












Click it and Unblock the Notifications