ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ದೇಶ - ಒಂದು ಮಾರುಕಟ್ಟೆ ದೃಷ್ಟಿಕೋನ ಬಲಪಡಿಸಿದ ಇ ನ್ಯಾಮ್

|
Google Oneindia Kannada News

ಕೃಷಿ ಉತ್ಪನ್ನಗಳಿಗಾಗಿ ''ಒಂದು ದೇಶ-ಒಂದು ಮಾರುಕಟ್ಟೆ'' ದೃಷ್ಟಿಕೋನವನ್ನು ಸಾಕಾರಗೊಳಿಸಲು ಇ-ನ್ಯಾಮ್ ಎಂದೇ ಜನಪ್ರಿಯಗೊಂಡಿರುವ ರಾಷ್ಟ್ರೀಯ ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ. ಅನೇಕ ಮಾರುಕಟ್ಟೆಗಳು ಮತ್ತು ಖರೀದಿದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ, ಅಂತರ್ಜಾಲದ ಮೂಲಕ ಬೆಲೆ ಅನ್ವೇಷಣೆ, ಗುಣಮಟ್ಟದ ಪೂರಕ ಗ್ರಾಹಕ ದರವನ್ನು ನಿಗದಿಪಡಿಸುವ ಸಲುವಾಗಿ ''ಒಂದು ದೇಶ-ಒಂದು ಉತ್ಪನ್ನ'' ಪರಿಕಲ್ಪನೆಯನ್ನು ಅಭಿವೃದ್ದಿಪಡಿಸಲಾಗಿದೆ.

ಮೂರು ಕೇಂದ್ರಾಡಳಿತ ಪ್ರದೇಶಗಳು, 18 ರಾಜ್ಯಗಳನ್ನು ಒಳಗೊಂಡಂತೆ 1000 ಮಾರುಕಟ್ಟೆಗಳನ್ನು ಇ-ನ್ಯಾಮ್ ವ್ಯವಸ್ಥೆಯಡಿ ಉತ್ತಮ ಸಂಪರ್ಕಕಲ್ಪಿಸಲಾಗಿದೆ. ಇ-ನ್ಯಾಮ್ ವೇದಿಕೆಯಡಿ ಈವರೆಗೆ 1.69 ಕೋಟಿ ರೈತರು ಮತ್ತು 1.55 ಲಕ್ಷ ವ್ಯಾಪಾರಿಗಳು ನೋಂದಣಿಯಾಗಿದ್ದಾರೆ. ಇ-ನ್ಯಾಮ್ ನಡಿ ಪಾರದರ್ಶಕತೆಯ ಹರಾಜು ಮಾಡುವ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದ್ದು, ಇದರಿಂದ ವ್ಯಾಪಾರ ಹೆಚ್ಚಾಗಲು ಸಹಕಾರಿಯಾಗಿದೆ. ಒಟ್ಟು 4.13 ಕೋಟಿ ಮೆಟ್ರಿಕ್ ಟನ್ ಸರಕುಗಳು, 3.68 ಕೋಟಿ ತೆಂಗು ಮತ್ತು ಬಿದಿರು ಉತ್ಪನ್ನಗಳ ಅಂದಾಜು 1.22 ಲಕ್ಷ ಕೋಟಿ ರೂ ದಾಖಲೆ ಮೊತ್ತದ ವಹಿವಾಟು ದಾಖಲಾಗಿದೆ. ಈ ವೇದಿಕೆಯಡಿ ರೈತರಿಗೆ ನೇರ ಪಾವತಿ ವ್ಯವಸ್ಥೆ ಮಾಡಲಾಗಿದೆ.

ಫೆ.4ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರಫೆ.4ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ

ಈ ಯಶಸ್ಸಿನ ನಂತರ ಇ-ನ್ಯಾಮ್ ವ್ಯವಸ್ಥೆಯಡಿ ಮತ್ತೆ 1000 ಮಂಡಿಗಳನ್ನು ಜೋಡಿಸುವುದಾಗಿ 2021 ರ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ ಇ-ನ್ಯಾಮ್ ವ್ಯವಸ್ಥೆಯಡಿ ಮಾರುಕಟ್ಟೆ ಮತ್ತಷ್ಟು ಬಲಗೊಳ್ಳಲಿದೆ.

e-NAM Platform to help vision of “One Nation, One Market” for agri-produce

ಕೋವಿಡ್-19 ಸಂದರ್ಭದಲ್ಲಿ ಎಫ್.ಪಿ.ಒ ವ್ಯಾಪಾರ ಮಾದರಿ ಜಾರಿಮಾಡುವ ಮೂಲಕ ಇ-ನ್ಯಾಮ್ ವೇದಿಕೆ, ಮೊಬೈಲ್ ಆ‍್ಯಪ್ ಗಳನ್ನು ಬಲಪಡಿಸಲಾಗಿದೆ. ಎಪಿಎಂಸಿಗಳಿಗೆ ಉತ್ಪನ್ನಗಳನ್ನು ತರದೇ ತಮ್ಮ ಸಂಗ್ರಹ ಕೇಂದ್ರದಿಂದಲೇ ಉತ್ಪನ್ನಗಳ ವ್ಯಾಪಾರ ಮಾಡಬಹುದಾಗಿದೆ. ಇ-ನ್ಯಾಮ್ ವೇದಿಕೆಯಡಿ ಈವರೆಗೆ 1844 ಎಫ್.ಪಿ.ಓ ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಹೆಚ್ಚುವರಿಯಾಗಿ ಗೋದಾಮು ಆಧಾರಿತ ವ್ಯಾಪಾರ ಮಾದರಿಯನ್ನು ಸಹ ಇ-ನ್ಯಾಮ್ ವ್ಯವಸ್ಥೆಯಡಿ ತರಲಾಗಿದ್ದು, ಇ-ಎನ್.ಡಬ್ಲ್ಯೂ.ಆರ್ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗಿದೆ.

Chakka Jam: ಕೇಂದ್ರ ಸರ್ಕಾರಕ್ಕೆ 'ಚೆಕ್' ಕೊಡುತ್ತಾ Chakka Jam: ಕೇಂದ್ರ ಸರ್ಕಾರಕ್ಕೆ 'ಚೆಕ್' ಕೊಡುತ್ತಾ "ಛಕ್ಕಾ ಜಾಮ್"?

ಅಂತಾರಾಜ್ಯ ಮತ್ತು ಮಂಡಿಗಳ ನಡುವೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ಲಾಜಿಸ್ಟಿಕ್ ಮಾದರಿಯ ಉತ್ತೇಜಿತ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲಿ ಸಾರಿಗೆ ಸೌಲಭ್ಯವನ್ನು ಸಹ ಜೋಡಿಸಲಾಗಿದೆ. ಇದು ಬಳಕೆದಾರರಿಗೆ ತಮ್ಮ ಉತ್ಪನ್ನಗಳನ್ನು ಸಾಗಿಸಲು ಮತ್ತು ಟ್ರ್ಯಾಕ್ ಮಾಡಲು, ಸಾರಿಗೆ ಸೌಲಭ್ಯಗಳನ್ನು ಪಡೆಯಲು ಸಹಾಯಮಾಡುತ್ತದೆ. ಇ-ನ್ಯಾಮ್ ವೇದಿಕೆ ಆರ್.ಇ.ಎ.ಎಂ.ಎಸ್ ಜತೆ ಸಂಪರ್ಕ ಹೊಂದಿದ್ದು, ಎರಡೂ ವೇದಿಕೆಗಳೊಂದಿಗೆ ತನ್ನ ಜಾಲ ಬೆಸೆದುಕೊಂಡಿರುವ ಕರ್ನಾಟಕ ವೇದಿಕೆಯಿಂದ ತಮ್ಮ ಉತ್ಪನ್ನಗಳನ್ನು ಇತರೆ ವೇದಿಕೆಗಳಿಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುತ್ತದೆ.

e-NAM Platform to help vision of “One Nation, One Market” for agri-produce

ಕೃಷಿ ಕ್ಷೇತ್ರದ ವಿವಿಧ ವಿಭಾಗಗಲ್ಲಿ ಪ್ರತ್ಯೇಕ ವೇದಿಕೆಗಳ ಪರಿಣತಿಯನ್ನು ಹತೋಟಿಗೆ ತರಲು, ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು ಇ-ನ್ಯಾಮ್ ವ್ಯವಸ್ಥೆ ಇದೀಗ " ವೇದಿಕೆಗಳ ವೇದಿಕೆ" ಯಾಗಿ ಮೌಲ್ಯವರ್ಧಿತ ಸರಣಿಯಾಗಿ ಅಭಿವೃದ್ಧಿ ಹೊಂದುತ್ತಿದೆ.(ವಾರ್ತಾ ಇಲಾಖೆ)

English summary
Better market linkage was provided under e-NAM by Integrating 1000 markets across 18 States and 3 UT to help vision of “One Nation, One Market” for agri-produce
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X