ಕುಮಾರಣ್ಣ ಸ್ವಿಸ್ ಬ್ಯಾಂಕ್ ಖಾತೆ ಕಥೆ ಹೇಳಣ್ಣ
ಚಾಮರಾಜನಗರ,
ಡಿ.1: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೊದಲು ಸ್ವಿಸ್ ಬ್ಯಾಂಕ್‌ನಲ್ಲಿಟ್ಟಿರುವ 14 ಸಾವಿರ ಕೋಟಿ ರೂ.ಗಳ ಕಥೆಯನ್ನು ಹೇಳಲಿ, ನಂತರ ರಾಜ್ಯದ ರೈತ ಸಂಘದವರನ್ನು ದೂಷಿಸಲಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆಎಸ್ ಪುಟ್ಟಣಯ್ಯ ಗುಡುಗಿದ್ದಾರೆ. id="toptextpromo">ರೈತ
ಸಂಘದ ಸಮಾವೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪುಟ್ಟಣಯ್ಯ ಅವರು, ವಿದೇಶದಲ್ಲಿ ರಹಸ್ಯವಾಗಿ ಅಕ್ರಮ ಹಣ ಇಟ್ಟಿರುವ ಕುಮಾರಸ್ವಾಮಿ ಅವರು ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮಾಜಿ ಪ್ರಧಾನಿ ದೇವೇಗೌಡರ ಪುತ್ರರಾಗಿ ರೈತ ಸಂಘದ ಮೇಲೆ ಅನುಮಾನದ ದೃಷ್ಟಿ ಬೀರುವುದು ಸರಿಯಿಲ್ಲ ಎಂದು ಪುಟ್ಟಣ್ಣಯ್ಯ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಳ್ಳರ
ಸಂತೆಯಾಗಿರುವ ವಿಧಾನಸೌಧ ತನ್ನ ಅರ್ಥವನ್ನು ಕಳೆದುಕೊಂಡಿದೆ.ಕೈದಿಗಳ ಮನ ಪರಿವರ್ತನೆ ಮಾಡಿ ಹನುಮಂತಪ್ಪ ಅವರು ವಿಧಾನ ಸೌಧ ನಿರ್ಮಾಣ ಮಾಡಿದರು. ಆದರೆ ಇಂದು ವಿಧಾನ ಸೌಧವು ಕಳ್ಳರು, ಭ್ರಷ್ಟರಿಂದ ಕೂಡಿದೆ ಎಂದು ಪುಟ್ಟಣ್ಣಯ್ಯ ವಿಷಾದಿಸಿದ್ದಾರೆ.











Click it and Unblock the Notifications