ಬೆಂಗಳೂರು: ಸಂಕ್ರಾಂತಿಗೆ ಏರಿಕೆಯಾಗಿದ್ದ ತರಕಾರಿ,ಹೂವಿನ ದರ ಕೊಂಚ ಇಳಿಕೆ
ಬೆಂಗಳೂರು,ಜನವರಿ 21: ಹಬ್ಬಕ್ಕೆ ಏರಿಕೆಯಾಗಿದ್ದ ತರಕಾರಿ ದರದಲ್ಲಿ ಈಗ ಕೊಂಚ ಇಳಿಕೆ ಕಂಡಿದೆ.
ನಗರದ ವಿವಿಧ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿರುವುದರಿಂದ ಸಂಕ್ರಾಂತಿ ಬಳಿಕ ಕೆಲ ತರಕಾರಿ ಹಾಗೂ ಹೂವಿನ ಬೆಲೆ ಕಡಿಮೆಯಾಗುತ್ತಿದೆ.
ಚಳಿಯಲ್ಲಿ ಹೂವು ಗುಣಮಟ್ಟ ಹೊಂದಿರುತ್ತದೆ. ಹಾಗೆಯೇ ಯಾವುದೇ ಹಬ್ಬಗಳು ಇಲ್ಲದಿರುವುದರಿಂದ ಹೂವಿನ ಬೆಲೆಯಲ್ಲಿ ವ್ಯತ್ಯಾಸವಾಗಿದೆ.ಹಬ್ಬದಲ್ಲಿ ಕೆಜಿಗೆ ಒಂದು ಸಾವಿರ ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದ ಮಲ್ಲಿಗೆ, ಕನಕಾಂಬರ ಇದೀಗ ಕೆಜಿಗೆ 300-600 ರೂ.ನಷ್ಟು ಇಳಿಕೆಯಾಗಿದೆ.

ಸಂಕ್ರಾಂರಿ ಹಬ್ಬದ ಹಿನ್ನೆಲೆ ಸಗಟು ಮಾರುಕಟ್ಟೆಯಲ್ಲೂ ಸ್ವಲ್ಪ ಮಟ್ಟಿಗೆ ತರಕಾರಿ, ಹೂವಿನ ದರ ಏರಿತ್ತು.ಈ ಮೊದಲು ವಿವಿಧ ಮಾರುಕಟ್ಟೆಗಳಲ್ಲಿ ಕೆಲ ತರಕಾರಿಗಳು ಕೆಜಿ 40ರೂ.ಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದವು. ಇದೀಗ ಕ್ಯಾರೆಟ್, ಟೊಮೆಟೋ, ಗೋರಿಕಾಯಿ, ಬಜ್ಜಿ ಮೆಣಸಿನಕಾಯಿ,ಎಲೆಕೋಸು ಇನ್ನಿತರೆ ತರಕಾರಿಗಳ ಬೆಲೆ ಕಡಿಮೆಯಾಗಿದೆ.
ಬೀನ್ಸ್, ಹೀರೇಕಾಯಿ, ನುಗ್ಗೇಕಾಯಿ ಒಳಗೊಂಡಂತೆ ಕೆಲ ತರಕಾರಿಗಳು ಸ್ಥಿರತೆ ಕಾಯ್ದುಕೊಂಡಿವೆ. ಆದರೆ, ಕೆಲವೆಡೆ ಚಿಲ್ಲರೆ ಮಾರಾಟಗಾರರು ಮಾತ್ರ ಸಾಗಣೆ ವೆಚ್ಚ ಸೇರಿಸಿ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.ಹಾಪ್‌ಕಾಮ್ಸ್‌ಗಳಲ್ಲಿ ಬೆಲೆ ಕೊಂಚ ದುಬಾರಿ ಇದೆ.
ಕೆಂಪು ಗುಲಾಬಿ 60-100 ರೂ., ಮಲ್ಲಿಗೆ 500-600 ರೂ., ಕನಕಾಂಬರ 300-400 ರೂ., ಚೆಂಡು ಹೂವು 30-40 ರೂ.ಗೆ ಮಾರಾಟವಾಗುತ್ತಿದೆ.












Click it and Unblock the Notifications