ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾದ ನಿಸರ್ಗ ಕೃಷಿ ಉತ್ಪಾದಕ ಕಂಪನಿ ಜೊತೆ ಫ್ಲಿಪ್ ಕಾರ್ಟ್ ಪಾಲುದಾರಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ನಲ್ಲಿ ಕೃಷಿ ಸಮುದಾಯಗಳ ಪ್ರಗತಿ ಮತ್ತು ಉತ್ತಮ ಮಾರುಕಟ್ಟೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಸ್ಥೆಗಳ (ಎಫ್ ಪಿಒಗಳು) ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಂಡಿದೆ.

ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಬಿಹಾರದ ಪುರ್ನಿಯಾದ ಅರಣ್ಯಕ್ ಅಗ್ರಿ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್, ಅಂಚೆಟ್ಟಿ ಎಫ್ ಪಿಸಿಎಲ್, ಗುಲ್ಬರ್ಆದ ನಿಸರ್ಗ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್, ಅನಂತಪುರದ ಸತ್ಯ ಸಾಯಿ ಫಾರ್ಮರ್ ಫೆಡರೇಷನ್ ಸೇರಿದಂತೆ ಇನ್ನೂ ಅನೇಕ ಪ್ರಮುಖವಾದ ಕೃಷಿ ಉತ್ಪಾದಕ ಸಂಸ್ಥೆಗಳ ಜೊತೆಗೆ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಇದಲ್ಲದೇ, ಫ್ಲಿಪ್ ಕಾರ್ಟ್ ಆಂಧ್ರಪ್ರದೇಶ ಮಹಿಳಾ ಅಭಿವೃದ್ಧಿ ಸೊಸೈಟಿ(ಎಪಿಎಂಎಎಸ್), ದ್ವಾರ ಫೌಂಡೇಷನ್ ಆಫ್ ಡೆವಲಪ್ ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೇನ್ಸ್ (ಎಫ್ ಡಿಆರ್ ವಿಸಿ), ಸಹಜ ಆಹಾರಂ ಪ್ರೊಡ್ಯೂಸರ್ ಕಂಪನಿ (ಎಸ್ಎಪಿಸಿಒ), ಸಮೃದ್ಧಿ ಮತ್ತು ವೃತ್ತಿಯಂತಹ ಹಲವಾರು ಸ್ವಯಂಸೇವಾ ಸಂಸ್ಥೆಗಳೊಂದಿಗೂ ಸಹಭಾಗಿತ್ವ ಮಾಡಿಕೊಂಡಿದೆ.

ಈ ಪಾಲುದಾರಿಕೆಗಳ ಮೂಲಕ ಫ್ಲಿಪ್ ಕಾರ್ಟ್ ಧಾನ್ಯಗಳು. ಸ್ಟಾಪಲ್ ಗಳು ಮತ್ತು ಕಾಳುಗಳ ಮೂಲಗಳನ್ನು ತಲುಪಲು ಸಾಧ್ಯವಾಗುತ್ತದೆ ಮತ್ತು ರೈತರನ್ನು ತನ್ನ ಪ್ಲಾಟ್ ಫಾರ್ಮ್ ವ್ಯಾಪ್ತಿಗೆ ತರಲು ಸಾಧ್ಯವಾಗುತ್ತದೆ. ಇದರಿಂದ ಕೃಷಿ ಸಮುದಾಯದ ಸಾವಿರಾರು ಜೀವನೋಪಾಯಗಳ ಉತ್ತಮ ಜೀವನಕ್ಕೆ ನೆರವಾಗಲಿದೆ. ಈ ಹೊಸ ತಾಣಗಳು ಇ-ಕಾಮರ್ಸ್ ಮತ್ತು ತಂತ್ರಜ್ಞಾನದ ಬಳಕೆಗೆ ಅವಕಾಶ ದೊರೆಯುತ್ತದೆ. ಅಲ್ಲದೇ, ರೈತರ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಕೃಷಿ ಸಮುದಾಯದ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಬೆಂಬಲ ಸಿಕ್ಕಂತಾಗುತ್ತದೆ.

ಫ್ಲಿಪ್ ಕಾರ್ಟ್ ಗ್ರಾಸರಿ ವಿಭಾಗದ ಉಪಾಧ್ಯಕ್ಷೆ ಸ್ಮೃತಿ ರವಿಚಂದ್ರನ್

ಫ್ಲಿಪ್ ಕಾರ್ಟ್ ಗ್ರಾಸರಿ ವಿಭಾಗದ ಉಪಾಧ್ಯಕ್ಷೆ ಸ್ಮೃತಿ ರವಿಚಂದ್ರನ್

ಈ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರಾಸರಿ ವಿಭಾಗದ ಉಪಾಧ್ಯಕ್ಷೆ ಸ್ಮೃತಿ ರವಿಚಂದ್ರನ್ ಅವರು, ಹಲವು ವರ್ಷಗಳಿಂದ ರೈತ ಉತ್ಪಾದಕ ಸಂಸ್ಥೆಗಳ (ಎಫ್ ಪಿಒಗಳು) ಜೊತೆಗಿನ ಸಹಭಾಗಿತ್ವಕ್ಕೆ ವೇಗ ನೀಡುವತ್ತ ನಾವು ಆದ್ಯತೆ ನೀಡಿದ್ದೇವೆ. ಅಲ್ಲದೇ, ಕೃಷಿ ಸಮುದಾಯಗಳು ಇಂದಿನ ಇ-ಕಾಮರ್ಸ್ ಮತ್ತು ತಂತ್ರಜ್ಞಾನಗಳಿಂದ ತಮ್ಮ ಕೊಡುಗೆಗಳು ಮತ್ತು ಲಾಭಾಂಶಗಳ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ನಮ್ಮ ಸಮರ್ಪಿತವಾದ ಉಪಕ್ರಮಗಳು ನಮ್ಮ ಮಾರುಕಟ್ಟೆ ಪ್ಲಾಟ್ ಫಾರ್ಮ್ ನಲ್ಲಿ ಉತ್ತಮ ಗುಣಮಟ್ಟದ ಸ್ಟೇಪಲ್ಸ್, ಬೇಳೆಕಾಳು ಮತ್ತು ಮಸಾಲೆಗಳ ಮಾರಾಟಕ್ಕೆ ಮಾರುಕಟ್ಟೆಯನ್ನು ಒದಗಿಸುತ್ತದೆ ಮತ್ತು ಇದರ ಮೂಲಕ ದೇಶಾದ್ಯಂತ ಇರುವ ರೈತ ಸಮುದಾಯಗಳಿಗೆ ಹೆಚ್ಚಿನ ಮಾರುಕಟ್ಟೆಯ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ದೇಶಾದ್ಯಂತ ಲಕ್ಷಾಂತರ ರೈತರು ಮತ್ತು ಕಡಿಮೆ ಸೇವೆ ಸಲ್ಲಿಸುವ ಸಮುದಾಯಗಳ ಜೀವನೋಪಾಯವನ್ನು ಧನಾತ್ಮಕವಾದ ರೀತಿಯಲ್ಲಿ ಪರಿಣಾಮ ಬೀರುವ ಹಾಗೂ ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೊಡಗಿಕೊಳ್ಳುವಂತೆ ಮಾಡುವುದನ್ನು ನಾವು ಮುಂದುವರಿಸಲು ಬಯಸುತ್ತೇವೆ'' ಎಂದು ತಿಳಿಸಿದರು.

ಫೌಂಡೇಷನ್ ಫಾರ್ ಡೆವಲಪ್ ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೇನ್ಸ್ ನ ಸಿಇಒ

ಫೌಂಡೇಷನ್ ಫಾರ್ ಡೆವಲಪ್ ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೇನ್ಸ್ ನ ಸಿಇಒ

ಫೌಂಡೇಷನ್ ಫಾರ್ ಡೆವಲಪ್ ಮೆಂಟ್ ಆಫ್ ರೂರಲ್ ವ್ಯಾಲ್ಯೂ ಚೇನ್ಸ್ ನ ಸಿಇಒ ಅಲೋಕ್ ಡೇ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಟಾಟಾ ಟ್ರಸ್ಟ್ಸ್ -ಎಫ್ ಡಿಆರ್ ವಿಸಿಗಳ ಜಂಟಿ ಉಪಕ್ರಮದ ಮೂಲಕ ಮಹಿಳಾ ಕೃಷಿಕರಿಗೆ ತಲ್ಲ ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ನಾವು ಫ್ಲಿಪ್ ಕಾರ್ಟ್ ನೊಂದಿಗೆ ಶಕ್ತಿಶಾಲಿಯಾದ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ. ಈ ಪಾಲುದಾರಿಕೆಯಿಂದ ಕೃಷಿಕರಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೆಂಬಲವಾಗಿ ನಿಲ್ಲಲಿದ್ದೇವೆ. ಇದರ ಜೊತೆಗೆ ಗುಣಮಟ್ಟ, ಸಕಾಲದಲ್ಲಿ ಉತ್ಪನ್ನಗಳನ್ನು ಪೂರೈಕೆ ಮಾಡುವುದು ಮತ್ತು ಪ್ರೋತ್ಸಾಹದಾಯಕವಾದ ಬೆಲೆಯನ್ನು ನೀಡುವುದನ್ನು ಖಾತರಿಪಡಿಸುವ ಮೂಲಕ ಗ್ರಾಹಕ ತೃಪ್ತಿಯನ್ನು ಹೆಚ್ಚಿಸಲಾಗುತ್ತದೆ. ಇತ್ತೀಚೆಗೆ, ಈ ಉಪಕ್ರಮದಡಿ ರಾಜಸ್ಥಾನದ ಬರನ್ ನಲ್ಲಿರುವ ಹಡೊಟಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟಿಎಡ್ (ಎಚ್ಎಂಕೆಪಿಸಿಎಲ್) ಫ್ಲಿಪ್ ಕಾರ್ಟ್ ನಲ್ಲಿ ತನ್ನ ಹೋಲ್ ಕಾರಿಯೆಂಡರ್' ನ ಮೊದಲ ವ್ಯವಹಾರವನ್ನು ನಡೆಸಿದೆ. ಇದು ಈ ಸಮುದಾಯದಲ್ಲಿ ಸಾಕಷ್ಟು ವಿಶ್ವಾಸವನ್ನು ಮೂಡಿಸಿದೆ ಮತ್ತು ಈ ಉಪಕ್ರಮದಡಿ ಇನ್ನೂ ಹೆಚ್ಚು ಇಂತಹ ಕೃಷಿ ಉತ್ಪಾದಕ ಸಂಸ್ಥೆಗಳನ್ನು ತರಲಿದ್ದೇವೆ ಎಂಬ ವಿಶ್ವಾಸ ನಮಗಿದೆ'' ಎಂದು ತಿಳಿಸಿದರು.

ಪ್ರಾದೇಶಿಕ ಪ್ಯಾಕೇಜಿಂಗ್ ಕೇಂದ್ರಗಳು

ಪ್ರಾದೇಶಿಕ ಪ್ಯಾಕೇಜಿಂಗ್ ಕೇಂದ್ರಗಳು

ಫ್ಲಿಪ್ ಕಾರ್ಟ್ ತನ್ನ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ನಲ್ಲಿ ಅತ್ಯುತ್ಕೃಷ್ಠವಾದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ಪ್ಯಾಕೇಜಿಂಗ್ ಮತ್ತು ಸಂಸ್ಕರಣಾ ಘಟಕಗಳಿಗೆ (ಪ್ರಾದೇಶಿಕ ಪ್ಯಾಕೇಜಿಂಗ್ ಕೇಂದ್ರಗಳು) ಎಫ್ ಪಿಒ ಭೇಟಿಗಳನ್ನು ಆಯೋಜಿಸಿದೆ. ಈ ಮೂಲಕ ವಿವಿಧ ಪ್ರದೇಶಗಳಲ್ಲಿ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತೆ ಬಗ್ಗೆ ಗ್ರಾಹಕರ ನಿರೀಕ್ಷೆಗಳು ಹೇಗಿರುತ್ತವೆ ಎಂಬುದರ ಬಗ್ಗೆ ಕೃಷಿ ಉತ್ಪಾದಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಈ ಎಫ್ ಪಿಒಗಳ ಭೇಟಿಯ ಸಂದರ್ಭದಲ್ಲಿ ಗುಣಮಟ್ಟ ತಂಡಗಳು ತಮ್ಮ ತಂಡಗಳೊಂದಿಗೆ ಫ್ಲಿಪ್ ಕಾರ್ಟ್ ನ ಉತ್ಪನ್ನ ಗುಣಮಟ್ಟ, ಆಹಾರ ಸುರಕ್ಷತೆ ಮತ್ತು ತರಬೇತಿ ನೀಡುವ ಸೆಶನ್ ಗಳನ್ನು ನಡೆಸಿಕೊಡಲಿವೆ. ಈ ಎಫ್ ಪಿಒಗಳ ಮೂಲಕ ಫ್ಲಿಪ್ ಕಾರ್ಟ್ ಮತ್ತು ರೈತರ ನಡುವೆ ತಡೆರಹಿತವಾದ ವ್ಯವಹಾರ ಸೌಲಭ್ಯ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಫ್ಲಿಪ್ ಕಾರ್ಟ್ ಒತ್ತು ನೀಡುತ್ತಿದೆ.

ಕೃಷಿ ಸಮುದಾಯಗಳ ಜೊತೆಗೆ ಇನ್ನಷ್ಟು ಆಳವಾದ ಪಾಲುದಾರಿಕೆ

ಕೃಷಿ ಸಮುದಾಯಗಳ ಜೊತೆಗೆ ಇನ್ನಷ್ಟು ಆಳವಾದ ಪಾಲುದಾರಿಕೆ

ಮುಂಬರುವ ತಿಂಗಳುಗಳಲ್ಲಿ ಫ್ಲಿಪ್ ಕಾರ್ಟ್ ಕರ್ನಾಟಕದ ಲಾಭವಿಲ್ಲದ ಸಂಸ್ಥೆಯಾದ ವೃತ್ತಿ ಸಂಸ್ಥೆಯನ್ನು ತನ್ನ ವ್ಯಾಪ್ತಿಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಮೂಲಕ ಲಕ್ಷಾಂತರ ವ್ಯಕ್ತಿಗಳು/ಕುಟುಂಬಗಳ ಜೀವನ ಮತ್ತು ಜೀವನೋಪಾಯವನ್ನು ಸುಧಾರಣೆ ಮಾಡುವ ಉದ್ದೇಶವನ್ನು ಹೊಂದಿದೆ. ಅಂದರೆ, ಗುಲ್ಬರ್ಗಾದಿಂದ ತೊಗರಿಬೇಳೆಯಂತಹ ಉತ್ಪನ್ನಗಳನ್ನು ತನ್ನ ಪ್ಲಾಟ್ ಫಾರ್ಮ್ ನಲ್ಲಿ ತರಲಿದೆ. ಇದಲ್ಲದೇ, ಮುಂಬರುವ ಭತ್ತ ಕೊಯ್ಲಿನ ಸಂದರ್ಭದಲ್ಲಿ ಕರ್ನಾಟಕದ ಕೊಪ್ಪಳದಿಂದ ಭತ್ತ/ಅಕ್ಕಿಯನ್ನು ತನ್ನ ಪ್ಲಾಟ್ ಫಾರ್ಮ್ ವ್ಯಾಪ್ತಿಗೆ ತರುವ ಗುರಿಯನ್ನು ಹಾಕಿಕೊಂಡಿದೆ. ಈ ಮೂಲಕ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಜಾಲವನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುವುದು ಮತ್ತು ಇಂತಹ ಏಜೆನ್ಸಿಗಳು ಮತ್ತು ಕೃಷಿ ಸಮುದಾಯಗಳ ಜೊತೆಗೆ ಇನ್ನಷ್ಟು ಆಳವಾದ ಪಾಲುದಾರಿಕೆಯನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.

English summary
Flipkart is working with entities such as Aranyak Agri Producer Company Ltd. in Purnia, Bihar and Anchetty FPCL, Nisarga Farmers Producer Company Ltd in Gulbarga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X