ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನಿಗೆ ಗುಣಮಟ್ಟದ ಬೀಜ ಒದಗಿಸುವ 'ಬಿಗ್ ಹ್ಯಾಟ್'

By Prasad
|
Google Oneindia Kannada News

ಬೆಂಗಳೂರು, ಜು. 02 : ರೈತ ಇಂದು ಸಂಕಷ್ಟದಲ್ಲಿದ್ದಾನೆ. ಬೆಳೆದ ಫಸಲಿಗೆ ತಕ್ಕ ಲಾಭ ಸಿಗುತ್ತಿಲ್ಲ, ಮಾಡಿದ ಸಾಲ ತಿರುಗಿಸಲು ಸಾಧ್ಯವಾಗುತ್ತಿಲ್ಲ, ಸಂಸಾರವನ್ನು ಸಾಗಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ನೇಣಿಗೆ ಶರಣಾಗುತ್ತಿದ್ದಾನೆ, ವಿಷದ ಬಟ್ಟಲು ಗಂಟಲಿಗಿಳಿಸುತ್ತಿದ್ದಾನೆ. ಇಂದು ಕೃಷಿಯನ್ನೇ ನಂಬಿರುವ ರೈತ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ.

ಆದರೆ, ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಬೀಜ, ತಕ್ಕ ಬೆಲೆಗೆ ಸಿಕ್ಕರೆ, ಒಂದಾದರೂ ಸಮಸ್ಯೆಗೆ ಪರಿಹಾರ ಸಿಕ್ಕೀತೆಂದು, ರೈತರ ಪರ ಕಾಳಜಿ ಇರುವ ಒಂದು ಯುವ ಸಾಫ್ಟ್ ವೇರ್ ಇಂಜಿನಿಯರುಗಳು ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಈ-ಕಾಮರ್ಸ್ ಮೂಲಕ ರೈತರನ್ನು ತಲುಪುವ ಉದ್ದೇಶದಿಂದ bighaat.com ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ದೇಶದ ಬೆನ್ನೆಲುಬಾದ ರೈತನಿಗೆ ಇಂದು ಗುಣಮಟ್ಟದ ಬೀಜಗಳು ಸೂಕ್ತ ಬೆಲೆಗೆ ಸಿಗುತ್ತಿಲ್ಲ. ಹಲವಾರು ಕಂಪನಿಗಳು ಒದಗಿಸುವ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ನೇಗಿಲಯೋಗಿಯನ್ನು ಕಂಗೆಡುವಂತೆ ಮಾಡಿದೆ. ಉತ್ತಮ ಬೀಜಗಳಿಗಾಗಿ ನಗರಗಳಿಗೆ ಅಲೆದಾಡುವುದು ತಪ್ಪುತ್ತಿಲ್ಲ.

E-commerce website Bighaat to supply quality seeds to farmers in time

ಇದಕ್ಕೆಲ್ಲ, ಆಧುನಿಕ ತಂತ್ರಜ್ಞಾನ ಬಳಸಿ ರೂಪಿಸಲಾಗಿರುವ ರೈತಸ್ನೇಹಿ ಜಾಲತಾಣ ಬಿಗ್‌ಹ್ಯಾಟ್ ಡಾಟ್ ಕಾಂ ಪರಿಹಾರ ದೊರಕಿಸಿಕೊಡಲಿದೆ ಅಂತಾರೆ ಸಂಸ್ಥೆಯ ಹುಟ್ಟಿಗೆ ಕಾರಣರಾಗಿರುವ ಟೆಕ್ಕಿ ರಾಜ್ ಕಂಚಂ. ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ರೈತರಿಗೆ ಗುಣಮಟ್ಟದ ಬೀಜ ಒದಗಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಈ ಡಿಜಿಟಲ್ ಯುಗದಲ್ಲಿ ಅಂತರ್ಜಾಲ ದೇಶದ ಮೂಲೆಮೂಲೆ ತಲುಪುತ್ತಿದ್ದರೂ ರೈತರು ಅಂತರ್ಜಾಲ ಬಳಸುವಲ್ಲಿ ಇನ್ನೂ ಹಿಂದಿದ್ದಾರೆ. ಈ ಕಾರಣದಿಂದ, ರೈತರು ಸಂಸ್ಥೆ ನೀಡಿರುವ 180030002434 ಸಂಖ್ಯೆಗೆ ಮಿಸ್ಡ್ ಕರೆ ನೀಡಿದರೂ ಸಾಕು, ಸಂಸ್ಥೆ ರೈತರನ್ನು ಸಂಪರ್ಕಿಸಿ, ಅವರಿಂದ ಮಾಹಿತಿಯನ್ನು ಸಂಗ್ರಹಿಸಿ, ಅವರಿಗೆ ಅಗತ್ಯವಿರುವ ಬೀಜವನ್ನು 3ರಿಂದ 5 ದಿನಗಳಲ್ಲಿ ಅವರ ಮನೆಗೆ ತಲುಪಿಸುತ್ತದೆ ಎನ್ನುತ್ತಾರೆ ಸಂಸ್ಥೆಯ ತಾಂತ್ರಿಕ ಸಲಹೆಗಾರರಾಗಿರುವ ಕನ್ನಡಿಗ ವಿದ್ಯಾಶಂಕರ ಹರಪನಹಳ್ಳಿ.

ರೈತ ಕರ್ನಾಟಕದ ಯಾವುದೇ ಹಳ್ಳಿಯಲ್ಲಿರಲಿ ಬೀಜವನ್ನು ರೈತರ ಮನೆಗೆ ತಲುಪಿಸಲು ಸಂಸ್ಥೆ ಯಾವುದೇ ಹೆಚ್ಚಿನ ಶುಲ್ಕವನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಬೀಜಗಳ ಗುಣಮಟ್ಟ ಕಳಪೆಯಾಗಿದ್ದರೆ ಬೀಜ ಒದಗಿಸುವ ಸಂಸ್ಥೆಯಿಂದ ಪರಿಹಾರ ಒದಗಿಸಲಿದೆ. ಕರ್ನಾಟಕದಲ್ಲಿ ರೈತರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ ತಿಳಿಸಿದರು.

ಆನ್ ಲೈನ್ ವಹಿವಾಟು ನಗರದಲ್ಲಿರುವ ಜನರಿಗೆ ಮಾತ್ರ ಸೀಮಿತವಾಗಿದೆ. ಈ ಕಂಪನಿಗಳು ಗ್ರಾಮೀಣ ಭಾರತವನ್ನು ತಲುಪುತ್ತಿಲ್ಲ. ನಗರಗಳಲ್ಲಿ ಫೋನ್ ಮಾಡಿದರೆ ವಸ್ತುಗಳು ಹೇಗೆ ಮನೆಗೆ ಬಂದು ಬೀಳುತ್ತವೋ, ಹಾಗೆಯೇ ಹಳ್ಳಿಗಳಲ್ಲಿರುವ ರೈತರ ಮನೆಗೂ ಬೀಜಗಳು, ಒಂದು ಫೋನ್ ಕರೆಯ ಮೂಲಕ ತಲುಪಬೇಕು ಎಂಬುದು ಬಿಗ್ ಹ್ಯಾಟ್ನ ಕನಸು ಎಂದು ರಾಜ್ ವಿವರಿಸಿದರು.

ಗುಣಮಟ್ಟದ ಬೀಜವನ್ನು ಒದಗಿಸಲು ನಾಮಧರೀಸ್, ಯುಎಸ್ ಅಗ್ರಿಸೀಡ್ಸ್, ಇಂಡಸ್, ಪ್ರಿವಿ, ಮಹಿಕೋ, ನನ್‌ಹೆಮ್ಸ್ ಮುಂತಾದ ಬೀಜ ಒದಗಿಸುವ ಕಂಪನಿಗಳೊಂದಿಗೆ ಬಿಗ್ ಹ್ಯಾಟ್ ಕೈಜೋಡಿಸಿದೆ. ಅಲ್ಲದೆ, ರೈತರ ಅಗತ್ಯಗಳನ್ನು ಇನ್ನಷ್ಟು ತಿಳಿಯಲೆಂದು ಜಿಕೆವಿಕೆಯೊಂದಿಗೆ ಕೂಡ ಒಡಂಬಡಿಕೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಗೊಬ್ಬರ, ಕೃಷಿ ಸಲಕರಣೆಗಳನ್ನು ಕೂಡ ಒದಗಿಸುವ ಉದ್ದೇಶ ಸಂಸ್ಥೆಗಿದೆ.

ಆಂಡ್ರಾಯ್ಡ್ ಆಪ್ : ಕರ್ನಾಟಕದ ರೈತರಿಗೆ ಅನುಕೂಲವಾಗಲೆಂದು ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಕೂಡ ಬಿಗ್ ಹ್ಯಾಟ್ ಆರಂಭಿಸಿದೆ. ಅಲ್ಲದೆ, ಸ್ಮಾರ್ಟ್ ಫೋನ್ ಇರುವವರಿಗಾಗಿ ಆಂಡ್ರಾಯ್ಡ್ ಆಪ್ ಕೂಡ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ bighaat ಟೈಪ್ ಮಾಡಿ, ಈ ಆಪನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಿಸ್ಡ್ ಕಾಲ್ ಸಂಖ್ಯೆ : 180030002434
ಕಾಲ್ ಸೆಂಟರ್ ಸಂಖ್ಯೆ : 80507 97979
ಸಂಸ್ಥೆಯ ವಿಳಾಸ : ಬಿಗ್ ಹ್ಯಾಟ್.ಕಾಂ, ನಂ. 1724/16, 1ನೇ ಮುಖ್ಯ ರಸ್ತೆ, 2ನೇ ಹಂತ, ರಾಜಾಜಿನಗರ, ಬೆಂಗಳೂರು - 560 010.
ಈಮೇಲ್ : [email protected]
ಮೊಬೈಲ್ : 99863 71999

English summary
Indian farmer is facing lot of challenges. He is not getting dues from factories. He is committing suicide unable to pay the debt. In order to make farmers' life easy BigHaat.com, an e-commerce website started by techies, will supply seeds to farmers in time, at his doorsteps, without any extra expenditure. BigHaat is brain child of Raj Kancham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X